More

    ಬಿಜೆಪಿಯ ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಅತೀದೊಡ್ಡ ಆಥಿರ್ಕ ದೇಶ ಆಗುವುದು ನಿಶ್ಚಿತ: ಸಿ.ಸಿ. ಪಾಟೀಲ,

    ವಿಜಯವಾಣಿ ಸುದ್ದಿಜಾಲ ಗದಗ
    ಬಿಜೆಪಿ ಲೋಕಸಭಾ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಪರ ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ, ವಿಧಾನಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಸೇರಿದಂತೆ ಬಿಜಪಿ ಮುಕಂಡರು ಗದಗ ತಾಲೂಕಿ ಚಿಂಚಲಿ, ಕಲ್ಲೂರು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಶುಕ್ರವಾರ ಮತಯಾಚನೆ ಮಾಡಿದರು. ಬಿರು ಬಿಸಿಲಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಮತಯಾಚನೆ ಮಾಡುತ್ತಿರುವ ನಾಯಕರು ಬಿಸಿಲಿಗೆ ಬೆಂದಿರುವ ಭೂ ತಾಯಿಯಂತೆಯೇ ತಾವೂ ಬಸವಳಿದರು.
    ಕಲ್ಲರೂ ಗ್ರಾಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದ, ಶಾಸಕ ಸಿ.ಸಿ. ಪಾಟೀಲ, ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಮೂರನವೇ ಅವಧಿಗು ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಮೂರನೇ ಅವಧಿಯಲ್ಲಿ ದೇಶ ಆಥಿರ್ಕ ಸ್ಥಿತಿ 5 ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರುವುದು ಅಷ್ಟೇ ನಿಶ್ಚಿತ ಎಂದು ಸಿ.ಸಿ. ಪಾಟೀಲ ಎಂದರು.
    ಜಲಜೀವನ್​, ಕಿಸಾನ್​ ಸಮೃದ್ದಿ ಸೇರಿದಂತೆ ಹಲವು ಯೋಜನೆ ಕೇಂದ್ರ ಸರ್ಕಾರ ತಂದಿದೆ. ಯೋಜನೆ ಜಾರಿ ಮಾಡುವ ಸಂದರ್ಭದಲ್ಲಿ ಜಾತಿಗೆ ಯೋಜನೆ ಸೀಮಿತಗೊಳಿಸಲಿಲ್ಲ. ಮಹಿಳೆಯರಿಗೆ ಉಚಿತ ಗ್ಯಾಸ್​ ಸಂಪರ್ಕ, ದೇಶಾದ್ಯಂತ ರೈಲ್ವೆ ಮಾರ್ಗ, ಮೇಟ್ರೊ, ಒಂದೇ ಭಾರತ, ರೈಲ್ವೆ ನಿಲ್ದಾಣಗಳ ಉನ್ನತಿಕರ್ಣ, ದೇಶಾದ್ಯಂತ ಇಲೇಕ್ಟ್ರೀಕಲ್​ ರೈಲುಗಳ ಪರಿವರ್ತನೆ, ಆಟಿರ್ಕಲ್​ 370 ರದ್ದತಿ ಸೇರಿದಂತೆ ಹಲವು ಯೋಜನೆಗಳು ಇಂದು ಸಾಮಾನ್ಯ ನಾಗರಿಕರಿಗೆ ಅನುಕೂಲ ಆಗಿವೆ. ವಿಶ್ವದಲ್ಲಿ ಶಕ್ತಿಯುತ ಆಥಿರ್ಕ ದೇಶವಾಗಿ ಭಾರತ ಮುನ್ನಡೆಯುತ್ತಿದೆ. ಯುವಕರು ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
    ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು ಮಾತನಾಡಿ, ಬೊಮ್ಮಾಯಿ ಅವರು ಎಸ್ಸಿ ಎಸ್ಟಿ ಮೀಸಲಾತಿಯನ್ನು ಶೇ.18 ರಿಂದ 24 ಕ್ಕೆ ಹೆಚ್ಚಿಸಿದರು. ರೈತಮಕ್ಕಳು, ಕಾಮಿರ್ಕ ಮಕ್ಕಳಿಗೆ ವಿದ್ಯಾನಿಧಿ ನೀಡಿ ಮಹತ್ವದ ಯೋಜನೆ ಜಾರಿಗೊಳಿಸಿದರು. ಅವರ ಕೆಲಸಗಳು ಗೆಲುವಿಗೆ ಶ್ರೀರಕ್ಷೆ. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಅತ್ಯಂತ ಸೂಕ್ತ ಅಭ್ಯಥಿರ್. ಇದೇ ಕ್ಷೇತ್ರದಿಂದ ಎರಡೂ ಬಾರಿ ವಿಧಾನಪರಿಷತ್​ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
    ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಅಧ್ಯೆ ಉಷಾ ದಾಸರ ಸೇರಿದಂತೆ ಗ್ರಾಮೀಣ ಮಂಡಳ ಅಧ್ಯಕ್ಷರು, ಸದಸ್ಯರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts