More

    ರಾಗಿ ತಿಂದರೆ ರೋಗವಿಲ್ಲ; ಇದರ ಪ್ರಯೋಜನಗಳು ತಿಳಿದರೆ, ದಿನಾ ತಿನ್ನೋದು ಗ್ಯಾರಂಟಿ..!

    Ragi benifits: ರಾಗಿ ಮುದ್ದೆಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದರಲ್ಲಿ ಅಮಿನೋ ಆಮ್ಲವಾಗಿರುವಂತಹ ಟ್ರಿಪ್ಟೊಫಾನ್ ಇದ್ದು, ಹಸಿವನ್ನು ಕಡಿಮೆ ಮಾಡುವುದು. ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ಮತ್ತು ಆರೋಗ್ಯಕಾರಿ ಕಾರ್ಬ್ಸ್ ಇದೆ. ಅಧಿಕ ಮಟ್ಟದ ನಾರಿನಾಂಶ ವು ಇದರಲ್ಲಿ ಇರುವ ಕಾರಣದಿಂದಾಗಿ ಪದೇ ಪದೇ ಹಸಿವಾಗುವುದನ್ನು ತಡೆಯುವುದು. ಇದರಲ್ಲಿ ಅಪರ್ಯಾಪ್ತ
    ಕೊಬ್ಬು ಇರುವ ಕಾರಣದಿಂದಾಗಿ ಇದು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ ಆಗಿರಲಿದೆ. ಹಾಗಿದ್ರೆ ಯಾವ ರೀತಿ ಅದನ್ನ ಸೇವಿಸಬೇಕು ಅನ್ನೋದನ್ನ ನೋಡೋಣ


    ಮಧುಮೇಹ
    ಇತ್ತೀಚಿನ ದಿನಗಳಲ್ಲಿ ಹದಿಹರೆಯದಲ್ಲೇ ಮಧುಮೇಹ ಸಮಸ್ಯೆಯು ಕಂಡುಬರುವುದು. ಇದು ಮಧುಮೇಹದ ಲಕ್ಷಣಗಳನ್ನು ತಗ್ಗಿಸುವುದು ಮತ್ತು ಅದೇ ರೀತಿಯ ಜಠರಗರುಳಿನ ಸಮಸ್ಯೆ ಕೂಡ. ರಾಗಿಯಲ್ಲಿ ಇರುವಂತಹ ನಾರಿನಾಂಶ ಮತ್ತು ಪಾಲಿಫೆನಾಲ್ ಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ನಾರಿನಾಂಶವು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಜೀರ್ಣಕ್ರಿಯೆಯನ್ನು ಕೂಡ. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಕಾರಣದಿಂದಾಗಿ ಅತಿಯಾಗಿ ತಿನ್ನುವುದು ಮತ್ತು ಮಧ್ಯರಾತ್ರಿ ಹಸಿವಾಗುವುದನ್ನು ತಡೆಯಬಹುದು.


    ದೇಹಕ್ಕೆ ತಂಪು:
    ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು ತುಂಬಾ ಕಡಿಮೆ ಇರುತ್ತದೆ. ದೇಹಕ್ಕೆ ಅಗತ್ಯ ಇರುವ ಒಳ್ಳೆಯ ಕೊಬ್ಬನ್ನು ನೀಡುತ್ತದೆ. ರಾಗಿಯು ಹೊಟ್ಟೆ ತುಂಬಿದಂತೆ ಮಾಡುವುದರ ಜೊತೆಗೆ ತಂಪನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಅನ್ನ, ಗೋಧಿ ಬದಲಿಗೆ ರಾಗಿ ಬಳಕೆ ಮಾಡಬಹುದು.
    ಕೊಲೆಸ್ಟ್ರಾಲ್​ ತಡೆಯುತ್ತೆ.


    ರಾಗಿಯಲ್ಲಿರುವ ಥ್ರೆಯೋನೈನ್ ಎನ್ನುವ ಅಂಶವು ಯಕೃತ್ ನಲ್ಲಿ ಕೊಬ್ಬು ಜಮೆ ಆಗದಂತೆ ತಡೆಯುವುದು. ರಕ್ತನಾಳದಲ್ಲಿ ಪದರವು ನಿರ್ಮಾಣ ವಾಗದಂತೆ ತಡೆದು, ರಕ್ತನಾಳವು ಬ್ಲಾಕ್ ಆಗದಂತೆ ತಡೆಯುವುದು. ಇದರಿಂದಾಗಿ ಹೃದಯಾಘಾತ ಮತ್ತು ಹೃದಯದ ಸಮಸ್ಯೆಗಳು ನಿವಾರಣೆ ಆಗುವುದು.


    ತ್ವಚೆಯ ವಯಸ್ಸು
    ರಾಗಿ ಮುದ್ದೆಯಲ್ಲಿ ಇರುವಂತಹ ಪೋಷಕಾಂಶಗಳು ಕಾಲಜನ್ ಉತ್ಪತ್ತಿ ಮಾಡುವುದು ಮತ್ತು ಇದು ಅಂಗಾಂಶಗಳನ್ನು ಸರಿಪಡಿಸಲು ನೆರವಾಗುವುದು. ರಾಗಿ ಮುದ್ದೆ ಸೇವನೆ ಮಾಡಿದ ಬಳಿಕ ಚರ್ಮವು ಕಾಂತಿಯುತವಾಗಿ ಬೆಳೆಯುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts