ಗಂಡನ ಮಾತು ಕೇಳಿ ಕಣ್ಣೀರಿಟ್ಟ ಪತ್ನಿ: ವೈರಲ್ ಆಗುತ್ತಿದೆ ರಿತೇಶ್-ಜೆನೆಲಿಯಾ ದಂಪತಿಯ ಭಾವುಕ ವಿಡಿಯೋ! Riteish-Genelia
ಪತಿ ರಿತೇಶ್ ದೇಶ್ಮುಖ್ ಮಾತನ್ನು ಕೇಳಿ ಕಣ್ಣೀರಿಟ್ಟ ಪತ್ನಿ ಜೆನೆಲಿಯಾ ದೇಶ್ಮುಖ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಂಬೈನಲ್ಲಿ ನಡೆದ ರಾಜಾ ಶಿವಾಜಿ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ
ಪತಿ ರಿತೇಶ್ ದೇಶ್ಮುಖ್ ಮಾತನ್ನು ಕೇಳಿ ಕಣ್ಣೀರಿಟ್ಟ ಪತ್ನಿ ಜೆನೆಲಿಯಾ ದೇಶ್ಮುಖ್
ದಂಪತಿಗಳಿಬ್ಬರ ಭಾವುಕ ವಿಡಿಯೋ ವೈರಲ್
ಮುಂಬೈ: ಬಾಲಿವುಡ್ನಲ್ಲಿರುವ ಮಾದರಿ ಹಾಗೂ ಎಲ್ಲಾ ಜನರು ಇಷ್ಟ ಪಡುವ ದಂಪತಿಗಳೆಂದರೆ ಅದು, ರಿತೇಶ್- ಜೆನೆಲಿಯಾ (Riteish-Genelia) ಜೋಡಿ. ಈ ಇಬ್ಬರು ಒಬ್ಬರನೊಬ್ಬರು ಇಷ್ಟಪಟ್ಟು, ಮನೆಯವರನ್ನು ಒಪ್ಪಿಸಿ, ಮದುವೆಯಾಗಿ ಈಗ ಇಬ್ಬರು ಮಕ್ಕಳ ಯಶಸ್ವಿ ಪಾಲಕರಾಗಿದ್ದಾರೆ.
ಆದರೆ, ಇತ್ತೀಚೆಗೆ ರತೇಶ್ ನಟನೆಯ ರಾಜಾ ಶಿವಾಜಿ ಸಿನಿಮಾದ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ಈ ದಂಪತಿಗಳಿಬ್ಬರು ಭಾವುಕರಾದ ಕ್ಷಣ ಕ್ಯಾಮರಾದ ಕಣ್ಣಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಗಂಡನ ಮಾತನ್ನು ಕೇಳಿ ಭಾವುಕಳಾದ ಪತ್ನಿ!
ರಾಜಾ ಶಿವಾಜಿ ಸಿನಿಮಾದ ಟ್ರೇಲರ್ ಲಾಂಚ್ನಲ್ಲಿ ರಿತೇಶ್, ತನ್ನ ತಂಡವನ್ನು ಮತ್ತು ಈ ಸಿನಿಮಾ ನಿರ್ಮಾಣವಾಗುವಾಗ ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಲಾರಂಭಿಸಿದಾಗ, ಪತ್ನಿ ಜೆನೆಲಿಯಾ ಕಣ್ಣಲ್ಲಿ ನೀರನ್ನು ತುಂಬಿಕೊಂಡವು. ನಂತರ ಟಿಶ್ಯೂ ಪೇಪರ್ನಲ್ಲಿ ಕಣ್ಣನ್ನು ಒರೆಸಿಕೊಂಡು ವೇದಿಕೆ ಮೇಲೆ ನಿಂತುಕೊಂಡರು.
ಪತ್ನಿ ಅಳುತ್ತಿರುವುದನ್ನು ಕಂಡ ಪತಿ ರಿತೇಶ್ ಕೂಡ ಭಾವುಕರಾಗಿ ಕಣ್ಣೀರನ್ನು ಸುರಿಸಿದರು. ಈ ಸಿನಿಮಾ ನಿರ್ಮಾಣಕ್ಕಾಗಿ ದುಡಿದ ಸರ್ವರಿಗೂ ಹ್ರದಯಾಳದಿಂದ ಧನ್ಯವಾದ ಎಂದು ಹೇಳಿದರು.
ರಾಜಾ ಶಿವಾಜಿ ಬಗ್ಗೆ
ರಾಜಾ ಶಿವಾಜಿ ಇದು ಈ ವರ್ಷದ ಬಹು ನೀರಿಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, ಈ ಚಲನಚಿತ್ರದಲ್ಲಿ ರಿತೇಶ್ ದೇಶ್ಮುಖ್, ಅಭಿಷೇಕ್ ಬಚ್ಚನ್, ವಿದ್ಯಾ ಬಾಲನ್, ಮಹೇಶ್ ಮಾಂಜ್ರೆಕರ್ ಮತ್ತು ಜೆನೆಲಿಯಾ ದೇಶ್ಮುಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಹಾಗೂ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಹ ಕಾಣಿಸಿ ಕೊಳ್ಳಲಿದ್ದಾರೆಂದು ಹೇಳಲಾಗುತ್ತಿದ್ದು, ಯಾವ ಪಾತ್ರದಲ್ಲಿ ಭಾಯ್ಜಾನ್ ಮಿಂಚಲಿದ್ದಾರೆ ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಈ ಸಿನಿಮಾವು ಮರಾಠರ ಆರಾಧ್ಯ ದೈವ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಸಿನಿಮಾವಾಗಲಿದ್ದು, ಇದನ್ನು ಜಿಯೋ ಸ್ಟುಡಿಯಯೋಸ್ ಮತ್ತು ಮುಂಬೈ ಫಿಲ್ಮ್ ಕಂಪನಿ ನಿರ್ಮಿಸಿದ್ದಾರೆ.
ಜ್ಯೋತಿ ದೇಶಪಾಂಡೆ ಹಾಗೂ ಜೆನೆಲಿಯಾ ದೇಶ್ಮುಖ್ ಈ ಸಿನಿಮಾದ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದು, ಈ ಚಲನಚಿತ್ರವು ಮಹಾರಾಷ್ಟ್ರ ರಾಜ್ಯ ನಿರ್ಮಾಣ ದಿನವಾದ ಮೇ 1 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ, (ಏಜನ್ಸೀಸ್).