ಅಮೆರಿಕ-ಇಸ್ರೇಲ್ ವಿರೋಧಿ ಅಸ್ತ್ರವಾಗಿದ್ದ ಖಮೇನಿ, ಕೋಟ್ಯಂತರ ಶಿಯಾ ಮುಸ್ಲಿಮರ ಆಶಾಕಿರಣವಾಗಿದ್ದು ಹೇಗೆ? ಇಲ್ಲಿದೆ ಅಸಲಿ ಕಹಾನಿ! | Ayatollah Ali Khamenei

Ayatollah Ali Khamenei |  ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ
Ayatollah Ali Khamenei | ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ
Published on
Ayatollah Ali Khamenei: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನಿಧನ ಕೇವಲ ಒಂದು ದೇಶದ ನಾಯಕನ ಅಂತ್ಯವಲ್ಲ, ಬದಲಾಗಿ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಶಿಯಾ ಮುಸ್ಲಿಮರಿಗೆ ತಮ್ಮ ಧಾರ್ಮಿಕ ಮತ್ತು ನೈತಿಕ ಮಾರ್ಗದರ್ಶಿಯ ಅಗಲಿಕೆಯಾಗಿದೆ ಎಂದು ಸಮುದಾಯದ ಅನೇಕ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಶ್ರೀನಗರದ ಬೀದಿಗಳಿಂದ ಲಕ್ನೋದ ಇಮಾಂಬಾಡಗಳವರೆಗೆ ಅಲ್ಲಾಹು ಅಕ್ಬರ್, ಖಮೇನಿ ರೆಹಬರ್ ಎಂಬ ಘೋಷಣೆಗಳು ಮೊಳಗುತ್ತಿವೆ, ಈ ಶೋಕಾಚರಣೆಯು 1400 ವರ್ಷಗಳ ಹಿಂದಿನ ಕರ್ಬಲಾ ಕದನದ ಸ್ಮರಣೆಯನ್ನು ಸದ್ಯ ಮರುಕಳಿಸುವಂತೆ ಮಾಡಿದೆ.
ಶ್ರೀನಗರದ ಬೀದಿಗಳಲ್ಲಿ ನೆರೆದಿದ್ದ ಸಾವಿರಾರು ಪ್ರತಿಭಟನಾಕಾರರು ಖಮೇನಿ ಹತ್ಯೆಯನ್ನು ಪ್ರವಾದಿ ಮುಹಮ್ಮದ್ ಅವರ ಮೊಮ್ಮಗನ ಹುತಾತ್ಮತೆಗೆ ಹೋಲಿಸುತ್ತಿದ್ದಾರೆ. ಅಯತೊಲ್ಲಾ ಸೈಯದ್ ಅಲಿ ಹುಸೇನಿ ಖಮೇನಿ, ತಮ್ಮ ವಂಶಾವಳಿಯನ್ನು ಇಮಾಮ್ ಹುಸೇನ್​ರೊಂದಿಗೆ ಗುರುತಿಸಿಕೊಳ್ಳುತ್ತಾರೆ.
ಇಮಾಮ್ ಅಲಿ ರಂಜಾನ್ ಮಾಸದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಹತ್ಯೆಗೀಡಾದಂತೆ ಮತ್ತು ಇಮಾಮ್ ಹುಸೇನ್ ನ್ಯಾಯಕ್ಕಾಗಿ ಹೋರಾಡುತ್ತಾ ಹುತಾತ್ಮರಾದಂತೆ, ಖಮೇನಿ ಕೂಡ ರಂಜಾನ್ ಮಾಸದಲ್ಲೇ ಹತ್ಯೆಗೀಡಾಗಿದ್ದಾರೆ. ಈ ಕಾಕತಾಳೀಯವು ಅವರನ್ನು ಮಜ್ಲೂಮ್ (ದಮನಿತ) ನಾಯಕನನ್ನಾಗಿ ಶಿಯಾ ಸಮುದಾಯದ ಕಣ್ಣಲ್ಲಿ ಪ್ರತಿಷ್ಠಾಪಿಸಿದೆ.

ಭಾರತದ ಮುಸ್ಲಿಮರಿಗೇಕೆ ಖಮೇನಿ ಅಂದ್ರೆ ಇಷ್ಟ!..

1980ರಲ್ಲಿ ಖಮೇನಿ ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಶಿಯಾ ಮತ್ತು ಸುನ್ನಿ ಮುಸ್ಲಿಮರ ನಡುವೆ ಐಕ್ಯತೆ ಮೂಡಿಸಲು ಶ್ರಮಿಸಿದ್ದರು. ಶ್ರೀನಗರದ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಸುನ್ನಿ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಅವರು ಸಾಮುದಾಯಿಕ ಸೌಹಾರ್ದತೆಯ ಸಂದೇಶ ನೀಡಿದ್ದರು.
ಭಾರತದ ಸಾವಿರಾರು ಶಿಯಾ ಅನುಯಾಯಿಗಳು ತಮ್ಮ ವಾರ್ಷಿಕ ಉಳಿತಾಯದ 20% ರಷ್ಟು ಭಾಗವನ್ನು ಖುಮ್ಸ್ ರೂಪದಲ್ಲಿ ಖಮೇನಿ ಅಥವಾ ಅವರ ಪ್ರತಿನಿಧಿಗಳಿಗೆ ಸಲ್ಲಿಸುತ್ತಿದ್ದರು. ಇದು ಅವರ ಮೇಲಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿ ಎನ್ನಲಾಗಿದೆ.

ಜನಪ್ರಿಯರಾಗಲು ಇದೇ ಕಾರಣವಂತೆ

ಖಮೇನಿ ಕೇವಲ ಅಧಿಕಾರಕ್ಕೆ ಅಂಟಿಕೊಂಡ ನಾಯಕನಲ್ಲ ಎಂದು ಶ್ರೀನಗರದ ಸಂಸದ ಅಗಾ ರುಹೊಲ್ಲಾ ಮೆಹದಿ ಅಭಿಪ್ರಾಯಪಟ್ಟಿದ್ದಾರೆ. ಅರಬ್ ರಾಷ್ಟ್ರಗಳ ಅನೇಕ ನಾಯಕರು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡು ಶಾಂತಿಯಿಂದ ಬದುಕುವ ದಾರಿ ಆರಿಸಿಕೊಂಡರೆ, ಖಮೇನಿ ಮಾತ್ರ ಗಾಜಾದ ತುಳಿತಕ್ಕೊಳಗಾದ ಜನರ ಪರವಾಗಿ ನಿಂತರು. ಅಧೀನತೆಯನ್ನು ಒಪ್ಪಿಕೊಳ್ಳದೆ, ಇಸ್ರೇಲ್ ಮತ್ತು ಯುಎಸ್ ಶಕ್ತಿಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದ್ದೇ, ಅವರು ಇಷ್ಟೊಂದು ಜನಪ್ರಿಯರಾಗಲು ಕಾರಣ ಎನ್ನುವುದು ಅನೇಕರ ಅಭಿಪ್ರಾಯ.
ಶಿಯಾ ಮುಸ್ಲಿಮರ ವೈಯಕ್ತಿಕ ಜೀವನ, ವ್ಯಾಪಾರ, ನೀತಿಶಾಸ್ತ್ರ, ಕುಟುಂಬ ಕಾನೂನು ಮತ್ತು ಷರಿಯಾ ಪಾಲನೆಯ ವಿಷಯಗಳಲ್ಲಿ ಖಮೇನಿ ತೀರ್ಪುಗಳೇ ಅಂತಿಮವಾಗಿದ್ದವು. ಕ್ಯಾಥೋಲಿಕ್ ಕ್ರಿಶ್ಚಿಯನ್ನರಿಗೆ ಪೋಪ್ ಹೇಗೋ, ಹಾಗೆಯೇ ಬಹುತೇಕ ಶಿಯಾಗಳಿಗೆ ಖಮೇನಿ ಪರಮೋಚ್ಚ ಧಾರ್ಮಿಕ ಗುರುವಾಗಿದ್ದವರು ಖಮೇನಿ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net