More

    ಕರೊನಾದಿಂದ ವಿಳಂಬವಾಗಿದ್ದ ಸಿಎಎ ಜಾರಿ ಶೀಘ್ರ: ಜೆ.ಪಿ. ನಡ್ಡಾ

    ಕೋಲ್ಕತ: ಮಹಾಮಾರಿ ಕರೊನಾ ವೈರಸ್​ನಿಂದ ವಿಳಂಬವಾಗಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ತಿಳಿಸಿದ್ದಾರೆ. ಸಿಎಎ ಜಾರಿಗೆ ತರುವಲ್ಲಿ ನಮ್ಮ ಪಕ್ಷ ಬದ್ಧವಾಗಿದೆ ಎಂದಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಿಎಎ ಈಗಾಗಲೇ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಎಲ್ಲರೂ ಸಹ ನೂತನ ಕಾಯ್ದೆಯ ಲಾಭವನ್ನು ಪಡೆಯಲಿದ್ದು, ಜಾರಿಗೆ ತರಲು ನಾವು ಸಹ ಬದ್ಧರಾಗಿದ್ದೇವೆ. ಆದರೆ, ಕರೊನಾದಿಂದಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್:​ ಧೋನಿ ವಿರುದ್ಧ ತಿರುಬಿದ್ದ ಟೀಮ್​ ಇಂಡಿಯಾ ಮಾಜಿ ನಾಯಕ!

    ಇದೇ ವೇಳೆ ಕರೊನಾ ಪರಿಸ್ಥಿತಿ ಕುರಿತು ಮಾತನಾಡಿ, ಸದ್ಯದ ಪರಿಸ್ಥಿತಿ ಸುಧಾರಿಸುತ್ತಿದೆ ಮತ್ತು ಕೆಲ ಕಾರ್ಯಗಳಲ್ಲೂ ಆರಂಭವಾಗಿದೆ ಎಂದರು. ಈಗಾಗಲೇ ನಿಯಮಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಸಿಎಎ ದೇಶಾದ್ಯಂತ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಸಿಎಎ ಅಡಿಯಲ್ಲಿ ಅರ್ಹರು ಖಂಡಿತವಾಗಿ ಭಾರತೀಯ ಪೌರತ್ವ ಪಡೆಯಲಿದ್ದಾರೆ ಎಂದರು.

    ಇದೇ ವೇಳೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಹರಿಹಾಯ್ದ ನಡ್ಡಾ, ಇಲ್ಲಿನ ಸರ್ಕಾರ ಒಡೆದ ಆಳುವ ರಾಜಕೀಯ ನೀತಿಯನ್ನು ಅನುಸರಿಸುತ್ತಿದೆ. ಪಕ್ಷದ ರಾಜಕೀಯ ಹಿತಾಶಕ್ತಿಯನ್ನು ಮಾತ್ರ ಹೊಂದಿದ್ದಾರೆಂದು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ ನಡ್ಡಾ, ಬಿಜೆಪಿ ಎಲ್ಲ ಅಭಿವೃದ್ಧಿಯೆಡೆಗೆ ಕೆಲಸ ಮಾಡುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

    ಮನೆಗೆ ನುಗ್ಗಿ ವಿದ್ಯಾರ್ಥಿನಿ ಕೊಲೆ ಪ್ರಕರಣ: ಯುವತಿ ಫೋನ್​ನಲ್ಲಿತ್ತು ಪ್ರಿಯಕರನ ಕುರಿತು ಸ್ಫೋಟಕ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts