More

    ಪ್ರಧಾನಿ ಕೊಲ್ಲೂರು ಭೇಟಿ ಸುಳಿವು ನೀಡಿದ ಬಿವೈಆರ್

    ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದೆ ಯಾವುದಾದರೂ ಒಂದು ದಿನ ಕೊಲ್ಲೂರಿಗೆ ಭೇಟಿ ನೀಡಬೇಕು ಎಂಬುದು ಅಲ್ಲಿನ ಜನರ ಮನವಿ. ಈ ಸಂಗತಿ ಪ್ರಧಾನಿ ಕಚೇರಿಗೆ ತಲುಪಿದೆ. ಅಲ್ಲಿಂದ ನನ್ನ ಕಚೇರಿಗೆ ಫೋನ್ ಮಾಡಿರುವ ಸಿಬ್ಬಂದಿ ಅಗತ್ಯ ಮಾಹಿತಿ ಪಡೆದಿದ್ದಾರೆ ಎಂದಿರುವ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಮೋದಿ ಕೊಲ್ಲೂರು ಭೇಟಿಯ ಸುಳಿವು ನೀಡಿದರು.

    ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆಯೇ ಚುನಾವಣೆ ಕಾವು ಹೆಚ್ಚುತ್ತಿದೆ. ಸ್ವಂತ ಕೆಲಗಳನ್ನು ಬದಿಗೊತ್ತಿ ಯುವಕರು ಮೋದಿಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಭೂತಪೂರ್ವ ವಾತಾವರಣ ಕಾಣಿಸುತ್ತಿದೆ. ಕಾಗಿನೆಲೆಯಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಟಿಕಲ್ 370 ರದ್ದಾದ ಕಾರಣ ಭದ್ರಾವತಿ ಬೂತ್ ಕಾರ್ಯಕರ್ತರು ಪ್ರತಿ ಬೂತ್‌ನಿಂದಲೂ 370 ರೂ. ಹಣ ಸಂಗ್ರಹ ಮಾಡಿ ಠೇವಣಿಗಾಗಿ ನೀಡಿದ್ದಾರೆ. ನಮ್ಮ ಪಕ್ಷಕ್ಕೆ ದೇವೇಗೌಡರಂತಹ ದೊಡ್ಡ ನಾಯಕರ ಆಶೀರ್ವಾದ ಸಿಕ್ಕಿದೆ. ಇದರಿಂದ ನಮ್ಮ ಸಂಘಟನೆಗೆ ಶಕ್ತಿ ಬಂದಿದೆ. ನಮ್ಮ ಯೋಚನೆ, ಅವರ ಯೋಚನೆ ಒಂದೇ ಇದೆ. 18ರಂದು ನಾನು ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಿರುತ್ತಾರೆ ಎಂದರು.
    ಶ್ರೀಗಳಿಂದ ಆಶೀರ್ವಾದ: ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದಲ್ಲಿ ಗುರುವಾರ ಕಾಗಿನೆಲೆ ಕನಕಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಜನ್ಮ ದಿನದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬುಧವಾರ ಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಗೌರವ ಸಮರ್ಪಿಸಿದರು.
    ಈ ವೇಳೆ ಶ್ರೀಗಳು ರಾಘವೇಂದ್ರ ಅವರನ್ನು ಆಶೀರ್ವದಿಸಿದರು. ನಗರಪಾಲಿಕೆ ಮಾಜಿ ಸದಸ್ಯರಾದ ಎಸ್.ಜ್ಞಾನೇಶ್ವರ್, ಮಾಲತೇಶ್, ಐಡಿಯಲ್ ಗೋಪಿ, ಪ್ರಮುಖರಾದ ಭದ್ರಾಪುರ ಫಾಲಾಕ್ಷಪ್ಪ, ಎಸ್.ಬಿ.ರಾಘವೇಂದ್ರ, ಹನುಮಂತಪ್ಪ, ಚನ್ನವೀರಪ್ಪ, ಸುಧೀರ್, ಸೋಮಸುಂದರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts