More

    ಸಾವಿನ ಪ್ರಮಾಣ ತಗ್ಗಿಸಲು ರಕ್ತದಾನ ಹೆಚ್ಚೆಚ್ಚು ಆಗಬೇಕು: ರಕ್ತದಾನಿ ಮಂಗಲ ಲಂಕೇಶ್ ಕರೆ

    ಮಂಡ್ಯ: ಭಾರತದಲ್ಲಿ ರಕ್ತದ ಕೊರತೆಯಿಂದ ಹೆಚ್ಚುತ್ತಿರುವ ಸಾವಿನ ಪ್ರಮಾಣ ತಗ್ಗಿಸಲು ರಕ್ತದಾನ ಅಗತ್ಯ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್‌ ಮಂಗಲ ಹೇಳಿದರು.
    ತಾಲೂಕಿನ ಸಂತೆಕಸಲಗೆರೆ ಗ್ರಾಮದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಆವರಣದಲ್ಲಿ ಸಂತೆಕಸಲಗೆರೆ ಗ್ರಾಮಪಂಚಾಯಿತಿ, ನೆಲದನಿ ಬಳಗ ಮಂಗಲ, ಮಂಡ್ಯ ಸಹಕಾರ ಲಯನ್ಸ್ ಸಂಸ್ಥೆ, ಕಾವೇರಿ ಗೆಳೆಯರ ಬಳಗ, ಮಿಮ್ಸ್ ರಕ್ತನಿಧಿ ಕೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನಾ ಸಮಿತಿ ಹಾಗೂ ಡಾನ್ ಬೋಸ್ಕೋ ಸಂಸ್ಥೆ ಯತ್ತಗದಹಳ್ಳಿ ಇವರು ಆಯೋಜಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಮತ್ತು ಸಸಿ ನೆಡುವ-ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
    ಅಗತ್ಯವಿರುವ ರೋಗಿಗಳಿಗೆ ರಕ್ತ ಲಭಿಸುವಂತೆ ಮಾಡುವುದು ಮತ್ತು ಎಲ್ಲೆಡೆ ರಕ್ತ ಲಭ್ಯತೆ ಇರುವಂತೆ ನೋಡಿಕೊಳ್ಳವುದು ಪ್ರತಿ ಯೊಬ್ಬ ಪ್ರಜೆಯ ಜವಬ್ದಾರಿಯಾಗಿದೆ, ರಕ್ತದಾನ ಬಗ್ಗೆ ಜಾಗೃತಿ ಮೂಡಿಸುವುದು ರಕ್ತದಾನಿಗಳ ಸೇವಾಕಾರ್ಯವಾಗಿದೆ, ಜೀವ ಉಳಿಸಿ ಮಾನವೀಯತೆ ಮೆರೆಯದ ಯುವಜನತೆ ವ್ಯರ್ಥವೆನಿಸಿಕೊಳ್ಳುತ್ತಾರೆ ಎಂದರು.
    ಸಹಕಾರ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜೆ. ಜಿ.ಲಿಂಗರಾಜು, ಆರೋಗ್ಯ ಶಿಕ್ಷಣಾಧಿಕಾರಿ ಕೆ.ರಾಜು, ಪಾರ್ವತಮ್ಮ, ಬಸವರಾಜು, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts