ಪಾಡ್ಕಾಸ್ಟ್ನಲ್ಲಿ ಸಂದರ್ಶಕ ಈ ನಕಲಿ ಮೀಸೆಯ ವಿಷಯ ಎತ್ತಿದಾಗ ಅಕ್ಷಯ್ ಕುಮಾರ್, ನಾನು ಆ ಸಮಯದಲ್ಲಿ ಹಲವಾರು ಸಿನಿಮಾಗಳಲ್ಲಿ ನಿರತನಾಗಿದ್ದೆ, ಒಂದೇ ಸಿನಿಮಾಗೆ ನನ್ನ ಶೇ.100 ಕೊಡಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಆ ಪಾತ್ರಕ್ಕೆ ಬೇಕಾದ ರೀತಿಯ ಮೀಸೆ ನನ್ನ ಮುಖದ ಮೇಲೆ ನೈಸರ್ಗಿಕವಾಗಿ ಬೆಳೆಯದ ಕಾರಣ, ಕೃತಕ ಮೀಸೆಯನ್ನು ಬಳಸಿಕೊಳ್ಳಲಾಯಿತು. ಈ ಪಾತ್ರ ಜನರಿಗೆ ಇಷ್ಟವಾಗಿಲ್ಲ ಅಂದರೆ ನಾನು ಖಂಡಿತವಾಗಿ ಕ್ಷಮೆ ಕೇಳುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.