More

    ಬಿಎಸ್​ವೈ ಹೆಸರಿನ ನಕಲಿ ಟ್ವಿಟ್ಟರ್ ಖಾತೆ ವಿರುದ್ಧ ಪ್ರಕರಣ ದಾಖಲು

    ಬೆಂಗಳೂರು: ಸಾಮಾಜಿಕ ತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಗೊಂದಲ ಸೃಷ್ಟಿಸುವ ಪ್ರಯತ್ನ ಇಂದು ನಿನ್ನೆಯದಲ್ಲ. ಈ ಸಾಲಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಕಲಿ ಖಾತೆಯೂ ಸೇರಿತ್ತು. ಈಗ ಅದನ್ನು ಸೃಷ್ಟಿಸಿದಾತನ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    ಟ್ವಿಟರ್​ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ ವಿರುದ್ಧ ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಈ ಸಂಬಂಧ ಬಿಎಸ್​ವೈ ಅವರ ಅಧಿಕೃತ ಟ್ವಿಟ್ಟರ್ ಖಾತೆ ನಿರ್ವಹಿಸುತ್ತಿರುವ ಅಕ್ಟೋಬುಝಾ ಅನಾಲಿಟಿಕ್ಸ್ ಪ್ರೈ.ಲಿ. ಸಂಸ್ಥೆಯ ವಿ.ಆನಂದ್ ಮಂಗಳವಾರ ದೂರು ನೀಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ 2 ಲಕ್ಷ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣ ಜಾಸ್ತಿ

    ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಬಿಎಸ್​ವೈ ಹೆಸರಿನಲ್ಲಿ ಟ್ವಿಟರ್​ನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಅಧಿಕೃತ ಖಾತೆಗೆ ಬಳಸಿರುವ ಪ್ರೋಫೈಲ್ ಮತ್ತು ಕವರ್ ಫೋಟೋಗಳನ್ನು ಬಳಸಿದ್ದಾರೆ. ನಕಲಿ ಖಾತೆಯಲ್ಲಿ ಕರ್ನಾಟಕ ಪರೋಡಿಯ ಚಿಪ್ಪು ಮಂತ್ರಿ’ ಎಂದು ಬರೆದಿದ್ದಾರೆ. ಬಿಜೆಪಿ ಶಾಸಕರ ವಿವಾದಾತ್ಮಕ ಪೋಟೋಗಳನ್ನು ಒಳಗೊಂಡಂತೆ ಹಲವಾರು ಅವಹೇಳನಕಾರಿ ಪೋಸ್ಟ್ ಅಪ್​ಲೋಡ್ ಮಾಡಿದ್ದಾರೆ.

    ಮತ್ತೊಂದು ಪೋಸ್ಟ್​ನಲ್ಲಿ ಸಿದ್ದರಾಮಯ್ಯ ನನ್ನನ್ನು ರುಬ್ಬುತ್ತಿದ್ದಂತೆ ನನಗೆ ಜ್ವರ ಮತ್ತು ಶೀತವಿದೆ. ಆದರಿಂದ ನಾನು ಕೆಲವು ದಿನಗಳವರೆಗೆ ಭೂಗತವಾಗಲು ಯೋಚಿಸುತ್ತಿದ್ದೇನೆ ಎಂಬ ಹೇಳಿಕೆ ಪ್ರಕಟಿಸಿ ಅವಹೇಳನ ಮಾಡಿದ್ದು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆನಂದ್ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಬಿಎಸ್​ವೈ ಸಚಿವ ಸಂಪುಟ ವಿಸ್ತರಣೆ ಇನ್ನು ಶೀಘ್ರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts