More

    ನವಭಾರತಕ್ಕಾಗಿ ಮಿಷನ್​ ಕರ್ಮಯೋಗಿ; ನಾಗರಿಕ ಸೇವಾ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಮ್ಮತಿ

    ನವದೆಹಲಿ: ಕೇಂದ್ರ ಸಚಿವ ಸಂಪುಟ ಸಭೆಯು ‘ಮಿಷನ್​ ಕರ್ಮಯೋಗಿ’ ಯೋಜನೆಗೆ ಸಮ್ಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್​ ತಿಳಿಸಿದ್ದಾರೆ. ಐಎಎಸ್​, ಐಪಿಎಸ್​ ಸೇರಿ ಅಖಿಲ ಭಾರತ ನಾಗರಿಕ ಸೇವಾ ವಲಯದ ನೇಮಕಾತಿ ನಂತರದ ಪ್ರಕ್ರಿಯೆಗಳಲ್ಲಿ ಮಹತ್ತರ ಬದಲಾವಣೆಗೆ ಈ ಯೋಜನೆ ಕಾರಣವಾಗಲಿದೆ ಎಂದೇ ಹೇಳಲಾಗಿದೆ.

    ಈ ಯೋಜನೆಯು ವ್ಯಕ್ತಿಗತ (ಸರ್ಕಾರಿ ಅಧಿಕಾರಿಗಳು) ಹಾಗೂ ಸಾಂಸ್ಥಿಕ ಸಾಮರ್ಥ್ಯ ವರ್ಧನೆಯನ್ನು ಮುಖ್ಯ ಉದ್ದೇಶವಾಗಿಸಿಕೊಂಡಿದೆ. ಮೇಲಸ್ತರದಲ್ಲಿ ಪ್ರಧಾನಿ ನೇತೃತ್ವದಲ್ಲಿ ಮಾನವ ಸಂಪನ್ಮೂಲ ಮಂಡಳಿ (ಎಚ್​ಆರ್​ ಕೌನ್ಸಿಲ್​) ಇರಲಿದೆ. ಇದರಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪರಿಣತರು ಇರಲಿದ್ದಾರೆ ಎಂದು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಕಾರ್ಯದರ್ಶಿ ಸಿ. ಚಂದ್ರಮೌಳಿ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…! 

    ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ನಿಯಮಾಧಾರಿತ ಬದಲು, ಪಾತ್ರವಾಧಾರಿತ ಮಾರ್ಪಾಡು ಇದರಿಂದ ಸಾಧ್ಯವಾಗಲಿದೆ (ರೂಲ್ಸ್​ ಬೇಸ್ಡ್​ ಟು ರೋಲ್​ ಬೇಸ್ಡ್​). ಜತೆಗೆ ಕೆಲಸ ಮಾಡುತ್ತಲೇ ಕಲಿಯುವ ಪ್ರಕ್ರಿಯೆಗೆ ಒತ್ತು ನೀಡಲಿದೆ. ಅಧಿಕಾರಿಗಳ ತರಬೇತಿ ಮತ್ತು ಸಾಮರ್ಥ್ಯವನ್ನು ಒಂದುಗೂಡಿಸುತ್ತದೆ. ತರಬೇತಿ ಕೇಂದ್ರಗಳನ್ನು ಉತ್ಕೃಷ್ಠತಾ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ. ಜತೆಗೆ, ಇ-ಲರ್ನಿಂಗ್​ ಬಗ್ಗೆ ಆದ್ಯತೆ ನೀಡಲಿದೆ.

    ಎಲ್ಲಕ್ಕಿಂತ ಮುಖ್ಯವಾಗಿ ಈ ಯೋಜನೆಯೂ ಅಧಿಕಾರಿಗಳನ್ನು ಹೆಚ್ಚು ಹೊಣೆಗಾರರನ್ನಾಗಿಸುತ್ತದೆ. ಆಯಾ ರಾಜ್ಯಗಳ ಅಗತ್ಯಕ್ಕೆ ಅನುಗುಣವಾಗಿ ಅವರಿಗೆ ತರಬೇತಿ ನೀಡುವ ಅವಕಾಶ ಕಲ್ಪಿಸುತ್ತದೆ. ಅಧಿಕಾರಿಗಳನ್ನು ಹೆಚ್ಚು ಸೃಜನಾತ್ಮಕ, ರಚನಾತ್ಮಕ, ನಾವೀನ್ಯತೆ ಹೊಂದಿದ, ತಾಂತ್ರಿಕತೆ ಅರಿತ ಸಂಪನ್ಮೂಲವನ್ನಾಗಿಸುತ್ತದೆ ಎಂದು ಪ್ರಕಾಶ್​ ಜಾವಡೇಕರ್​ ಹೇಳಿದ್ದಾರೆ.

    ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts