More

    ಬಿಎಂಟಿಸಿ ಖಾಸಗೀಕರಣ ಮಾಡುವುದಕ್ಕೆ ವ್ಯಕ್ತವಾಯಿತು ತೀವ್ರ ವಿರೋಧ

    ಬೆಂಗಳೂರು: ಬಿಎಂಟಿಸಿಯಲ್ಲಿ ಖಾಸಗಿ ಬಸ್‌ಗಳ ಸೇರ್ಪಡೆ ಹಾಗೂ ನೌಕರರ ಮುಷ್ಕರದ ಸಂದರ್ಭದಲ್ಲಿ ಖಾಸಗಿ ವಾಹನಗಳಿಗೆ ರಹದಾರಿ ನೀಡುವ ವಿಚಾರಕ್ಕೆ ನೌಕರ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

    ಖಾಸಗಿ ಸಂಸ್ಥೆಗಳಿಂದ 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಬಿಎಂಟಿಸಿ ನಿರ್ಧರಿಸಿದೆ. ಅದರ ಜತೆಗೆ ಏ. 7ರಿಂದ ಸಾರಿಗೆ ನೌಕರರು ಮುಷ್ಕರ ಕೈಗೊಂಡರೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವುದನ್ನು ತಡೆಯಲು ಒಪ್ಪಂದದ ಆಧಾರದಲ್ಲಿ ಸೇವೆ ನೀಡುವ ಖಾಸಗಿ ವಾಹನಗಳಿಗೆ ತಾತ್ಕಾಲಿಕ ರಹದಾರಿ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

    ಈ ಎರಡೂ ಕ್ರಮಗಳಿಂದ ನಿಗಮದ ನೌಕರರಿಗೆ ಅನ್ಯಾಯವಾಗುವುದಲ್ಲದೆ, ಬಿಎಂಟಿಸಿಯನ್ನು ಖಾಸಗಿ ಮಾಡುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಕೂಡಲೆ ಇದನ್ನು ನಿಲ್ಲಿಸಬೇಕು ಎಂದು ನೌಕರ ಸಂಘಟನೆಗಳು ಆಗ್ರಹಿಸಿವೆ.

    ಇದನ್ನೂ ಓದಿ: ವರ ಕವಿ ದ.ರಾ.ಬೇಂದ್ರೆ ಜೀವನಾಧಾರಿತ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿದ ಯುವ ಜೋಡಿ!

    ಈ ಕುರಿತು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿರುವ ಕೆಎಸ್ಸಾರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್, ಒಪ್ಪಂದದ ವಾಹನಗಳಿಂದ ಈಗಾಗಲೆ ಸಾರಿಗೆ ನಿಗಮಗಳಿಗೆ ಭಾರಿ ನಷ್ಟವಾಗುತ್ತಿದೆ. ಅವುಗಳಿಗೆ ಕಡಿವಾಣ ಹಾಕುವ ಬದಲು ಸರ್ಕಾರ ಉತ್ತೇಜನ ನೀಡುತ್ತಿದೆ. ಇದು ಮುಂದೆ ನಿಗಮಗಳಿಗೆ ಭಾರಿ ಹೊಡೆತ ನೀಡಲಿದೆ. ಹೀಗಾಗಿ ಈ ಕ್ರಮ ಕೂಡಲೆ ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.

    ಇಸ್ರತ್ ಜಹಾನ್ ಎನ್​ಕೌಂಟರ್​ ಪ್ರಕರಣ: ಕೊನೆಯ ಮೂವರು ಆರೋಪಿಗಳನ್ನೂ ಖುಲಾಸೆಗೊಳಿಸಿದ ಸಿಬಿಐ ನ್ಯಾಯಾಲಯ

    ಯಡಿಯೂರಪ್ಪ ರಾಜಿನಾಮೆ ನೀಡಿ, ಇಲ್ಲ ಈಶ್ವರಪ್ಪನ್ನ ಸಂಪುಟದಿಂದ ತೆಗೆಯಿರಿ ಎಂದ ಡಿಕೆ ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts