ಶಿಲ್ಪಾ ಶೆಟ್ಟಿ ಒಡೆತನ ರೆಸ್ಟೋರೆಂಟ್​ನಲ್ಲಿ ಒಂದು ಪ್ಲೇಟ್​ ನೂಡಲ್ಸ್​ ಬೆಲೆ ಕೇಳಿದ್ರೆ ನೀವು ಬೆರಗಾಗ್ತೀರಾ! Shilpa Shetty ​​

ಶಿಲ್ಪಾ ಶೆಟ್ಟಿ ಒಡೆತನ ರೆಸ್ಟೋರೆಂಟ್​ನಲ್ಲಿ ಒಂದು ಪ್ಲೇಟ್​ ನೂಡಲ್ಸ್, ಫ್ರೆಂಚ್​ ಫ್ರೈಸ್​ ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ! Shilpa Shetty ​​
ಶಿಲ್ಪಾ ಶೆಟ್ಟಿ ಒಡೆತನ ರೆಸ್ಟೋರೆಂಟ್​ನಲ್ಲಿ ಒಂದು ಪ್ಲೇಟ್​ ನೂಡಲ್ಸ್, ಫ್ರೆಂಚ್​ ಫ್ರೈಸ್​ ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ! Shilpa Shetty ​​
Published on

ಪ್ರಮುಖ ಮುಖ್ಯಾಂಶಗಳು

  • ಬಾಸ್ಟಿಯನ್' ಎಂಬುದು ವಾಣಿಜ್ಯ ನಗರಿ ಮುಂಬೈನಲ್ಲಿರುವ ಅತ್ಯಂತ ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಒಂದು
  • ಇದು ಬಾಲಿವುಡ್​ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಒಡೆತನದ ಐಷಾರಾಮಿ ರೆಸ್ಟೋರೆಂಟ್
  • ತನ್ನ ದುಬಾರಿ ಆಹಾರ ಮೆನುವಿನ ಕಾರಣಕ್ಕೆ ಈ ರೆಸ್ಟೋರೆಂಟ್​ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ
  • ಐಷಾರಾಮಿ ಜೀವನ ನಡೆಸುವವರು ಮಾತ್ರ ಈ ರೆಸ್ಟೋರೆಂಟ್​ ಪ್ರವೇಶ ಮಾಡಲು ಸಾಧ್ಯ
Shilpa Shetty : 'ಬಾಸ್ಟಿಯನ್' ಎಂಬುದು ವಾಣಿಜ್ಯ ನಗರಿ ಮುಂಬೈನಲ್ಲಿರುವ ಅತ್ಯಂತ ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಒಂದು. ಇದು ಬಾಲಿವುಡ್​ ನಟಿ ಹಾಗೂ ಕನ್ನಡತಿ ಶಿಲ್ಪಾ ಶೆಟ್ಟಿ ಒಡೆತನದ ಐಷಾರಾಮಿ ರೆಸ್ಟೋರೆಂಟ್. ಇದೀಗ ತನ್ನ ದುಬಾರಿ ಆಹಾರ ಮೆನುವಿನ ಕಾರಣಕ್ಕೆ ಈ ರೆಸ್ಟೋರೆಂಟ್​ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಹೌದು, ಬಾಸ್ಟಿಯನ್‌ನಲ್ಲಿ ಊಟ ಮಾಡಿದ ಕೆಲವರು ಕಳೆದ ವರ್ಷದಿಂದ ತಮ್ಮ ಬಿಲ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಳ್ಳುತ್ತಲೇ ಇದಾರೆ. ಅಲ್ಲಿನ ಊಟದ ಬೆಲೆಗಳನ್ನು ನೋಡಿ ನೆಟ್ಟಿಗರು ತಮ್ಮ ಹುಬ್ಬೇರಿಸುತ್ತಿದ್ದಾರೆ. ಏಕೆಂದರೆ, ಸಾಮಾನ್ಯ ಜನರು ಮಾತ್ರ ಈ ರೆಸ್ಟೋರೆಂಟ್​ನಲ್ಲಿ ಊಟ ಮಾಡಲಾಗದು. ಇಲ್ಲೇನಿದ್ರೂ ಐಷಾರಾಮಿ ಜೀವನ ನಡೆಸುವವರು ಮಾತ್ರ ರೆಸ್ಟೋರೆಂಟ್​ ಪ್ರವೇಶ ಮಾಡಬಹುದು.
ಮುಂಬೈನಲ್ಲಿ ಬಾಸ್ಟಿಯನ್ ಅನ್ನು ಪ್ರೀಮಿಯಂ ಫೈನ್-ಡೈನಿಂಗ್ ರೆಸ್ಟೋರೆಂಟ್ ಎಂದು ಕರೆಯಲಾಗುತ್ತದೆ. ಇದು ಐಷಾರಾಮಿ ಸೌಲಭ್ಯಗಳ ಜೊತೆಗೆ ರುಚಿಕರವಾದ ಸಮುದ್ರಾಹಾರವನ್ನು ಸಹ ನೀಡುತ್ತದೆ. ಅದರ ಆಕರ್ಷಕ ವಾತಾವರಣದಿಂದಾಗಿ ಅನೇಕ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಐಷಾರಾಮಿ ಸ್ಥಳವಾಗಿರುವುದರಿಂದ, ಅಲ್ಲಿನ ಆಹಾರದ ಬೆಲೆಗಳು ಸಹ ಪ್ರೀಮಿಯಂ ಆಗಿರುತ್ತವೆ.
ಬಾಸ್ಟಿಯನ್‌ನಲ್ಲಿ ತಿಂದ ಕೆಲವರು ತಮ್ಮ ಬಿಲ್ ಅನ್ನು ಹಂಚಿಕೊಂಡಿದ್ದಾರೆ. ಕೇವಲ ನಾಲ್ಕು ಜನರಿಗೆ 21,731 ರೂ. ಬಿಲ್​ ಆಗಿದೆ. ಅದರಲ್ಲೂ ಚಿಕನ್ ನೂಡಲ್ಸ್ ಬೆಲೆ ಕೇಳಿದ್ರೆ ತಲೆ ತಿರುಗುತ್ತದೆ. ಏಕೆಂದರೆ, ಒಂದು ಪ್ಲೇಟ್​ ಚಿಕನ್​ ನೂಡಲ್ಸ್​ ಬೆಲೆ 950 ರೂಪಾಯಿ. ಇದನ್ನು ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. 950 ರೂಪಾಯಿಯಲ್ಲಿ ಮೂರು ಕೆಜಿಗೂ ಅಧಿಕ ಚಿಕನ್​ ಖರೀದಿ ಮಾಡಬಹುದು ಎಂದು ಹೇಳುತ್ತಿದ್ದಾರೆ.
ಅಲ್ಲಿನ ದುಬಾರಿ ಬೆಲೆ ಚಿಕನ್​ ನೂಡಲ್ಸ್​ಗೆ ನಿಲ್ಲುವುದಿಲ್ಲ, ಫ್ರೆಂಚ್ ಫ್ರೈಸ್ ಬೆಲೆ ಕೂಡ ದುಬಾರಿಯಾಗಿದೆ. ಒಂದು ಪ್ಲೇಟ್​ ಫ್ರೆಂಚ್​ ಫ್ರೈಸ್​ ಬೆಲೆ 1450 ರೂಪಾಯಿ. ಆದರೆ, ಸಾಮಾನ್ಯ ಹೋಟೆಲ್​ಗಳಲ್ಲಿ ಫ್ರೆಂಚ್​ ಫ್ರೈಸ್​ ಬೆಲೆ 100 ರಿಂದ 200 ರೂ. ಒಳಗೆ ಇದೆ. ಆದರೆ, ಶಿಲ್ಪಾ ಶೆಟ್ಟಿ ಅವರ ರೆಸ್ಟೋರೆಂಟ್​ನಲ್ಲಿ 6 ಪಟ್ಟು ಹೆಚ್ಚಿಗೆ ಎಂದು ಹೇಳಬಹುದು. ಇದನ್ನು ನೋಡಿದವರು ಈ ರೆಸ್ಟೋರೆಂಟ್​ ನಮ್ಮಂಥ ಸಾಮಾನ್ಯ ಜನರಿಗಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಅಂದಹಾಗೆ, ಬಾಸ್ಟಿಯನ್ ರೆಸ್ಟೋರೆಂಟ್ ಒಂದು ದಿನದಲ್ಲಿ 2 ರಿಂದ 3 ಕೋಟಿ ರೂ. ವಹಿವಾಟು ನಡೆಸುತ್ತದೆ ಎನ್ನಲಾಗಿದೆ. ಸಾಮಾನ್ಯ ದಿನಗಳಲ್ಲಿ 2 ಕೋಟಿ ರೂ. ಮತ್ತು ವಾರಾಂತ್ಯದಲ್ಲಿ 3 ಕೋಟಿ ರೂ.ಗಳವರೆಗೆ ಗಳಿಸುತ್ತದೆ ಎಂಬ ವರದಿ ಇದೆ. 1400 ಕ್ಕೂ ಹೆಚ್ಚು ಅತಿಥಿಗಳು ಅಲ್ಲಿ ತಂಗಬಹುದು. ಏಕಕಾಲದಲ್ಲಿ 700 ಜನರಿಗೆ ಊಟ ಮಾಡಲು ಅವಕಾಶ ಕಲ್ಪಿಸಬಹುದು ಎಂದು ಹೇಳಲಾಗುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net