More

    ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಬಾಕ್ಸರ್‌ಗೆ ಕರೊನಾ ಪಂಚ್​!

    ನವದೆಹಲಿ: ಯಕೃತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್‌ಕೋ ಸಿಂಗ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. 41 ವರ್ಷದ ಡಿಂಗ್‌ಕೋ ಸಿಂಗ್‌ಗೆ ಕರೊನಾ ಸೋಂಕಿರುವುದು ಭಾನುವಾರ ದೃಢಪಟ್ಟಿದೆ. ಅವರು ದೇಶದಲ್ಲಿ ಕರೊನಾ ಸೋಂಕಿತರಾದ ಮೊದಲ ಪ್ರಮುಖ ಕ್ರೀಡಾಪಟುವಾಗಿದ್ದಾರೆ.

    ರೇಡಿಯೇಷನ್ ಚಿಕಿತ್ಸೆಗಾಗಿ ಕಳೆದ ತಿಂಗಳು ಅವರನ್ನು ಲಾಕ್‌ಡೌನ್ ನಡುವೆ ಮಣಿಪುರದಿಂದ ನವದೆಹಲಿಗೆ ಏರ್‌ಲ್‌ಟಿ ಮಾಡಲಾಗಿತ್ತು. ಮಣಿಪುರದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿರದಿದ್ದುದು ಇದಕ್ಕೆ ಕಾರಣ. ಆದರೆ ಚಿಕಿತ್ಸೆಯ ಬಳಿಕ ಮತ್ತೆ ಮಣಿಪುರಕ್ಕೆ ಮರಳಿದಾಗ ಅವರಿಗೆ ಕರೊನಾ ಸೋಂಕು ಬಂದಿದೆ. ದೆಹಲಿಯಿಂದ ಹೊರಡುವಾಗ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ ಮಣಿಪುರಕ್ಕೆ ಬಂದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ ನರ್ಸ್‌ಗೆ ಕರೊನಾ ಬಂದಿತ್ತು. ಅವರಿಂದಲೇ ಡಿಂಗ್‌ಕೋಗೂ ಹರಡಿರಬಹುದು ಎನ್ನಲಾಗಿದೆ.

    ಇದನ್ನೂ ಓದಿ: VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!

    ಮಾಜಿ ಬಾಟಮ್‌ವೇಟ್ ಬಾಕ್ಸರ್ ಆಗಿರುವ ಡಿಂಗ್‌ಕೋ ಸಿಂಗ್ 1998ರ ಬ್ಯಾಂಕಾಕ್ ಏಷ್ಯಾಡ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. ಅರ್ಜುನ ಮತ್ತು ಪದ್ಮಶ್ರೀ ಪುರಸ್ಕೃತರೂ ಆಗಿದ್ದಾರೆ. ಅವರು 2017ರಿಂದಲೂ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಬಾರಿಯ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಂಸಿ ಮೇರಿಕೋಮ್ ಅವರಿಗೂ ಬಾಕ್ಸಿಂಗ್ ರಿಂಗ್ ಪ್ರವೇಶಿಸಲು ಡಿಂಗ್‌ಕೋ ಸಿಂಗ್ ಅವರೇ ಸ್ಫೂರ್ತಿಯಾಗಿದ್ದರು. ಭಾರತೀಯ ನೌಕಾದಳದ ಅಧಿಕಾರಿಯಾಗಿದ್ದ ಡಿಂಗ್‌ಕೋ ಬಾಕ್ಸಿಂಗ್ ಕೋಚ್ ಕೂಡ ಆಗಿದ್ದರು. ಮಣಿಪುರದಲ್ಲಿ ಇದುವರೆಗೆ 71 ಕರೊನಾ ಪ್ರಕರಣ ದಾಖಲಾಗಿದ್ದು, ಒಂದೂ ಸಾವು ಸಂಭವಿಸಿಲ್ಲ.

    ಇದನ್ನೂ ಓದಿ: 1983ರ ಪಾಕಿಸ್ತಾನ ಹಾಕಿ ತಂಡ ಸ್ಮಗ್ಲಿಂಗ್ ಮಾಡಿತ್ತು!

    ಬಂಗಾಳ ರಣಜಿ ಕ್ರಿಕೆಟಿಗನಿಗೆ ಕರೊನಾ
    1989-90ರ ಸಾಲಿನಲ್ಲಿ ರಣಜಿ ಟ್ರೋಫಿ ಪ್ರಶಸ್ತಿ ಜಯಿಸಿದ್ದ ಬಂಗಾಳ ತಂಡದ ಆಟಗಾರ ಸೆನ್‌ಶರ್ಮಗೆ ಕರೊನಾ ಸೋಂಕು ದೃಢಪಟ್ಟಿದೆ. ಬಂಗಾಳದ ಹಾಲಿ ಆಯ್ಕೆಗಾರರೂ ಆಗಿರುವ 54 ವರ್ಷದ ಸೆನ್‌ಶರ್ಮ ಕರೊನಾ ಪಾಸಿಟಿವ್ ಆಗಿರುವುದನ್ನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ಬಹಿರಂಗಪಡಿಸಿದ್ದಾರೆ. ಅವರು ಕರೊನಾ ಸೋಂಕಿತರಾದ ದೇಶದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಸೆನ್ ಶರ್ಮ ಪತ್ನಿಗೆ ಮೊದಲು ಕರೊನಾ ಬಂದಿತ್ತು. ಅವರು ಚೇತರಿಸಿಕೊಂಡ ಬೆನ್ನಲ್ಲೇ ಸೆನ್ ಶರ್ಮ ಕೂಡ ಸೋಂಕಿತರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಮದುವೆಗೂ ಮುನ್ನವೇ ಅಪ್ಪನಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts