More

    ಬಿಸಿಯೂಟ ಯೋಜನೆ ಕಾಲೇಜಿಗೂ ವಿಸ್ತರಿಸಿ- ತಹಸೀಲ್ದಾರ್‌ಗೆ ನೌಕರರ ಮನವಿ

    ಲಿಂಗಸುಗೂರು: ಬಿಸಿಯೂಟ ಯೋಜನೆಯನ್ನು ಕಾಲೇಜು ಮಟ್ಟದವರೆಗೆ ವಿಸ್ತರಿಸುವುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಕೆಲಸ ಬಂದ್ ಮಾಡಿ ಫೆ.3 ರಿಂದ ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಸಿ ಕಚೇರಿ ತಹಸೀಲ್ದಾರ್ ಶಮ್ ಶಾಲಂರಿಗೆ ಬಿಸಿಯೂಟ ನೌಕರರು ಮಂಗಳವಾರ ಮನವಿ ಸಲ್ಲಿಸಿದರು.

    2012 ರಲ್ಲಿ ಭಾರತ ಕಾರ್ಮಿಕ ಸಮ್ಮೇಳನದಲ್ಲಿ ಕಾರ್ಮಿಕರನ್ನು ನೌಕರರೆಂದು ಪರಿಗಣಿಸಬೇಕೆಂದು ತೀರ್ಮಾನಿಸಿದರೂ ಜಾರಿಯಾಗಿಲ್ಲ. 7ನೇ ವೇತನ ಆಯೋಗ 18 ಸಾವಿರ ಕನಿಷ್ಠ ಕೂಲಿ ನೀಡಲು ಶಿಫಾರಸು ಮಾಡಿದೆ. ಭಾರತದ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕನಿಷ್ಠ ಕೂಲಿ 21 ಸಾವಿರ ನೀಡಬೇಕೆಂದು ಒತ್ತಾಯಿಸುತ್ತಿವೆ. ಆದರೆ, ಸದರಿ ಯೋಜನೆ ಖಾಸಗೀಕರಣಗೊಳಿಸಿ ಕೆಲ ಧಾರ್ಮಿಕ ಸಂಸ್ಥೆಗಳಿಗೆ ನೀಡಲು ಚಿಂತನೆ ನಡೆಸಿರುವುದು ಖಂಡನೀಯ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಸದಸ್ಯೆ ಶರಣಮ್ಮ ರೋಡಲಬಂಡಾ, ಗೌರವಾಧ್ಯಕ್ಷ ಎಂ.ಡಿ.ಹನೀಫ್, ತಾಲೂಕು ಕಾರ್ಯದರ್ಶಿ ನಾಗರತ್ನ, ಖಜಾಂಚಿ ಅಕ್ಕಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts