More

    ಪೈಗಂಬರ್ ವಿರುದ್ಧ ಹೇಳಿಕೆ: ಶಾಸಕ ರಾಜಾ ಸಿಂಗ್​ ಅಮಾನತು ರದ್ದು ಮಾಡಿ, ಟಿಕೆಟ್ ನೀಡಿದ​ ತೆಲಂಗಾಣ ಬಿಜೆಪಿ

    ಹೈದರಾಬಾದ್​: ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​ ಮೇಲಿದ್ದ ಅಮಾನತನ್ನು ಬಿಜೆಪಿ ಶಿಸ್ತು ಸಮಿತಿಯು ಭಾನುವಾರ (ಅ.22) ರದ್ದುಗೊಳಿಸಿದೆ. ಮೊಹಮ್ಮದ್ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ 2022ರ ಆಗಸ್ಟ್​ ತಿಂಗಳಲ್ಲಿ ಹೈದರಾಬಾದ್​ ಪೊಲೀಸರು ರಾಜಾ ಸಿಂಗ್​ರನ್ನು ಬಂಧಿಸಿದ ಬಳಿಕ ಬಿಜೆಪಿಯು ಅವರನ್ನು ಅಮಾನತು ಮಾಡಿತ್ತು.

    ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗಲೇ ರಾಜಾ ಸಿಂಗ್​ ಅಮಾನತನ್ನು ರದ್ದು ಮಾಡಲಾಗಿದೆ. ಅಲ್ಲದೆ, ಇಂದು ತೆಲಂಗಾಣ ಬಿಜೆಪಿಯು 52 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ರಾಜಾ ಸಿಂಗ್​ ಟಿಕೆಟ್​ ಲಭಿಸಿದೆ. ಅವರು ಗೋಶಾಮಹಲ್​ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಅಲ್ಲದೆ, ಮೂವರು ಹಾಲಿ ಸಂಸದರಿಗೂ ಬಿಜೆಪಿ ಟಿಕೆಟ್​ ನೀಡಿದೆ.

    ಅಮಾನತು ಆದೇಶವನ್ನು ಹಿಂಪಡೆಯುತ್ತಿದ್ದಂತೆ ರಾಜಾ ಸಿಂಗ್​, ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರಿಗೆ ಧನ್ಯವಾದಗಳು ತಿಳಿಸಿದ್ದಾರೆ. ರಾಜಾ ಸಿಂಗ್​ ಕಣಕ್ಕಿಳಿಯಲಿರುವ ಗೋಶಾಮಹಲ್ ವಿಧಾನಸಭಾ ಕ್ಷೇತ್ರವು ಹೈದರಾಬಾದ್ ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಸಾದುದ್ದೀನ್ ಓವೈಸಿ ಅವರು ಈ ಕ್ಷೇತ್ರದ ಸಂಸದರು ಕೂಡ.

    Raja singh

    ರಾಜಾ ಸಿಂಗ್​ ಮಾತನಾಡಿ, ನಾನು ಇಲ್ಲಿಂದ ಶಾಸಕನಾಗಿದ್ದೇನೆ ಮತ್ತು ನಾನು ಅವರ ಕಡೆಯ ಒಬ್ಬನನ್ನು ಸೋಲಿಸಿ ಶಾಸಕನಾಗಿದ್ದೇನೆ. ಅಸಾದುದ್ದೀನ್ ಓವೈಸಿ ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ಗೆ ಮಾರುತ್ತಿದ್ದರು. ಆದರೀಗ ಬಿಆರ್‌ಎಸ್‌ಗೆ ಮತಗಳನ್ನು ಮಾರಾಟ ಮಾಡುತ್ತಾರೆ. ಅವರೊಬ್ಬ ಉದ್ಯಮಿ. ಮುಂದಿನ ದಿನಗಳಲ್ಲಿ ನಾನು ಗೋಶಾಮಹಲ್‌ನಿಂದ ಗೆಲ್ಲುತ್ತೇನೆ ಮತ್ತು ದೇಶವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದರು.

    ರಾಜಾ ಸಿಂಗ್​ರನ್ನು ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್ ಅಡಿಯಲ್ಲಿ 2022ರ ಆಗಸ್ಟ್​ ತಿಂಗಳಲ್ಲಿ ಬಂಧಿಸಲಾಗಿತ್ತು. ಆದಾಗ್ಯೂ 2022ರ ನವೆಂಬರ್​ ತಿಂಗಳಲ್ಲಿ ತೆಲಂಗಾಣ ಹೈಕೋರ್ಟ್​ ಪ್ರಿವೆಂಟಿವ್ ಡಿಟೆನ್ಶನ್ ಆಕ್ಟ್​ ಅನ್ನು ಬದಿಗಿರಿಸಿ, ರಾಜಾ ಸಿಂಗ್​ಗೆ ಜಾಮೀನು ನೀಡಿತು. ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಅಮಾನತು ಆದೇಶವನ್ನು ಹಿಂಪಡೆದಿದೆ.

    ರಾಜಾ ಸಿಂಗ್ ಅವರು ಹಿಂದುತ್ವವನ್ನು ಬೆಂಬಲಿಸುವ ತಮ್ಮ ಬಲವಾದ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹೈದರಾಬಾದ್‌ನಲ್ಲಿ ಕೋಮು ಅಪರಾಧಗಳಿಗೆ ಸಂಬಂಧಿಸಿದ ಹಲವಾರು ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ಹೇಳಿಕೆಗಳು ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿವೆ. (ಏಜೆನ್ಸೀಸ್​)

    ಪೈಗಂಬರ್ ವಿರುದ್ಧ ಹೇಳಿಕೆ ಆರೋಪ: ಅಮಾನತುಗೊಂಡ ಶಾಸಕನಿಗೆ ಒಂದೇ ಗಂಟೆಯಲ್ಲಿ ಸಿಗ್ತು ಜಾಮೀನು- ಕೋರ್ಟ್​ ಹೇಳಿದ್ದೇನು?

    ಮೊಹಮ್ಮದ್​ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಶಾಸಕ ರಾಜಾ ಸಿಂಗ್​ ಅರೆಸ್ಟ್​

    ಪ್ರವಾದಿ ಮೊಹಮ್ಮದ್​​​ ವಿರುದ್ಧ ಹೇಳಿಕೆ ನೀಡಿ ಕೆಲಸ ಕಳೆದುಕೊಂಡ ಬಿಜೆಪಿ ಶಾಸಕ- ಪಕ್ಷದಿಂದ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts