More

    ಗ್ಯಾರಂಟಿ ಹೆಸರಲ್ಲಿ ಮಹಿಳೆಯರ ಬ್ಲಾಕ್‌ಮೇಲ್

    ಶಿವಮೊಗ್ಗ: ಗ್ಯಾರಂಟಿ ಯೋಜನೆಗಳ ವಿಷಯದಲ್ಲಿ ಕಾಂಗ್ರೆಸ್ ಮಹಿಳಾ ಮತದಾರರನ್ನು ಬ್ಲಾೃಕ್‌ಮೇಲ್ ಮಾಡುತ್ತಿದೆ. ಇದರ ಬದಲು ಸಿಎಂ ರಾಜಮಾರ್ಗದಲ್ಲಿ ಚುನಾವಣೆ ನಡೆಸಲಿ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಸಿ.ಮಂಜುಳಾ ಸವಾಲು ಹಾಕಿದರು.

    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡದಿದ್ದರೆ ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಳಿಸುತ್ತೇವೆ ಎಂದು ಮಹಿಳಾ ಮತದಾರರನ್ನು ಬೆದರಿಸಲಾಗುತ್ತಿದೆ. ನೀವು ಯಾರಿಗೆ ಮತ ಚಲಾಯಿಸುತ್ತೀರಿ ಎಂಬುದು ನಮಗೆ ಸಾಫ್ಟ್‌ವೇರ್ ಮೂಲಕ ತಿಳಿಯುತ್ತದೆ ಎಂದು ಧಮ್ಕಿ ಹಾಕಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ನಮ್ಮ ಸಾಧನೆಯನ್ನು ಜನರ ಮುಂದಿಟ್ಟು ಮತಯಾಚಿಸಬೇಕು. ಆದರೆ ಕಾಂಗ್ರೆಸ್ ಅಂತಹ ಪ್ರಯತ್ನ ಮಾಡುತ್ತಿಲ್ಲ. ಹೇಳಿಕೊಳ್ಳಲು ಯಾವುದೇ ಸಾಧನೆಗಳು ಅವರ ಬಳಿಯಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದರು.
    ಭೇಟಿ ಪಡಾವೋ ಭೇಟಿ ಬಚಾವೋ, ಸ್ವಚ್ಛ ಭಾರತ್, ಜಲವಜೀವನ್ ಮಿಷನ್, ಉಜ್ವಲ ಯೋಜನೆ, ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ಯೋಜನೆಗಳೆಲ್ಲವೂ ಮಹಿಳಾ ಪರವಾದವು. ದೇಶದ ರಾಷ್ಟ್ರಪತಿ ಮಹಿಳೆ, ಸಚಿವ ಸಂಪುಟದಲ್ಲಿ ಹೆಚ್ಚು ಮಹಿಳಾ ಪ್ರಾತಿನಿಧ್ಯ, ಸೇನೆಯಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶ ನೀಡುವ ಮೂಲಕ ತಮ್ಮದು ಮಹಿಳಾಪರ ಸರ್ಕಾರ ಎಂಬುದನ್ನು ನರೇಂದ್ರ ಮೋದಿ ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
    ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಜ್ಯೋತಿ, ಉಪಾಧ್ಯಕ್ಷೆ ವೀಣಾ, ಚುನಾವಣಾ ನಿರ್ವಹಣಾ ಸಮಿತಿ ಸದಸ್ಯೆ ಸುರೇಖಾ ಮುರುಳೀಧರ್, ಗೀತಾ ರವೀಂದ್ರ ಇದ್ದರು.
    ಇದುವರೆಗೆ 18 ಸಮಾವೇಶ:ಮಹಿಳಾ ಮತದಾರರನ್ನು ಗಮನದಲ್ಲಿರಿಸಿಕೊಂಡು ಇದುವರೆಗೆ 18 ನಾರಿಶಕ್ತಿ ಸಮಾವೇಶಗಳನ್ನು ನಡೆಸಲಾಗಿದೆ. ಎಲ್ಲ ಸಮಾವೇಶಗಳಲ್ಲೂ ಬಿಜೆಪಿ ಅಭ್ಯರ್ಥಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಗಾಯತ್ರಿದೇವಿ ಮಲ್ಲಪ್ಪ ಹೇಳಿದರು. ದಾವಣೆಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧೆ ಬಗ್ಗೆ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆ ಬಗ್ಗೆ ನಮ್ಮ ಆಕ್ಷೇಪವಿದೆ. ಅವರದೇ ಪಕ್ಷದ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ರಾಜಕೀಯದಲ್ಲಿ ಸಾಧನೆ ಮಾಡಿಲ್ಲವೇ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts