ಶಾರುಖ್ ಖಾನ್ ದಾಖಲೆ ಬ್ರೇಕ್; ಬಾಲಿವುಡ್‌ನ ಈ ನಟನೇ ಈಗ ಅಸಲಿ ಬಾಕ್ಸ್ ಆಫೀಸ್ ಸುಲ್ತಾನ್! Akshaye Khanna

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಹಿರಿಯ ನಟ ಅಕ್ಷಯ್​ ಖನ್ನಾ 2025ರಲ್ಲಿ ತಮ್ಮ ಚಿತ್ರಗಳ ಮೂಲಕ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ
  • 2000 ಕೋಟಿಗೂ ಅಧಿಕ ಗಳಿಕೆ ಮಾಡಿದ 2ನೇ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದ ಖನ್ನಾ!
  • ಛಾವಾ ಚಿತ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಗಿ ನಟಿಸಿದ ಅಕ್ಷಯ್​ ಖನ್ನಾ
Akshaye Khanna: ಬಾಲಿವುಡ್‌ನ ಹಿರಿಯ ನಟ ಅಕ್ಷಯ್​ ಖನ್ನಾ 2025ರಲ್ಲಿ ತಮ್ಮ ಚಿತ್ರಗಳ ಮೂಲಕ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 2000 ಕೋಟಿಗೂ ಅಧಿಕ ಗಳಿಕೆ ಮಾಡಿದ ಎರಡನೇ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಗೆ ಮೊದಲು ಶಾರುಖ್​ ಖಾನ್​ ಮಾತ್ರ ಹೆಸರುವಾಸಿಯಾಗಿದ್ದರು.

ಬಾಕ್ಸ್ ಆಫೀಸ್​ನಲ್ಲಿ ಅಕ್ಷಯ್ ಖನ್ನಾ ಜಯಭೇರಿ!

ಲಕ್ಷ್ಮಣ್ ಉಟೇಕರ್ ಅವರ ಛಾವಾ ಚಿತ್ರದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಗಿ ಅಕ್ಷಯ್ ಪಾತ್ರ ಮಾಡಿದರು. ಈ ಚಿತ್ರದಲ್ಲಿ ವಿಕ್ಕಿ ಕೌಶಲ್​ ನಾಯಕ ನಟನಾಗಿದ್ದು, ಜನವರಿ 2025 ರಲ್ಲಿ ಬಿಡುಗಡೆಯಾದ ನಂತರ ವಿಶ್ವಾದ್ಯಂತ 809 ಕೋಟಿ ಬಾಚಿಕೊಂಡಿತು. ಈ ಚಿತ್ರವು ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದ್ದು, ಅಕ್ಷಯ್​ ಅವರ ನಟನೆಗೆ ಹಲವಾರು ಜನರಿಂದ ಪ್ರಶಂಸೆ ಪಡೆದಿದ್ದಾರೆ.
ಇದಾದ ಬಳಿಕ ಡಿಸೆಂಬರ್‌ನಲ್ಲಿ, ರಣವೀರ್ ಸಿಂಗ್ ಅಭಿನಯದ ಧುರಂಧರ್​ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ರೆಹಮಾನ್ ದಕೈತ್ ಅಕ್ಷಯ್​ ಕಾಣಿಸಿಕೊಂಡಿದ್ದು, ಅನೇಕರ ಮೆಚ್ಚುಗೆಯನ್ನು ಗಳಿಸಿದರು. ಬಾಯಿ ಮಾತಿನಿಂದ ಉತ್ತೇಜನ ಪಡೆದ ಈ ಚಿತ್ರವು ಅಂತಿಮವಾಗಿ ದೇಶೀಯವಾಗಿ ಅತ್ಯಂತ ಯಶಸ್ವಿ ಹಿಂದಿ ಚಿತ್ರವಾಯಿತು. ಇಲ್ಲಿಯವರೆಗೆ ಧುರಂಧರ್​ ವಿಶ್ವಾದ್ಯಂತ 1,167 ಕೋಟಿ ಗಳಿಸಿದೆ. ಆದಾಗ್ಯೂ, ಶನಿವಾರದ ಅಂತ್ಯದ ವೇಳೆಗೆ 25 ಕೋಟಿಗೂ ಹೆಚ್ಚು ಹಣ ಗಳಿಸುವ ನಿರೀಕ್ಷೆ ಇದ್ದು, ಅಕ್ಷಯ್ ಖನ್ನಾ ನಟಿಸಿದ ಎರಡು ಚಿತ್ರಗಳು ಒಂದೇ ವರ್ಷದಲ್ಲಿ 2001 ಕೋಟಿ ಗಳಿಸಿರುವುದಾಗಿ ಮಾಹಿತಿ ಸಿಕ್ಕಿದೆ.

ಶಾರುಖ್​ ಖಾನ್‌ ನಂತರ ಎರಡನೆಯ ಭಾರತೀಯ ನಟ ಖನ್ನಾ!

ಒಂದು ವರ್ಷದಲ್ಲಿ 2000 ಕೋಟಿಗಿಂತ ಹೆಚ್ಚು ಹಣ ಗಳಿಸಿದ ಇತರ ಭಾರತೀಯ ನಟ ಶಾರುಖ್ ಖಾನ್ , 2023 ರಲ್ಲಿ ಅವರು ಈ ಸಾಧನೆ ಮಾಡಿದರು. ಆ ವರ್ಷ ಅವರ 3 ಚಿತ್ರಗಳಾದ ಪಠಾಣ್, ಜವಾನ್ ಮತ್ತು ಡಂಕಿ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆಯಾಗಿ 2,685 ಕೋಟಿ ಗಳಿಸಿದವು. ಅದೇ ವರ್ಷ ಆಮಿರ್ ಖಾನ್ ದಂಗಲ್​ ಚಿತ್ರದಲ್ಲಿ 2070 ಕೋಟಿ ಗಳಿಸಿತ್ತು.
ಪ್ರಭಾಸ್ ಅವರ ಬಾಹುಬಲಿ 2 ಮತ್ತು ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ತಲಾ 1700 ಕೋಟಿ ಗಳಿಸಿದ್ದು, ಈ ಇಬ್ಬರೂ ನಟರು ಈ ಮೈಲಿಗಲ್ಲಿನ ಸಮೀಪಕ್ಕೆ ಬಂದಿದ್ದಾರೆ. ಆದಾಗ್ಯೂ, ಈ ವರ್ಷ ರಾಮಾಯಣ ಮತ್ತು ಲವ್ & ವಾರ್ ಎಂಬ ಎರಡು ಮೆಗಾ ಬಿಡುಗಡೆಗಳೊಂದಿಗೆ ರಣಬೀರ್ ಕಪೂರ್ ಈ ಮೈಲಿಗಲ್ಲನ್ನು ತಲುಪುವ ಅವಕಾಶವನ್ನು ಹೊಂದಬಹುದು ಎಂದು ಊಹಾಪೋಹಗಳು ಎಲ್ಲೆಡೆ ಮಾತಾಗಿದೆ. ಆದರೆ, ಇಲ್ಲಿಯವರೆಗೆ ಶಾರುಖ್​ ಖಾನ್​ ನಂತರ ನಟ ಅಕ್ಷಯ್​ ಖನ್ನಾ ಮಾತ್ರ ಈ ಮೈಲುಗಲ್ಲನ್ನು ತಲುಪಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net