More

    ಬಿಜೆಪಿ ನಾಯಕರಿಗೆ ತಮ್ಮ ಮಕ್ಕಳ ಭವಿಷ್ಯದ ಚಿಂತೆ

    ಶಿವಮೊಗ್ಗ: ಕೆಲ ವರ್ಷಗಳ ಹಿಂದೆ ಬಿಜೆಪಿಯಲ್ಲಿ ನಾಯಕರು ಇದ್ದರು. ಈಗ ಇರುವುದು ಕೇವಲ ಕಾಂಗರುಗಳು. ಅವರಿಗೆ ತಮ್ಮ ಮಕ್ಕಳಿಗೆ ಸುರಕ್ಷಿತವಾದ ವ್ಯವಸ್ಥೆ ಮಾಡಬೇಕು ಎನ್ನುವುದಷ್ಟೇ ಚಿಂತೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದರು.

    ಬಿಜೆಪಿಯಲ್ಲಿ ಎಲ್ಲ ನಾಯಕರ ಮಕ್ಕಳಿಗೂ ಅಧಿಕಾರ ಸಿಕ್ಕಿದೆ. ಆದರೆ ನನ್ನ ಮಗನಿಗೆ ಏನೂ ಸಿಕ್ಕಿಲ್ಲ ಎಂಬ ಚಿಂತೆ ಆ ಪಕ್ಷದ ನಾಯಕರೊಬ್ಬರಲ್ಲಿದೆ. ಅವರಿಗೆ ರಾಜಕೀಯದಲ್ಲಿ ಕಳೆದುಹೋಗುತ್ತೇನೆಂಬ ಆತಂಕವಿದೆ. ಹೀಗಾಗಿ ದಿಢೀರ್ ರಾಷ್ಟ್ರಭಕ್ತಿ ಜಾಗೃತವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
    ಸಂಸದ ಡಿ.ಕೆ.ಸುರೇಶ್ ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಬೇಕು ಎಂದು ಹೇಳಿರುವ ನೋವಿನ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳಬೇಕು. ಮೇಕೆದಾಟು, ಕಾವೇರಿ, ಮಹದಾಯಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನೆರೆ, ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ಕಡೆಗಣಿಸಿದೆ. ಹೀಗಾಗಿ ಸುರೇಶ್ ಹತಾಶೆಯಿಂದ ಮಾತನಾಡುವ ಭರದಲ್ಲಿ ಬಾಯಿತಪ್ಪಿ ಆ ವಾಕ್ಯ ಹೇಳಿರಬಹುದು ಎಂದು ಆಯನೂರು ಹೇಳಿದರು.
    ಡಿ.ಕೆ.ಸುರೇಶ್ ಹೇಳಿಕೆಯನ್ನು ನಾನು ಸಮರ್ಥಿಸುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಅದನ್ನು ಖಂಡಿಸಿದ್ದಾರೆ. ಆದರೆ ರಾಜ್ಯಕ್ಕೆ, ನಮ್ಮ ಜಿಲ್ಲೆಗೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಪ್ರಶ್ನಿಸಬೇಕಲ್ಲವೆ? ಗುಂಡು ಹೊಡೆಯಬೇಕೆಂದು ಹೇಳಿ ದ್ವೇಷ ಬಿತ್ತುವ ಹೇಳಿಕೆ ನೀಡುವವರಿಗೆ ಏನು ಮಾಡಬೇಕು? ಎಂದು ಪ್ರಶ್ನಿಸಿದರು.
    ಚುನಾವಣೆ ಬೆನ್ನಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯವರಿಗೆ ವಿಐಎಸ್‌ಎಲ್ ನೆನಪಾಗಿದೆ. ಈಗ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. ಇಷ್ಟು ದಿನ ಇವರು ಸುಮ್ಮನಿದ್ದಿದ್ದೇಕೆ? ಶಿವಮೊಗ್ಗದಲ್ಲಿ ಫ್ಲೈಓವರ್‌ಗಳು ಬೇಗ ಮುಗಿಯುತ್ತವೆ. ಭದ್ರಾವತಿಯಲ್ಲಿ ವಿಳಂಬವೇಕೆ? ಅಮಿತ್ ಷಾ ಐದು ವರ್ಷಗಳ ಹಿಂದೆ ನೀಡಿದ್ದ ಅಡಕೆ ಸಂಶೋಧನಾ ಕೇಂದ್ರದ ಭರವಸೆ ಏಕೆ ಈಡೇರಿಲ್ಲ? ಈ ಚುನಾವಣೆಯಲ್ಲಿ ಬಿಜೆಪಿಯವರು ಇದಕ್ಕೆಲ್ಲ ಉತ್ತರಿಸಬೇಕೆಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts