More

    ಸಚಿವರಿಗೆ ಕಪ್ಪುಬಾವುಟ ಪ್ರದರ್ಶನ; ಹುಳಿಯಾರಲ್ಲಿ ಕಾಮಗಾರಿಗೆ ಅಡ್ಡಿ 

    ಹುಳಿಯಾರು: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿರಸ್ತೆ ಕಾಮಗಾರಿಯ ಶಂಕುಸ್ಥಾಪನೆಗೆ ಬುಧವಾರ ಆಗಮಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಕಪ್ಪು ಬಾವುಟ ಪ್ರದರ್ಶಿಸಿದರು.

    ಹುಳಿಯಾರು ಪಟ್ಟಣ ಪಂಚಾಯಿತಿಗೆ ನಗರೋತ್ಥಾನ ಯೋಜನೆಯಲ್ಲಿ 5 ಕೋಟಿ ರೂ. ಅನುದಾನ ಬಂದಿದೆ. ಈ ಅನುದಾನದಲ್ಲಿ ಪಪಂನ ಎಲ್ಲ ವಾರ್ಡ್‌ಗಳಲೂ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಾಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗೆ 12ನೇ ವಾರ್ಡ್‌ನಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.

    ಸಚಿವರಿಗೆ ಕಪ್ಪುಬಾವುಟ ಪ್ರದರ್ಶನ; ಹುಳಿಯಾರಲ್ಲಿ ಕಾಮಗಾರಿಗೆ ಅಡ್ಡಿ 
    ಹುಳಿಯಾರು ಪಟ್ಟಣ ಪಂಚಾಯಿತಿ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಪಂ ಸದಸ್ಯರು ಭೂಮಿ ಪೂಜೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸಿದರು.  ಕೂಡಲೇ ಎಚ್ಚೆತ್ತ ಪೊಲೀಸರು ಕಪ್ಪು ಬಾವುಟಗಳನ್ನು ವಶಕ್ಕೆ ಪಡೆದರು. ಪಟ್ಟಣದ ವೈ.ಎಸ್. ಪಾಳ್ಯ ಮತ್ತು ಲಿಂಗಪ್ಪನಪಾಳ್ಯ ಗ್ರಾಮದಲ್ಲೂ ಸಿಸಿರಸ್ತೆ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ವಿರೋಧದ ಮಾತು ಕೇಳಿಸಿಕೊಂಡ ಸಚಿವರು ಪ್ರತಿಕ್ರಿಯಿಸಿ ಎಲ್ಲ ಚುನಾಯಿತ ಸದಸ್ಯರು ಪಪಂ ಕಚೇರಿಗೆ ಬನ್ನಿ… ಎಲ್ಲರೂ ಚರ್ಚಿಸೋಣ ಎಂದರು.

    ಪಪಂ ಕಚೇರಿಯಲ್ಲಿ ಚರ್ಚೆ: ಪಪಂ ಕಚೇರಿಗೆ ಆಗಮಿಸಿದ ಸಚಿವರು ಚುನಾಯಿತ ಸದಸ್ಯರೊಂದಿಗೆ ಮಾತನಾಡಿ, ನಗರೋತ್ಥಾನ ಯೋಜನೆಯಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳು ಸ್ಥಳಿಯ ಪಂಚಾಯಿತಿಯಿಂದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಜತೆಗೂಡಿ ಕ್ರಿಯಾಯೋಜನೆ ರೂಪಿಸಿದ್ದಾರೆ. ಆದರೂ ಇದಕ್ಕೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

    ಯೋಜನೆ ಅಭಿವೃದ್ದಿ ಕಾಮಗಾರಿಗಳು ಮಾರ್ಚ್ ಒಳಗೆ ಮುಗಿಯಬೇಕಿದ್ದು, ಏನಾದರು ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ರಸ್ತೆ ಕಾಮಗಾರಿ ಮುಗಿಸಿ. ಕೆಲಸಕ್ಕೆ ತೊಂದರೆಯಾದರೆ ಆ ವಾರ್ಡ್ ಬಿಟ್ಟು ಬೇರೆ ವಾರ್ಡ್‌ಗೆ ಕಾಮಗಾರಿ ಬದಲಾವಣೆ ಮಾಡಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಶ್ರಯ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ ಕೇವಲ 5 ಮನೆಗಳು ಬಂದಿರುವುದರಿಂದ ಹಂಚಿಕೆಯಲ್ಲಿ ಸಮಸ್ಯೆಯಾಗಿದೆ ಎಂದು ಸದಸ್ಯರು ಗಮನಕ್ಕೆ ತಂದರು.

    ಆಗ ಸಚಿವ ಜೆ.ಸಿ.ಮಾಧುಸ್ವಾಮಿ ದೂರವಾಣಿ ಮೂಲಕ ವಸತಿ ಸಚಿವರೊಂದಿಗೆ ಚರ್ಚಿಸಿ 100 ಮನೆಗಳನ್ನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ವಸತಿ ಸಚಿವರು ಕೊಡುವುದಾಗಿ ಭರವಸೆ ನೀಡಿದರು. ಪಪಂ ಅಧ್ಯಕ್ಷ ಕೆ.ಎಂ.ಎಲ್.ಕಿರಣ್ ಕುಮಾರ್ ಮತ್ತು ಸದಸ್ಯರು, ಮುಖ್ಯಾಧಿಕಾರಿ ಭೂತಪ್ಪ ಇದ್ದರು.

    ನಗರೋತ್ಥಾನ ಯೋಜನೆಯಲ್ಲಿ ಪಪಂ ವಾರ್ಡ್‌ಗಳಲ್ಲಿ ನಡೆಯುವ ಸಿಸಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳ ಭೂಮಿ ಪೂಜೆ ಬಗ್ಗೆ ಎಲ್ಲ ಸದಸ್ಯರಿಗೂ ಒಂದು ದಿನ ಮುಂಚಿತವಾಗಿ ತಿಳಿಸಲಾಗಿದೆ. ನಗರೋತ್ಥಾನ ಯೋಜನೆಯ ಅಭಿವೃದ್ಧಿ ಸಮಿತಿಗೆ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಹಾಗಾಗಿ ಅವರನ್ನ ಕರೆಸಿ ಶಂಕುಸ್ಥಾಪನೆ ನಡೆಸಿದ್ದೇವೆ.
    | ಕೆ.ಎಂ.ಎಲ್.ಕಿರಣ್ ಕುಮಾರ್ ಪಪಂ ಅಧ್ಯಕ್ಷ

    ನಗರೋತ್ಥಾನ ಯೋಜನೆಯ ಅನುದಾನ ಪಪಂ ಅನುದಾನ. ಬಿಜೆಪಿ ಸದಸ್ಯರ ವಾರ್ಡ್ ಗಳಲ್ಲಿ ಭೂಮಿ ಪೂಜೆ ನಡೆಸದೆ ಕಾಮಗಾರಿ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾಯಿತ ಸದಸ್ಯರ ವಾರ್ಡ್‌ಗಲ್ಲಿ ನಡೆಯುವ ಕಾಮಗಾರಿಗೆ ಸಚಿವರನ್ನು ಕರೆಸಿ ಪೂಜೆ ಮಾಡುತ್ತ ಸಚಿವರ ಅನುದಾನ ಎಂದು ಪ್ರಚಾರ ಮಾಡಿ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾಲ್ಕುವರೆ ವರ್ಷ ತಿರುಗಿಯೂ ನೋಡದ ಬ್ಲಾಕ್‌ಗಳಲ್ಲಿ ಪೂಜೆ ಮಾಡುತ್ತಿದ್ದಾರೆ. ಚುನಾವಣೆ ಗಿಮಿಕ್ ವಿರೋಧಿಸಿ ಕಪ್ಪುಬಾವುಟ ಪ್ರದರ್ಶಿಸಿದ್ದೇವೆ.
    | ದಯಾನಂದ್, ಜಹೀರ್‌ಸಾಬ್ ಪಪಂ ಸದಸ್ಯರು

    ರಾಷ್ಟ್ರೀಯ ಏಕಾತ್ಮತಾ ಯಾತ್ರೆಯಲ್ಲಿ ಈಶಾನ್ಯ ರಾಜ್ಯಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಪ್ರವಾಸ ಬಂದಿದ್ದು, ಅವರಲ್ಲಿ 35 ವಿದ್ಯಾರ್ಥಿಗಳು ತುಮಕೂರಿಗೂ ಆಗಮಿಸಿದ್ದಾರೆ. ನಮ್ಮ ಸಂಸ್ಕೃತಿ, ಜೀವನ ವಿಧಾನಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
    |ಟಿ.ಎಸ್.ಸುನೀಲ್‌ಪ್ರಸಾದ್, ಸ್ವಾಗತ ಸಮಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts