ಈ ಘಟನೆ ಬಗ್ಗೆ ಮಾತನಾಡುತ್ತಾ ಕೈಫ್, ಬಾಂಗ್ಲಾದೇಶದ ಯಾವುದೋ ಒಬ್ಬ ಹೊಸ ಹುಡಗ ಮಾಡಿದ್ದಾನೆ ಎಂದರೆ, ಪಾಪ ಆಟಕ್ಕೆ ಹೊಸಬ, ಹುಮ್ಮಸ್ಸಿನಲ್ಲಿ ಮಾಡಿದ್ದಾನೆ ಎನ್ನಬಹುದಿತ್ತು, ಆದರೆ ತಂಡದ ನಾಯಕನೇ ಈ ರೀತಿ ಮಾಡಿದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ತಂಡದ ಮನೋಬಲವನ್ನು ವಿಚಲಿತಗೊಳಿಸುವ ಸಾಧ್ಯತೆಯಿರುವ ಅಂಶವಾಗಿದ್ದು, ನ್ಯಾಯಯುತ ಆಟವಿಲ್ಲದ ಕ್ರೀಡೆ ಕ್ರೀಡೆಯಲ್ಲ ಎಂದು ಮೊಹಮ್ಮದ್ ಕೈಫ್ ತಮ್ಮ ವಿಚಾರವನ್ನು ಮಂಡಿಸಿದ್ದಾರೆ.