More

    ಕೃಷಿ ಚಟುವಟಿಕೆ ಚುರುಕು

    ಭರಮಸಾಗರ: ಲಾಕ್‌ಡೌನ್ ನಡುವೆ ಹಳ್ಳಿಗಳಲ್ಲಿ ರೈತರು ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ. ಮೆಕ್ಕೆಜೋಳ, ರಾಗಿ ಬಿತ್ತನೆಗೂ ಮುನ್ನ ಜಮೀನನ್ನು ಹದಗೊಳಿಸುವ ಕಾರ್ಯ ಆರಂಭಗೊಂಡಿದೆ.

    ಮೇ ಮೊದಲ ವಾರದಿಂದ ಸಾಮಾನ್ಯವಾಗಿ ಬಿತ್ತನೆ ಸಿದ್ಧತೆ ಆರಂಭವಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಕೃಷಿ ಚಟುವಟಿಕೆ ನಿಂತಿದ್ದವು. ಸ್ವಂತ ಎತ್ತುಗಳು ಹೊಂದಿರುವ ಅನೇಕ ರೈತರು ಭೂಮಿ ಹದ ಕಾರ್ಯ ಕೈಗೊಂಡಿದ್ದಾರೆ.

    ಬೀಜ, ಗೊಬ್ಬರ ದಾಸ್ತಾನು: ರೈತರು ಸ್ಥಳೀಯವಾಗಿ ಸಿಗುವ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೆಲವೆಡೆ ಬೀಜ, ಗೊಬ್ಬರದ ಕೊರತೆ ಎದುರಾಗಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

    ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಅಗತ್ಯವಾದ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಕೃಷಿ ಸಹಾಯಕ ಶ್ರೀನಿವಾಸ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts