More

    VIDEO | ‘ಎಲೆಕೋಸು’ ವಿಚಾರಕ್ಕೆ ಬಿಜೆಪಿ ನಾಯಕನಿಂದ ಸರ್ಕಾರಿ ಅಧಿಕಾರಿಗೆ ಹೊಡೆತ!

    ಉತ್ತರ ಪ್ರದೇಶ: ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಅಲೋಕ್ ಸಿಂಗ್ ನಡುವೆ ವಾಗ್ವಾದ ನಡೆದಿದ್ದು, ಬಾರಾಬಂಕಿಯಲ್ಲಿರುವ ಹೈದರ್‌ಗಢ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿದ್ದ ಕೃಷಿ ಮೇಳದಲ್ಲಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ.

    ಸದ್ಯ ಇವರಿಬ್ಬರು ಹೊಡೆದಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದ್ದು, ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಅಧಿಕಾರಿಗೆ ಮೈದಾನದಲ್ಲಿ ಹೊಡೆಯುತ್ತಿರುವುದನ್ನು ಕಾಣಬಹುದು.

    ಇದನ್ನೂ ಓದಿ: ಬನವಾಸಿಯಲ್ಲಿ ಸಿಎಂ ಸಾಗುವ ದಾರಿಯುದ್ದಕ್ಕೂ ಕಂಡು ಬಂತು ‘ಪೇ ಸಿಎಂ’ ಪೋಸ್ಟರ್

    ರೈತರ ಏಳಿಗೆಗಾಗಿ ಕೃಷಿ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಪ್ರದರ್ಶನಕ್ಕೆ ಇಡಲಾಗಿದ್ದ ಎಲೆಕೋಸುಗಳು ಸ್ಥಳೀಯ ರೈತರು ಬೆಳೆದದ್ದಾಗಿರಲಿಲ್ಲ. ಬದಲಾಗಿ ಹೊರಗಿನಿಂದ ತಂದ ಕ್ಯಾಬೇಜ್​ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಈ ಕಾರಣಕ್ಕಾಗಿ ನಡೆದ ವಾಗ್ವಾದ ಹೊಡೆದಾಡವಾಗಿ ಬದಲಾಗಿದೆ ಎಂದು ವರದಿಯಾಗಿದೆ.

    ಇಲ್ಲಿರುವ ಎಲ್ಲರೂ ರೈತರಲ್ಲ. ಬದಲಾಗಿ ದಲ್ಲಾಳಿಗಳು ಸೇರಿಕೊಂಡಿದ್ದಾರೆ. ಕೃಷಿ ಮೇಳದ ಆಯೋಜನೆಯಿಂದ ರೈತರಿಕೆ ಯಾವುದೇ ಪ್ರಯೋಜನವಿಲ್ಲ. ಇಲ್ಲಿಗೆ ಬಂದಿರುವ ದಲ್ಲಾಳಿಗಳನ್ನು ವಿರೋಧಿಸಿದ್ದಕ್ಕಾಗಿ ಅಧಿಕಾರಿ ಅಲೋಕ್ ಸಿಂಗ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಆರೋಪಿಸಿದ್ದಾರೆ. (ಏಜೆನ್ಸೀಸ್)

    ಇದನ್ನೂ ಓದಿ: ರಶ್ಮಿಕಾ ಹೊಸ ಅವತಾರ; ಉರ್ಫಿ ಜಾವೇದ್ ಪ್ರಭಾವ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts