More

    ಏಪ್ರಿಲ್ 25 ಶೂನ್ಯ ನೆರಳಿನ ದಿನ; ನಾಳೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ!

    ಬೆಂಗಳೂರು: ನಾಳೆ( ಏಪ್ರಿಲ್ 25 ರಂದು) ಬೆಂಗಳೂರು ಅಪರೂಪದ ಆಕಾಶ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ, ದಿನದ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಬೆಳಕಿನಿಂದ ಯಾವುದೇ ನೆರಳು ಇರುವುದಿಲ್ಲ.

    ಝೀರೋ ಶ್ಯಾಡೋ ಡೇ ಎಂಬ ಅಪರೂಪದ ವಿದ್ಯಮಾನ ನಾಳೆ( ಏಪ್ರಿಲ್ 25) ರಂದು ಮಧ್ಯಾಹ್ನ 12:17ಕ್ಕೆ ನಡೆಯಲಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಈ ಸಂದರ್ಭವನ್ನು ಗುರುತಿಸಲು ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಜನರು  ಅಪರೂಪದ ಘಟನೆಯನ್ನು ವೀಕ್ಷಿಸಲು ಸಜ್ಜಾಗುತ್ತಿದ್ದಾರೆ.

    ಶೂನ್ಯ ನೆರಳಿನ ದಿನ :
    ಸೂರ್ಯನ ಬಿಸಿಲು ನೇರವಾಗಿ ನಿಮ್ಮ ನೆತ್ತಿ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ನಿಮ್ಮ ನೆರಳು ಭೂಮಿಗೆ ಬೀಳೋದಿಲ್ಲ. ಈ ಅಪರೂಪದ ಕ್ಷಣ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನ 12.17ಕ್ಕೆ ಬರಲಿದೆ. ಈ ಸಮಯದಲ್ಲಿ ಉದ್ದವಾಗಿ ನಿಂತ ಯಾವುದೇ ವಸ್ತು, ವ್ಯಕ್ತಿಯ ನೆರಳು ಭೂಮಿಯ ಮೇಲೆ ಬೀಳೋದಿಲ್ಲ. ಸೂರ್ಯ ನಮ್ಮ ನೆತ್ತಿಯ ಮೇಲೇ ಇರುತ್ತಾನೆ. ಹೀಗಾಗಿ, ನಮ್ಮ ನೆರಳಿನ ಉದ್ದ ಅತ್ಯಂತ ಕಡಿಮೆ ಆಗುತ್ತದೆ. ಹೀಗಾಗಿ, ನಾವು ಬಿಸಿಲಿನಲ್ಲಿ ನಿಂತರೂ ನಮ್ಮ ನೆರಳು ಕಾಣೆಯಾಗಿರುತ್ತದೆ. ಇದನ್ನೇ ಶೂನ್ಯ ನೆರಳಿನ ದಿನ ಎನ್ನಲಾಗುತ್ತದೆ.

     ಇದನ್ನೂ ಓದಿ:  VIDEO | ಪಂಜಾಬಿ ಹಾಡಿಗೆ ಮಸ್ತ್​​ ಸ್ಟೆಪ್ಸ್​​​ ಹಾಕಿದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ 

    ಉತ್ತರಾಯಣದಲ್ಲಿ ಒಮ್ಮೆ ಹಾಗೂ ದಕ್ಷಿಣಾಯನ ಕಾಲದಲ್ಲಿ ಒಮ್ಮೆ ಈ ರೀತಿಯ ಶೂನ್ಯ ನೆರಳಿನ ದಿನ ಬಂದು ಹೋಗುತ್ತದೆ. ಭೂಮಿಯ ಮೇಲಿನ ಯಾವುದೇ ವ್ಯಕ್ತಿ, ಜೀವಿ, ವಸ್ತುವಿನ ನೆರಳೂ ಕೂಡಾ ಶೂನ್ಯ ನೆರಳು ಸಂಭವಿಸುವ ವೇಳೆ ಕಾಣೋದಿಲ್ಲ.

    ವರ್ಷದಲ್ಲಿ 2 ಬಾರಿ ಕಾಣಸಿಗುವ ಅಪರೂಪ ದೃಶ್ಯ:
    ಶೂನ್ಯ ನೆರಳಿನ ದಿನವು ವರ್ಷದಲ್ಲಿ 2 ಬಾರಿ ಬರುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಜನರು ಈ ಶೂನ್ಯ ನೆರಳಿನ ದಿನಕ್ಕೆ ವರ್ಷಕ್ಕೆರಡು ಬಾರಿ ಸಾಕ್ಷಿಯಾಗುತ್ತಾರೆ. ಈ ವಿದ್ಯಮಾನ ಈ ವರ್ಷ ಏಪ್ರಿಲ್ 25ರಂದು ಕಾಣ ಸಿಗಲಿದೆ ಎಂದು ಖಗೋಳ ಭೌತ ಶಾಸ್ತ್ರಜ್ಞ ದೇಬಿಪ್ರಸೋದ್ ದುರೈ ಹೇಳಿದ್ದಾರೆ.

    ಬೇರೊಬ್ಬಳನ್ನು ವಿವಾಹವಾದ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್​ ಎರಚಿದ ಪ್ರಿಯತಮೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts