More

    ಗೆಲುವಿಗಾಗಿ ಒಂದಾಗಿ ಕೆಲಸ ಮಾಡಿ

    ಹೊಳೆಆಲೂರ: ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರಲು ತಳ ಮಟ್ಟದ ಕಾರ್ಯಕರ್ತರ ಶ್ರಮ ಅಪಾರವಾಗಿದೆ. ಇದನ್ನು ಅರಿತುಕೊಂಡಿರುವ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಜಾತಿ-ಮತ ಪರಿಗಣಿಸದೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಂಬಲ ನೀಡಲು ಪದಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಗ್ರಾ.ಪಂ. ಚುನಾವಣೆ ಅಂಗವಾಗಿ ಗ್ರಾಮದ ಶಿವಪಾರ್ವತಿ ಮಾಂಗಲ್ಯ ಮಂದಿರದಲ್ಲಿ ಹೊಳೆಆಲೂರ ಹೋಬಳಿಯ ಮಂಡಲ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ರಾಜ್ಯ ಹಾಗೂ ಕೇಂದ್ರದಲ್ಲಿ ಜನಪರ ಆಡಳಿತ ನೀಡುತ್ತಿರುವ ಬಿಜೆಪಿಯಲ್ಲಿ ಸಹಜವಾಗಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಕಾರ್ಯಕರ್ತರ ದೊಡ್ಡ ಪಟ್ಟಿಯೇ ಇದೆ. ಆದರೆ ಪಕ್ಷದ ಪದಾಧಿಕಾರಿಗಳು ಸೂಚಿಸಿದವರ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನೆರೆ ಹಾವಳಿ, ಕರೊನಾ ಸಂದಭದಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೆ ನ್ಯಾಯ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಯಶಸ್ವಿಯಾಗಿ ಜರುಗಿರುವುದರಿಂದ ಧೈರ್ಯದಿಂದ ಮತ ಕೇಳಿ ಶೇ.80 ರಷ್ಟು ಸ್ಥಾನಗಳನ್ನು ಗೆದ್ದು ಪಕ್ಷದ ಸ್ಥಾನ ಗಟ್ಟಿಗೊಳಿಸಬೇಕು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ ಮಾತನಾಡಿ, ಪ್ರಾಮಾಣಿಕ ಕಾರ್ಯತರನ್ನು ಗುರುತಿಸಿ, ಅವರನ್ನು ಬೆಂಬಲಿಸಿ ಆಯ್ಕೆಗೊಳಿಸಲು ಪಕ್ಷ ಸೂಚನೆ ನೀಡಿದೆ. ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು. ಪಕ್ಷ ವಿರೋಧಿ ಕೆಲಸ ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

    ಬೆಳವಣಕಿ ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ಹೊಳೆಆಲೂರ ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ, ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ತಾ.ಪಂ. ಸದಸ್ಯ ಜಗದೀಶ ಬ್ಯಾಡಗಿ, ವೀರಪಾಕ್ಷಗೌಡ್ರ ಪಾಟೀಲ, ರಾಮನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಸಿ. ಪಾಟೀಲ, ಡಿ.ಕೆ. ಕುಲಕರ್ಣಿ, ತಾ.ಪಂ. ಅಧ್ಯಕ್ಷೆ ಪ್ರೇಮಾ ನಾಯಕ, ಲಿಂಗರಾಜ ಪಾಟೀಲ, ವೀರಸಂಗಯ್ಯ ಮಹಾಕಾಶಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts