More

    ಸ್ಪರ್ಧೆಯೊಂದಿಗೆ ಬಿಎ ಪರೀಕ್ಷೆಗೂ ತಯಾರಾಗುತ್ತಿದ್ದಾರೆ ಸ್ಟಾರ್​ ಶೂಟರ್​…!

    ನವದೆಹಲಿ: ಭಾರತದ ಭರವಸೆಯ ಶೂಟರ್​ ಮನು ಭಾಕರ್​, ಅಂತಾರಾಷ್ಟ್ರೀಯ ಟೂರ್ನಿ ವೇಳೆಯಲ್ಲೂ ಓದಿನತ್ತ ಗಮನಹರಿಸಿದ್ದಾರೆ. ಕ್ರೋವೆಷಿಯಾದ ರಾಜಧಾನಿ ಜಾಗ್ರೇಬ್​ನಲ್ಲಿ ನಡೆಯುತ್ತಿರುವ ಯುರೋಪಿಯನ್​ ಚಾಂಪಿಯನ್​ಷಿಪ್​ನಲ್ಲಿ ಪಾಲ್ಗೊಂಡಿರುವ ಮನು ಭಾಕರ್​, ತಾವು ತಂಗಿರುವ ಹೋಟೆಲ್​ ಕೊಠಡಿಯಲ್ಲೇ ಕುಳಿತು ಬಿಎ ಪದವಿ ಪರೀಕ್ಷೆ ಬರೆಯಲಿದ್ದಾರೆ. ಪಿಸ್ತೂಲ್​ ಬದಿಗಿಟ್ಟು ಪೆನ್​ ಕೈಗೆತ್ತಿಕೊಂಡು ಬಿಎ ಪದವಿಯ 4ನೇ ಸೆಮಿಸ್ಟರ್​ ಪರೀಕ್ಷೆ ಎದುರಿಸಲಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಲೇಡಿ ಶ್ರೀ ರಾಮ್​ ಮಹಿಳಾ ಕಾಲೇಜಿನಲ್ಲಿ ರಾಜ್ಯ ಶಾಸ್ತ್ರ ಓದುತ್ತಿರುವ ಮನು ಭಾಕರ್​ ಅವರ ಪರೀಕ್ಷೆ ಮೇ 18 ರಿಂದ ಆರಂಭಗೊಳ್ಳಲಿವೆ.

    ಇದನ್ನೂ ಓದಿ: ಸಿಟ್ಟಾದ ಟೆನಿಸ್ ತಾರೆ ಜೋಕೊವಿಕ್ ಕೋರ್ಟ್‌ನಲ್ಲಿ ಮಾಡಿದ್ದೇನು ಗೊತ್ತೇ?

    ಮೇ 20 ರಿಂದ ಚಾಂಪಿಯನ್​ಷಿಪ್​ ಆರಂಭಗೊಳ್ಳಲಿದ್ದು, ಮನು ಭಾಕರ್​ ಅವರ ಪದವಿ ಪರೀಕ್ಷೆ ಹಾಗೂ ಟೂರ್ನಿ ಏಕಕಾಲದಲ್ಲಿ ನಡೆಯಲಿವೆ. ಆದರೆ, ಸ್ಪರ್ಧೆಗೂ ಹಾಗೂ ಪರೀಕ್ಷೆಗೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭಾಕರ್​ ಸ್ಪಷ್ಟಪಡಿಸಿದ್ದಾರೆ. ಏಕಕಾಲದಲ್ಲಿ ಯಾವುದೇ ತೊಂದರೆ ಇಲ್ಲದೆ ಎರಡನ್ನೂ ನಿರ್ವಹಿಸುವೆ. ಇದಕ್ಕೂ ಮೊದಲು ಇದೇ ರೀತಿ ಮಾಡಿರುವೆ. ಪರೀಕ್ಷೆ ದಿನ ಯಾವುದೇ ಸ್ಪರ್ಧೆ ಇರುವುದಿಲ್ಲ. ಹೀಗಾಗಿ ಎರಡನ್ನೂ ಒಟ್ಟಿಗೆ ಕಾರ್ಯನಿರ್ವಹಿಸುವೆ ಎಂದು ಭಾಕರ್​ ಹೇಳಿದ್ದಾರೆ. ಮನು ಭಾಕರ್​ಗೆ ಓದಿನಲ್ಲೂ ತುಂಬಾ ಆಸಕ್ತಿ ಇದೆ. ಸ್ಪರ್ಧೆಗಳಿಗೆ ತೆರಳುವಾಗ ಯಾವಾಗಲೂ ಪುಸ್ತಕಗಳೊಂದಿಗೆ ತೆರಳುತ್ತಾಳೆ. ಈಗಾಗಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದು, ವೊಬೈಲ್​ ಸ್ಕ್ಯಾನರ್​ ಮೂಲಕ ಉತ್ತರ ಪತ್ರಿಕೆಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿಕೊಡಲಿದ್ದಾಳೆ ಎಂದು ಭಾಕರ್​ ತಂದೆ ರಾಮಕೃಷ್ಣನ್​ ಭಾಕರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಜಾಮೀನುರಹಿತ ವಾರೆಂಟ್, 

    ಮನು ಭಾಕರ್​, ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾರತದ ಪದಕದ ಭರವಸೆಯಾಗಿದ್ದಾರೆ. ಯೂತ್​ ಒಲಿಂಪಿಕ್ಸ್​, ಐಎಸ್​ಎಸ್ಎಫ್​ ವಿಶ್ವಕಪ್​ ಹಾಗೂ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾಕರ್​ ಸ್ವರ್ಣ ಪದಕ ಜಯಿಸಿದ್ದರು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಭಾಕರ್​ 25 ಮೀಟರ್​ ಪಿಸ್ತೂಲ್​ ಹಾಗೂ 10 ಮೀಟರ್​ ಏರ್​ ಪಿಸ್ತೂಲ್​ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

    ಲಸಿಕೆ ಪಡೆಯಲು ನಿರಾಕರಿಸಿದ್ದ ಕ್ರಿಕೆಟಿಗರು?  

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts