More

    ಶ್ರೀ ಕ್ಷೇತ್ರ ದೇವೀರಮ್ಮ ದೇವಾಲಯದಲ್ಲಿ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ

    ಚಿಕ್ಕಮಗಳೂರು: ಮುಜರಾಯಿ ಇಲಾಖೆಯಿಂದ ಚಿಕ್ಕಮಗಳೂರು ತಾಲೂಕಿನ ಬಿಂಡಿಗ-ಮಲ್ಲೇನಹಳ್ಳಿಯಲ್ಲಿ ಫೆ.10 ರಿಂದ 14ರ ವರೆಗೆ ಶ್ರೀ ಕ್ಷೇತ್ರ ದೇವೀರಮ್ಮ ದೇವಸ್ಥಾನದಲ್ಲಿ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.
    ಫೆ.10 ರಂದು ಬೆಳಗ್ಗೆ 7.45ರಿಂದ 8.45ರೊಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅಗ್ರೋದಕ ಗಂಗಾಪೊಜೆ ನಂತರ ಮಹಾ ಸಂಕಲ್ಪ ಶ್ರೀಮಹಾ ಗಣಪತಿ ಪೂಜೆ, ಪುಣ್ಯಾಹ ಶುದ್ಧಿ, ಧ್ಜಜಾರೋಹಣ ನಂತರ ಕಲಶ ಪೂಜಾದಿಗಳು, ಸಹಸ್ರ ಮೋದಕ ಗಣ ಹೋಮ, ಮಹಾ ಮಂಗಳಾರತಿ, ಸಂಜೆ ದೇವತಾ ಪ್ರಾರ್ಥನೆ, ಗಂಗಾರತಿ, ಕಲಶ ಪೂಜಾದಿಗಳು, ದಶದಿಕ್ಪಾಲಕರ ಹೋಮ, ವಾಸ್ತು ಹೋಮ, ದೇವಾಲಯ ಪ್ರಾಕಾರ ಹಾಗೂ ರಾಜಗೋಪುರಕ್ಕೆ ಶಾಂತಿ ಪೂಜೆ ಮತ್ತು ಮಹಾಮಂಗಳಾರತಿ ನಡೆಯಲಿದೆ.
    ಫೆ.11ರಂದು ಬೆಳಗ್ಗೆ 10.45ರಿಂದ 11.45ರೊಳಗೆ ದೇವಿಗೆ ಮಹಾಭಿಷೇಕ, ಕಲಶಾರಾಧನೆ, ಅಭಿಜನ್ ಲಗ್ನದಲ್ಲಿ ದೇವಾಲಯ ರಾಜಗೋಪುರ ಬ್ರಹ್ಮಕಲಶ ಪ್ರತಿಷ್ಟಾಪನೆ ನಂತರ ಮಹಾ ಮೃತ್ಯುಂಜಯ ಹೋಮ, ಮಹಾಮಂಗಳಾರತಿ ನೆರವೇರಲಿದೆ. ಸಂಜೆ ದೇವತಾ ಪ್ರಾರ್ಥನೆ, ಗಂಗಾರತಿ, ಪ್ರಧಾನ ಕಲಶ ಪೂಜೆ, ಮಂಡಲಾರಾಧನೆ ನಂತರ ನವಗ್ರಹ ಹೋಮ, ಶಾಂತಿ ಪೂಜೆ ಮಹಾಮಂಗಳಾರತಿ ನಡೆಯಲಿದೆ. 12ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆದಿಶಕ್ತಿ ಶ್ರೀದೇವಿರಮ್ಮ ದೇವಿಗೆ ಅಖಂಡ ಮಹಾ ಪೂಜೆಗಳು ಅಖಂಡ ಕ್ಷೀರಾಭಿಷೇಕ, ಅಖಂಡ ಕುಂಕುಮಾರ್ಚನೆ, ಅಖಂಡ ಹೋಮ-ಹವನಗಳು, ಅಖಂಡ ವೇದ ಪಾರಾಯಣ, ಅಖಂಡ ಜಪಯಜ್ಞ, ಸಂಜೆ ಮಹಾಮಂಗಳಾರತಿ ನಡೆಯಲಿದೆ.
    13ಕ್ಕೆ ಬೆಳಗ್ಗೆ ದೇವಿಗೆ ಮಹಾಭಿಷೇಕ ಸೇವೆ, ಕಲಶಾರಾಧನೆ, ಸಪ್ತಶತಿ ಚಂಡಿಕಾ ಹೋಮ ಮಧ್ಯಾಹ್ನ ಮಹಾಮಂಗಳಾರತಿ ಸಂಜೆ ದೇವತಾ ಪ್ರಾರ್ಥನೆ, ಗಂಗಾರತಿ, ಪ್ರಧಾನ ಕಲಶ ಪೂಜಾದಿಗಳು, ಮಂಡಲ ದೀಪಾರಾಧನೆ ನಂತರ ಏಕಾದಶ ರುದ್ರಹೋಮ, ಕಲಾಹೋಮ, ಶಾಂತಿ ಪೂಜಾದಿಗಳು ನಡೆಯಲಿದೆ.
    14ರಂದು ಮಲ್ಲೇನಹಳ್ಳಿ ಮುಖ್ಯ ವೃತ್ತದ ಸಮೀಪ ಪವಿತ್ರ ಗಂಗೆ ಬಾವಿಯಲ್ಲಿ ಬೆಳಗ್ಗೆ 6.30ರಿಂದ ಕುಂಭಾಭಿಷೇಕದ ಕಲಶ ಪೂಜೆ ಬೆಳಗ್ಗೆ 7ರಿಂದ ಕುಂಭಾಭಿಷೇಕದ ಕಲಶಗಳ ಭವ್ಯ ಮೆರವಣಿಗೆ ಆರಂಭಗೊಂಡು ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿ ದೇವಾಲಯಕ್ಕೆ ಪ್ರವೇಶ ನಂತರ ಬ್ರಹ್ಮಕುಂಭಾಭಿಷೇಕ, ಜಯಾದಿಹೋಮ, ಮಹಾಪೂರ್ಣಾಹುತಿ, ಸಮರ್ಪಣೆ, ಅಷ್ಟೋತ್ತರ ಕುಂಕುಮಾರ್ಚನೆ ನಡೆಯಲಿದೆ ಎಂದು ಚಿಕ್ಕಮಗಳೂರು ತಹಸೀಲ್ದಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts