More

    20ಕ್ಕೆ ದೇಶದಲ್ಲಿ ಬಸ್, ರೈಲು ಸಂಚಾರ ಆರಂಭ?

    ವದೆಹಲಿ: ಕರೊನಾ ಲಾಕ್​ಡೌನ್ ಕಾರಣದಿಂದ ಆಘಾತ ಅನುಭವಿಸಿರುವ ಆರ್ಥಿಕತೆಗೆ ಚೇತರಿಕೆ ತಂದುಕೊಡುವ ಪ್ರಯತ್ನವಾಗಿ ದೇಶದ ಮೆಟ್ರೋ ನಗರಗಳಲ್ಲಿ ಮೇ 20ರಿಂದ ಬಸ್, ಆಟೋ, ಟ್ಯಾಕ್ಸಿ ಹಾಗೂ ರೈಲ್ವೆ ಸೇವೆ ಪುನರಾರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ.

    ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಈ ಸೇವೆಗಳನ್ನು ಆರಂಭಿಸುವ ಸಂಬಂಧ ಚರ್ಚೆ ಆರಂಭವಾಗಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಜೂ.1ಕ್ಕೆ ಸಿನಿಮಾ ಶುರು?: ಜೂ.1ರಿಂದ ಬಹುತೇಕ ನಿರ್ಬಂಧ ಸಡಿಲಿಸುವ ಸಂಬಂಧ ಚಿಂತನೆ ನಡೆದಿದೆ. ಮಾಲ್, ಚಿತ್ರಮಂದಿರ ತೆರೆಯುವ ಜತೆಗೆ, ಸಾರ್ವಜನಿಕ ಸಭೆ, ಸಮಾರಂಭ, ವಿವಾಹ ಕಾರ್ಯಕ್ರಮಕ್ಕೆ ಅವಕಾಶ ಮತ್ತು ಧಾರ್ವಿುಕ ಕೇಂದ್ರಗಳ ತೆರೆಯುವಿಕೆಗೆ ಅನುಮತಿಸುವ ಸಾಧ್ಯತೆ ಇದೆ. ಈ ಸಂಬಂಧ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಜತೆ ಸಮಾಲೋಚಿಸಿ ಕಾರ್ಯಸೂಚಿಯನ್ನು ಅಂತಿಮಗೊಳಿಸುವ ಕಾರ್ಯ ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಬಿಹಾರ, ಒಡಿಶಾ ವಲಸೆ ಕಾರ್ಮಿಕರಿಂದ ಪೊಲೀಸರ ಮೇಲೆ ಕಲ್ಲು ತೂರಾಟ; ಪೀಣ್ಯ ಅಧಿಕಾರಿಗೆ ಗಾಯ

    ಪರಿಸ್ಥಿತಿ ನೋಡಿ ನಿರ್ಧಾರ: ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ತೀವ್ರತೆ ಹಾಗೂ ಚೇತರಿಕೆ ಪ್ರಮಾಣ ನಿಯಂತ್ರಣದಲ್ಲಿದೆ. ಹೀಗಾಗಿ ಮೇ 17ರ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಯಾವುದಕ್ಕೆ ವಿನಾಯಿತಿ ನೀಡಬೇಕು, ನೀಡಬಾರದೆಂಬ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

    ವಾಣಿಜ್ಯ ಚಟುವಟಿಕೆ ಶುರು: ಲಾಕ್​ಡೌನ್-3ನೇ ಹಂತಕ್ಕೆ ಕಾಲಿಟ್ಟ ಭಾರತದಲ್ಲಿ ಸೋಮವಾರ ಬಹುತೇಕ ವಾಣಿಜ್ಯ ಚಟುವಟಿಕೆಗಳು ಆರಂಭವಾಗಿವೆ. ಕಂಟೇನ್​ವೆುಂಟ್ ಪ್ರದೇಶಗಳಲ್ಲಿ ಮಾತ್ರ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದು ಉಳಿದಂತೆ ಸಂಚಾರ, ವ್ಯಾಪಾರ, ವಹಿವಾಟುಗಳಿಗೆ ಅನುಮತಿ ನೀಡಲಾಗಿದೆ.

    ಶೀಘ್ರ 2ನೇ ಪ್ಯಾಕೇಜ್

    ಕರೊನಾದಿಂದಾಗಿ ಸಂಕಷ್ಟ ಎದುರಿಸುತ್ತಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ಇನ್ನೆರಡು ದಿನಗಳಲ್ಲಿ ಎರಡನೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಈ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಷಾ ಜತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈಗಾಗಲೇ ಆರು ಸುತ್ತಿನ ಸಭೆ ನಡೆಸಿದ್ದು, ಪ್ರಧಾನಮಂತ್ರಿ ಕಾರ್ಯಾಲಯ ಕರಡು ಪ್ರಸ್ತಾವನೆ ಸಿದ್ಧಪಡಿಸುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಸರ್ಕಾರ 1.75 ಲಕ್ಷ ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಿಸಿತ್ತು.

    ಇದನ್ನೂ ಓದಿ: ಚೀನಾ ಕೋವಿಡ್​ 19ರ ತೀವ್ರತೆಯನ್ನು ಬೇಕೆಂದೇ ಬಚ್ಚಿಟ್ಟಿತ್ತು: ಅಮೆರಿಕದ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts