More

    ಬುಕ್ಕಿ ಸೇರಿ 18 ಜೂಜುಕೋರರ ಬಂಧನ, 78 ಸಾವಿರ ರೂ. ನಗದು ವಶ

    ಬೆಳಗಾವಿ: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಓರ್ವ ಬುಕ್ಕಿ ಸೇರಿದಂತೆ 18 ಜೂಜುಕೋರರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಬೈಕ್, ಮೂರು ಮೊಬೈಲ್ ಹಾಗೂ ಒಟ್ಟು 78,270 ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಸ್ಥಳೀಯ ಚನ್ನಮ್ಮ ನಗರದ ನಿವಾಸಿ ಸಂತೋಷ ಶೆಟ್ಟೆಪ್ಪ ರಾಥೋಡ, ಭವಾನಿ ನಗರದ ಅಂಥೋನಿ ವಿಕ್ಟರ್ ಮೆಂಡೊನ್ಸಾ ಹಾಗೂ ಸಹ್ಯಾದ್ರಿ ಕಾಲನಿಯ ಸುನೀಲ ಶರ್ಮಾ, ಬಾಬು ಶಿವಾಜಿ ಜಾಧವ, ವಿನಾಯಕ ಮಾರುತಿ ಬಿರ್ಜೆ ಹಾಗೂ ಜೂಜಾಟದ ಬುಕ್ಕಿ ಅಬ್ಜಲ್ ರೆಹಮತ್ ವುಲ್ಲಾ ಶೇಠ್ ಬಂಧಿತರು. ಸಿಪಿಐ ರಾಘವೇಂದ್ರ ಹವಾಲ್ದಾರ್ ನೇತೃತ್ವದಲ್ಲಿ ವಡಗಾವಿಯ ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿದ ಶಹಾಪುರ ಠಾಣೆ ಪೊಲೀಸ್ ಸಿಬ್ಬಂದಿ 17,070 ರೂ.ವಶಪಡಿಸಿಕೊಂಡರೆ, ಸಿಪಿಐ ವಿನಾಯಕ ಬಡಿಗೇರ ನೇತೃತ್ವದಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ 8,200 ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಉಭಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

    12 ಜನರ ಬಂಧನ: ಬೆಳಗಾವಿ ಗ್ರಾಮೀಣ ಠಾಣೆ ಪಿಐ ಸುನೀಲಕುಮಾರ ನೇತೃತ್ವದಲ್ಲಿ ಸಿಬ್ಬಂದಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ 12 ಜೂಜುಕೋರರನ್ನು ಬಂಧಿಸಿದ್ದು, ಅವರಿಂದ 53,000 ರೂ. ನಗದು ಹಾಗೂ ಮೂರು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಶಹಾಪುರದ ಭಾರತ ನಗರದ ನಿವಾಸಿ ಸಂತೋಷ ಪಾಟೀಲ, ಮಜಗಾವಿಯ ಕಲ್ಮೇಶ್ವರ ನಗರದ ಮಾರುತಿ ಸುತಾರ, ಕ್ಯಾಂಪ್ ಪ್ರದೇಶದ ರಿಯಾಜ್ ಶೇಖ್, ಪಾಟೀಲಗಲ್ಲಿಯ ಪರಶುರಾಮ ಹಲದನಕಾರ, ಹಿಂಡಲಗಾದ ಶಿವಾಜಿ ಲಾಟ್ಕರ್, ಕೆ.ಎಚ್.ಕಂಗ್ರಾಳಿಯ ರವಿ ಪಾಟೀಲ, ಪಾಟೀಲ ಮಾಳದ ನಜೀರ್ ಪಠಾಣ, ಶಾಸ್ತ್ರಿ ನಗರದ ಪ್ರಭಾಕರ ಕಾರೆಕಾರ, ಹಲಗಾದ ವಿಜಯ ಕಮಾಲ, ಗೂಡ್‌ಶೆಡ್ ರಸ್ತೆಯ ನಿವಾಸಿ ವಿಜಯ ನಾಯ್ಡು, ಲೋಂಡಾದ ಇಕ್ಬಾಲ್ ಶೇಖ್ ಹಾಗೂ ಬಿ.ಕೆ.ಕಂಗ್ರಾಳಿಯ ಸತ್ತೆಪ್ಪ ಬುಡ್ರೆನವರ ಬಂಧಿತರು.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts