More

    ಒಳಮೀಸಲಾತಿ ಜಾರಿಯಿಂದ ಅನ್ಯಾಯ

    ಲಿಂಗಸುಗೂರು: ಇತ್ತೀಚೆಗೆ ಬಿಜೆಪಿ ಸರ್ಕಾರ ನ್ಯಾ.ಎ.ಜೆ.ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸುವ ನಿರ್ಧಾರ ಕೈಗೊಂಡಿರುವುದು ಬಂಜಾರ ಸೇರಿ ಕೆಲ ಎಸ್ಸಿ ಉಪಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂಎಲ್‌ಸಿ ಪ್ರಕಾಶ ರಾಠೋಡ್ ಹೇಳಿದರು.
    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾತನಾಡಿ, ವಿಧಾನಸೌಧದ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಚರ್ಚಿಸದೆ ಮತ್ತು ಜನಾಭಿಪ್ರಾಯ ಪಡೆಯದೆ ಒಳಮೀಸಲಾತಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕೆಲ ಎಸ್ಸಿ ಜಾತಿಗಳಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದ್ದು, ಬಂಜಾರ, ಭೋವಿ, ಕೊರಚ, ಕೊರಮ ಸೇರಿ ಎಸ್ಸಿ ಮೀಸಲಾತಿ ಪಡೆಯುತ್ತಿರುವ ಕೆಲ ಉಪಜಾತಿಗಳಿಗೆ ಕಂಟಕವಾಗಲಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
    ಇದೇವೇಳೆ ತಾಲೂಕಿನ ಗೌಡೂರು, ಈಚನಾಳ, ಗೊರೇಬಾಳ, ದೇವರಭೂಪುರ, ಪರಂಪುರ, ಬೆಂಚಲದೊಡ್ಡಿ, ಪೂಜಾರಿ, ಗದ್ದಗಿ, ಮಿಂಚೇರಿ, ಗೋನವಾಟ್ಲ, ಕಾಳಾಪುರ, ಫೂಲಬಾವಿ, ಹಾಲಬಾವಿ, ಜಂಗಿರಾಂಪುರ, ಆಶಿಹಾಳ, ಭೂಪುರ (ರಾಂಪುರ) ಸೇರಿ ಹಲವು ತಾಂಡಾಗಳ ಬಂಜಾರ ಸಮುದಾಯದ ನೂರಾರು ಜನರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
    ಜಿಪಂ ಮಾಜಿ ಅಧ್ಯಕ್ಷ ಎಂ.ಎಸ್.ನಾಯ್ಕ, ಮುಖಂಡರಾದ ಅಮರಗುಂಡಪ್ಪ ಮೇಟಿ, ಮಹಾದೇವ ರಾಠೋಡ್, ಟಿ.ಆರ್.ನಾಯ್ಕ, ಲಾಲಪ್ಪ ರಾಠೋಡ್, ದೇವಪ್ಪ ರಾಠೋಡ್, ನಾಗರಡ್ಡಿ, ನೀಲಪ್ಪ ಪವಾರ್, ಪಾಂಡುರಂಗ ನಾಯ್ಕ, ದೇವೇಂದ್ರಪ್ಪ ವಕೀಲ, ಅಮರೇಶ ಚೌವ್ಹಾಣ, ಕೃಷ್ಣ ಚೌವ್ಹಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts