More

  ರಕ್ತದಾನ ಅನೇಕ ಜೀವಗಳನ್ನು ಉಳಿಸುತ್ತದೆ

  ಅಳವಂಡಿ: ಯುವಕರು ರಕ್ತದಾನ ನೀಡುವುದನ್ನು ರೂಡಿಸಿಕೊಳ್ಳಬೇಕು. ನೀಡಿದ ರಕ್ತ ಅನೇಕ ಜೀವಗಳನ್ನು ಉಳಿಸುವಲ್ಲಿ ಸಹಕಾರಿಯಾಗಲಿದೆ ಎಂದು ವೈದ್ಯಾಧಿಕಾರಿ ಡಾ.ಕೃಷ್ಣರಡ್ಡಿ ತಿಳಿಸಿದರು.

  ಇದನ್ನೂ ಓದಿ: ಅ.2ರಂದು ಗಾಂಧಿ ಜಯಂತಿ ಅಂಗವಾಗಿ ರಕ್ತದಾನ ಶಿಬಿರ: ಎಡಿಸಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ

  ಗ್ರಾಮದ ಶ್ರೀಸಿದ್ದೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ ಸಂಸ್ಥೆ ಕೊಪ್ಪಳ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿಯಿಂದ ಆಯುಷ್ಮಾನ ಭಾರತ ಕಾರ್ಯಕ್ರಮದಡಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಬುಧವಾರ ಮಾತನಾಡಿದರು.

  ರಕ್ತದಾನ ಮಾಡುವುದರಿಂದ ದಾನಿಗಳಿಗೂ ಅನೂಕೂಲ ಆಗಲಿದೆ. ಇದು ಕ್ಯಾನ್ಸರ್, ಪಾಶ್ವವಾಯು, ಹೃದಯಾಘಾತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಕಾರಣ ರಕ್ತದ ಮಹತ್ವ ಹಾಗೂ ದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

  ವೈದ್ಯಾಧಿಕಾರಿ ಡಾ.ಚಂದ್ರಶೇಖರ ಮೇಟಿ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನಿಯ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ರಕ್ತ ಅಪಘಾತಕ್ಕೊಳಗಾದವರಿಗೆ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಉಪಯೋಗವಾಗಲಿದೆ ಕಾರಣ ಯುವಕ ಮಂಡಳಿಗಳು, ಜನಪ್ರತಿನಿಧಿಗಳು ಹಾಗೂ ಇತರರು ರಕ್ತ ನೀಡುವ ಬಗ್ಗೆ ತಿಳಿಸಬೇಕು ಎಂದರು.

  ಆರೋಗ್ಯ ಇಲಾಖೆಯ ರವೀಂದ್ರ ಕಮ್ಮಾರ, ಸಾವಿತ್ರಿ ಹಂಚಿನಾಳ, ನಾಗರಾಜ ಪ್ರಮುಖರಾದ ನಜೀರ ತಟಗಾರ, ಚನ್ನಮ್ಮ ಗಾಳಿ, ಶಕುಂತಲಾ, ಪಕೀರಮ್ಮ, ಮಹಾದೇವಿ, ರಧಾಬಾಯಿ, ಜಾನಕಿ, ಶಬ್ಬೀರ ತಳಕಲ್, ನವೀನಕುಮಾರ, ಶಿರಾಜ್ ಕೊರ್ಲಹಳ್ಳಿ, ಪ್ರಕಾಶ ತಂಬೂರಿ, ಮಹಾಂತೇಶ, ರೆಹಮಾನ್ ಬುಕಿಟಗಾರ, ವೆಂಕಟೇಶ, ವಿನಾಯಕ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts