More

    ಗದಗ ಜಿಲ್ಲೆಯಲ್ಲಿ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

    ವಿಜಯವಾಣಿ ಸುದ್ದಿಜಾಲ ಗದಗ

    ಕೇಂದ್ರ ಸರ್ಕಾರದ ಕಾರ್ವಿುಕ ನೀತಿ ವಿರೋಧಿಸಿ ಬುಧವಾರ ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

    ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ನಂತರ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್​ಗಳಿಗೆ ಮನವಿ ಸಲ್ಲಿಸಲಾಯಿತು.

    ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಐಬಿಇ, ಬಿಎಸ್​ಎನ್​ಎಲ್​ಆರ್​ಯುು, ಜಿಲ್ಲಾ ಬ್ಯಾಂಕ್ ನೌಕರರ ಸಂಘ, ಕಟ್ಟಡ ಕಾರ್ವಿುಕರ ಸಂಘ, ರೈತ ಪರ ಸೇರಿ ಹತ್ತಾರು ಸಂಘಟನೆಗಳ ಕಾರ್ಯಕರ್ತರು ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬೆಳಗ್ಗೆ 10ರಿಂದಲೇ ಪ್ರತಿಭಟನೆ ನಡೆಸಿದರು.

    ಕಾರ್ವಿುಕರಿಗೆ ಕನಿಷ್ಠ ವೇತನ ನೀಡಬೇಕು, ಸೇವಾ ಭದ್ರತೆ, ಪಿಂಚಣಿ, ಉದ್ಯೋಗ ಹೆಚ್ಚಿಸಬೇಕು, ಬ್ಯಾಂಕ್​ಗಳ ವಿಲೀನ ಕ್ರಮ ಕೈಬಿಡಬೇಕು. ಸಾರ್ವಜನಿಕ ಉದ್ಯಮಗಳನ್ನು ವಿಲೀನ ಮಾಡಬಾರದು. 44 ಕಾರ್ವಿುಕ ಕಾಯ್ದೆ ವಿಲೀನಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಪ್ರತಿಭಟನಾಕಾರರು ಮಾನವ ಸರಪಳಿ ನಿರ್ವಿುಸಿದ್ದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

    ಪೊಲೀಸರು ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.

    ಪ್ರತಿಭಟನೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕು ಎಂದು ಯೋಚಿಸಲಾಗಿತ್ತು. ಆದರೆ, ಸರ್ಕಾರ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದರು.

    ಕಟ್ಟಡ ನಿರ್ಮಾಣ ಕಾರ್ವಿುಕರ ಸಂಘದ ಮಹಾಮಂಡಳ ಜಿಲ್ಲಾಧ್ಯಕ್ಷ ಎಂ.ಐ. ನವಲೂರ, ಕೆಎಸ್​ಆರ್​ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಶಾಂತಣ್ಣ ಮುಳವಾಡ, ಗದಗ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಾಷಾಸಾಬ್ ಮಲ್ಲಸಮುದ್ರ, ಮಕ್ತುಂಸಾಬ್ ನಾಲಬಂದ, ಜಾನಿಸಾಬ್ ಹಣಗಿ, ಜೇಸುದಾಸ ಉಪಸ್ಥಿತರಿದ್ದರು.

    ಬ್ಯಾಂಕ್ ಸಂಘದಿಂದ ಪ್ರತಿಭಟನೆ: ಕೇಂದ್ರ ಸರ್ಕಾರದ ಕಾರ್ವಿುಕರ ವಿರೋಧಿ ನೀತಿ ಖಂಡಿಸಿ ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದಿಂದ ಕೆನರಾ ಬ್ಯಾಂಕ್ ಬಳಿ ಪ್ರತಿಭಟನೆ ನಡೆಸಲಾಯಿತು. ಒಕ್ಕೂಟದ ಅಧ್ಯಕ್ಷ ಉಚ್ಚರಸ್ಚಾಮಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ ಗಂಗಾರಾಹುತರ, ಎಸ್.ಜಿ. ಗಚ್ಚಿನಮಠ, ಸಿದ್ದು, ನಾಗೇಂದ್ರ, ನರಸಿಂಹ, ಇತರರು ಇದ್ದರು.

    ರೈತ ಸಂಘದಿಂದ ಮನವಿ: ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ ಮಾತನಾಡಿದರು. ರೈತ ಮುಖಂಡರಾದ ನಾಗಯ್ಯ ಗುದ್ನೆಪ್ಪನವರ, ಮಹಾದೇವಗೌಡ ಪಾಟೀಲ, ಎಂ.ಬಿ. ಸಂಕನಗೌಡ್ರ, ಹನುಮಂತಪ್ಪ ಹುಲ್ಲೂರ, ಈರಯ್ಯ ರಟ್ಟಿಹಳ್ಳಿ, ರಾಮಣ್ಣ ಸೂಡಿ, ಹನಮಂತಪ್ಪ ಯಾವಗಲ್ಲ, ಇಂದ್ರವ್ವ ಅಬ್ಬಿಗೇರಿ, ಶಂಕ್ರಮ್ಮ ಬಡಿಗೇರ, ಗೋವಿಂದಪ್ಪ ಕಿರಟಗೇರಿ, ಇತರರು ಇದ್ದರು.

    ಬಂದ್ ಆಗಲಿಲ್ಲ ಕಚೇರಿಗಳು: ಜಿಲ್ಲಾದ್ಯಂತ ಮುಷ್ಕರದಿಂದ ಜನಜೀವನಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ. ಶಾಲೆ- ಕಾಲೇಜ್​ಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್​ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದರಿಂದ ವ್ಯಾಪಾರ ವಹಿವಾಟು ಸಹಜ ಸ್ಥಿತಿಯಲ್ಲಿ ನಡೆಯಿತು. ಬಸ್ ಸಂಚಾರ ಸುಗಮವಾಗಿತ್ತು. ನೀರಸವಾಗಿ ಮುಷ್ಕರ ಪೂರ್ಣಗೊಂಡಿತು.

    ಪೊಲೀಸರೊಂದಿಗೆ ಮಾತಿನ ಚಕಮಕಿ: ಮುಂಡರಗಿಯಲ್ಲಿ ಕೇಂದ್ರ ಸರ್ಕಾರದ ಕಾರ್ವಿುಕ ನೀತಿ ವಿರೋಧಿಸಿ ಬುಧವಾರ ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಬ್ಯಾನರ್ ಹಿಡಿದು ಮೆರವಣಿಗೆ ಮಾಡಲು ಮುಂದಾದ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.

    ಪುರಸಭೆ ಉದ್ಯಾನವನದಿಂದ ಪ್ರತಿಭಟನಾಕಾರರು ಬ್ಯಾನರ್ ಹಿಡಿದು ಘೊಷಣೆ ಕೂಗುತ್ತ ಪಟ್ಟಣದ ಬೃಂದಾವನ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಪೊಲೀಸರು ತಡೆದರು. ಪ್ರತಿಭಟನಾ ಮೆರವಣಿಗೆಯಲ್ಲಿ ಬ್ಯಾನರ್ ಹಿಡಿದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ ಎಂದು

    ತಿಳಿಸಿ ಬ್ಯಾನರ್ ಕಸಿದುಕೊಳ್ಳಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನಾಕಾರರು ಬ್ಯಾನರ್ ಹಿಡಿದುಕೊಂಡೇ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರಿಗೆ ಮನವಿ ಸಲ್ಲಿಸಿದರು.

    ಎಸ್​ಎಫ್​ಐ ಜಿಲ್ಲಾಧ್ಯಕ್ಷ ಶಿವಾನಂದ ಬೋಸ್ಲೆ, ಶಂಕರ ದೇವರಮನಿ, ಸಿ.ಬಿ. ಸೆಳಕೆ, ಕೆ.ಜಿ. ಬೀಳಗಿ, ಸುಶೀಲಾ ಚಲವಾದಿ, ರತ್ನಾ ಕಮ್ಮಾರ, ಮಲ್ಲೇಶ ಪ್ಯಾಟಿ, ಪ್ರವೀಣ ಹಮ್ಮಿಗಿ, ಮಲ್ಲೇಶ ಬಳಿಗಾರ, ಕೆ.ಜಿ. ಬೀಳಗಿ, ರೇಣುಕಾ ನವಲಗುಂದ, ಎನ್.ಟಿ. ಲಿಂಗಶೆಟ್ಟರ್, ಎಸ್.ಆರ್. ಹಿರೇಮಠ, ಎನ್.ಕೆ. ಮುಲ್ಲಾ, ಆರ್.ಎಂ. ಮುಲ್ಲಾ, ಡಿ.ಜಿ. ಕುಕನೂರ, ಯು.ಕೆ. ಜೋಳದ, ಫಾತಿಮಾ ಬೆಟಗೇರಿ, ಎಂ.ಎಸ್. ಹಲಗೇರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts