ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಐಟಿ ಅಧಿಕಾರಿಗಳು: ಗುತ್ತಿಗೆದಾರರು, ಉದ್ಯಮಿ ಮನೆಗಳ ಮೇಲೆ ದಾಳಿ

IT Raid
Published on

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರು, ಚಾರ್ಟೆಡ್​ ಅಕೌಂಟೆಂಟ್​ ಹಾಗೂ ಉದ್ಯಮಿಗಳ ಮನೆ ಮೇಲೆ ದಾಳಿ ಮಾಡುವ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ.

ನೀರಾವರಿ ಇಲಾಖೆಗೆ ಸಂಬಂಧಿಸಿದ ಐಟಿ ದಾಳಿ ಇದಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಮೂರು ಇನ್ನೋವಾ ಕಾರಿನಲ್ಲಿ ಬಂದ ಐಟಿ ಅಧಿಕಾರಿಗಳು ಸಹಕಾರ ನಗರದ ರಾಹುಲ್ ಎಂಟರ್ ಪ್ರೈಸಸ್ ಹಾಗೂ ಮಾನ್ಯತಾ ಟೆಕ್​ಪಾರ್ಕಿನ ಎನ್.ಆರ್.ರಾಯಲ್ ಮ್ಯಾನರ್ ಅಪಾರ್ಟ್ಮೆಂಟ್​ ಮೇಲೆ ದಾಳಿ ಪರಿಶೀಲನೆ ನಡೆಸುತ್ತಿದ್ದಾರೆ. 15 ಕ್ಕೂ ಅಧಿಕ ಜನರಿಗೆ ಸೇರಿದ ರಾಜ್ಯದ 50ಕ್ಕೂ ಅಧಿಕ ಕಡೆ ದಾಳಿ ನಡೆಸಿದ್ದಾರೆ. 300ಕ್ಕೂ ಅಧಿಕಾರಿಗಳ ತಂಡದಿಂದ ಐಟಿ ದಾಳಿ ನಡೆಸಿದೆ. 120 ಇನ್ನೋವಾ ಕ್ರಿಸ್ಟಾ ಕಾರುಗಳನ್ನ ಬುಕ್ ಮಾಡಿ ದಾಳಿ ನಡೆಸಲು ಅಧಿಕಾರಿಗಳು ಮೊದಲು ಸಿದ್ದತೆ ನಡೆಸಿದ್ದರು.

ಸುಮಾರು 7 ರಿಂದ 8 ಜನ ಐಟಿ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿದಿದೆ. ತೆರಿಗೆ ವಂಚನೆ ಹಾಗೂ ತೆರಿಗೆ ವಂಚನೆಗೆ ಸಹಾಯ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net