ಜನರನ್ನು ಥಿಯೇಟರ್‌ಗೆ ತರೋ ತಾಕತ್ತು ನಿಮಗಿಲ್ಲ: ರಣವೀರ್ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ; ಒಕ್ಕೂಟದ ವಿರುದ್ಧ ಆರ್ಜಿವಿ ಕೆಂಡ! Ram Gopal Varma on Ranveer Singh
ನಟ ರಣವೀರ್ ಸಿಂಗ್ ಪರ ನಿಂತ ರಾಮ್ ಗೋಪಾಲ್ ವರ್ಮಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾನ್ 3 ಸಿನಿಮಾದಿಂದ ಹೊರನಡೆದ ರಣವೀರ್ ಸಿಂಗ್
ಬಾಲಿವುಡ್ ಕಾರ್ಮಿಕ ಒಕ್ಕೂಟದಿಂದ ರಣವೀರ್ಗೆ ಬ್ಯಾನ್
ನಿಮಗೆ ಥಿಯೇಟರ್‌ಗೆ ಜನರನ್ನು ಕರೆತರುವ ತಾಕತ್ತಿದೆಯೇ? ಆರ್ಜಿವಿ ಪ್ರಶ್ನೆ
ನಟ ರಣವೀರ್ ಸಿಂಗ್ ಪರ ನಿಂತ ರಾಮ್ ಗೋಪಾಲ್ ವರ್ಮಾ
ಮುಂಬೈ: ಫರ್ಹಾನ್ ಅಖ್ತರ್ ನಿರ್ದೇಶನದ ಡಾನ್ 3 ಸಿನಿಮಾದಿಂದ ನಟ ರಣವೀರ್ ಸಿಂಗ್ ಹೊರಬಿದ್ದ ಹಿನ್ನಲೆ ಬಾಲಿವುಡ್ನ ಕಾರ್ಮಿಕರ ಒಕ್ಕೂಟ ನಟನ ಮೇಲೆ ನಿಷೇಧ ಹೇರಿರುವ ಸುದ್ದಿ ದೇಶದಾದ್ಯಂತ ಸುದ್ದಿಯಾಗುತ್ತಿದೆ.
ಆದರೆ ಈ ಬ್ಯಾನ್ಗೆ ಬಾಲಿವುಡ್ನಲ್ಲಿಯೇ ಅಸಮಾಧಾನ ಕೇಳಿಬರುತ್ತಿದ್ದು, ಹಿರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma on Ranveer Singh) ಈ ನಿಷೇಧವನ್ನು ಆದಷ್ಟು ಬೇಗ ಹಿಂಪಡೆಯಬೇಕೆಂದು ಹೇಳಿಕೆ ನೀಡಿದ್ದಾರೆ.
ರಣವೀರ್ ಮೇಲೆ ನಿಷೇಧ ಹೇರಿರುವ ಫೆಡರೇಶನ್ ಆ ವೆಸ್ಟೆರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಒಕ್ಕೂಟದ ಮೇಲೆ ಕಿಡಿ ಕಾರಿತುವ ಆರ್ಜಿವಿ, ನಟನ ಮೇಲೆ ಈ ಒಕ್ಕೂಟ ಹೇರಿರುವ ನಿಷೇಧ ನನಗೆ ಹಾಸ್ಯಾತ್ಮಕವಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಈ FWICE ಗೆ ಯಾವುದೇ ಕಾನೂನು ಮಾನ್ಯತೆಯಿಲ್ಲ, ಬಾಲಿವುಡ್ನಲ್ಲಿ ತನ್ನ ಅಸ್ತಿತ್ವವನ್ನು ಪ್ರದರ್ಶಿಸುವ ಸಲುವಾಗಿ ಈ ಬ್ಯಾನ್ ಎಂಬ ನಾಟಕವಾಡುತ್ತಿದೆ. ಇದರಿಂದ ಚಿತ್ರರಂಗಕ್ಕೆ ಅನಾನುಕೂಲವೇ ಹೊರತು ರಣವೀರ್ ಸಿಂಗ್ಗೆ ಏನು ತೊಂದರೆಯಾಗುವುದಿಲ್ಲ ಎಂದು ನಿರ್ದೇಶಕ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಣವೀರ್ ಒಂದು ಸಿನಿಮಾ ಮಾಡಿದರೆ, ಅಲ್ಲಿ ನಿಮ್ಮ ಒಕ್ಕೂಟದ ಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ಕೆಲಸ ಮಾಡಿದರೆ ಮಾತ್ರ ಹಣಗಳಿಸಬಹುದು. ಆ ಹಣದಿಂದಲೇ ನಿಮ್ಮ ಮನೆ ನಿರ್ವಹಣೆಯಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಜನರನ್ನು ಥಿಯೇಟರ್‌ಗೆ ತರುವ ತಾಕತ್ತು ನಿಮಗಿಲ್ಲ!
ಜನ ಈಗ ಸಿನಿಮಾ ಥಿಯೇಟರ್ಗಳಿಗೆ ಬರುವುದನ್ನೇ ನಿಲ್ಲಿಸಿದ್ದು. ರಣವೀರ್ ನಟಿಸಿದ ಧುರಂಧರ್ ಸಿನಿಮಾದಿಂದ ಜನ ಮತ್ತೆ ಥಿಯೇಟರ್ ನತ್ತ ಮುಖ ಮಾಡಿದ್ದಾರೆ. ಹಾಗೆಯೇ ಜನರನ್ನು ಸಿನಿಮಾ ಮಂದಿರಗಳಿಗೆ ಕರೆತರುವ ತಾಕತ್ತಿರುವುದು ಸ್ಟಾರ್ ನಟರಿಗೆ ಹೊರತು ನಿಮ್ಮಂತ ಒಕ್ಕೂಟಗಳಿಗಲ್ಲ ಎಂದು ರಾಮ್ ಗೋಪಾಲ್ ವರ್ಮಾ ನೇರವಾಗಿ ದಾಳಿ ಮಾಡಿದ್ದಾರೆ.
ಸಿನಿಮಾ ಕುರಿತಾದ ವಿವಾದವೆನೇ ಇದ್ದರು ಅದನ್ನು ನಿರ್ದೇಶಕ, ನಿರ್ಮಾಪಕ ಹಾಗೂ ನಟ ಸರಿಪಡಿಸಿಕೊಳ್ಳುತ್ತಾರೆ. ಅದರಲ್ಲಿ ಈ ಒಕ್ಕೂಟಗಳ ಮಧ್ಯಪ್ರವೇಶ ಸೂಕ್ತವಲ್ಲ ಎಂದು ಹಿರಿಯ ನಿರ್ದೇಶಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ, (ಏಜನ್ಸೀಸ್).