More

    ರಕ್ತಕಾರಿದ ಷೇರುಪೇಟೆ!

    ಮುಂಬೈ: ಕೊರೊನಾ ವೈರಸ್ ಸೋಂಕಿನ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಷೇರುಗಳ ಸೆಲ್​-ಆಫ್ ನಡೆದರೆ, ಭಾರತೀಯ ಷೇರುಪೇಟೆಯಲ್ಲಿ ಅದರ ಜತೆಗೆ ಯೆಸ್​ ಬ್ಯಾಂಕ್ ಸಂಕಷ್ಟದ ಕಾರಣಕ್ಕೆ ಸೆನ್ಸೆಕ್ಸ್​, ನಿಫ್ಟಿಗಳು ಬಡ್ಲಬಾತ್ ನಲ್ಲಿ ಮುಳುಗಿವೆ.

    ಶುಕ್ರವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲೇ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ)ನ ಸೆನ್ಸೆಕ್ಸ್​ 1,459 ಅಂಶ ಕುಸಿದು ನೆಲಕಚ್ಚಿ, ವಹಿವಾಟು ಮುಂದುವರಿಸಿತ್ತು. ದಿನದ ಅಂತ್ಯಕ್ಕೆ 30 ಷೇರುಗಳ ಸೆನ್ಸೆಕ್ಸ್​ 893.99 ಅಂಶ (2.32%) ಕುಸಿದು 37,576.62ರಲ್ಲಿ ವಹಿವಾಟು ಕೊನೆಗೊಳಿಸಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ)ನ ಸೂಚ್ಯಂಕ ನಿಫ್ಟಿ 279.55 ಅಂಶ (2.48%) ಕುಸಿದು 10,989.45ರಲ್ಲಿ ವಹಿವಾಟು ಮುಗಿಸಿದೆ.

    ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಯೆಸ್​ ಬ್ಯಾಂಕ್​ ಅನ್ನು ಆರ್​ಬಿಐ ತನ್ನ ಸುಪರ್ದಿಗೆ ತೆಗೆದುಕೊಂಡು ಗ್ರಾಹಕರ ಹಣ ವಿತ್​ಡ್ರಾವಲ್​ಗೆ ಗರಿಷ್ಠ 50,000 ರೂಪಾಯಿ ಮಿತಿ ಹೇರಿದ ಪರಿಣಾಮ, ಅದರ ಷೇರುಗಳ ಮೌಲ್ಯ ಶೇಕಡ 55ಕ್ಕೂ ಹೆಚ್ಚು ಕುಸಿತ ಕಂಡಿವೆ. ಈ ಅನಿರೀಕ್ಷಿತ ಬೆಳವಣಿಗೆ ಗುರುವಾರ ಸಂಜೆ ನಡೆದಿತ್ತು.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಟಾಟಾ ಸ್ಟೀಲ್​ ಷೇರುಗಳು ಹೆಚ್ಚಿನ ಅಂದರೆ ಗರಿಷ್ಠ ಶೇಕಡ 6.51 ನಷ್ಟ ಅನುಭವಿಸಿದರೆ, ಎಸ್​ಬಿಐ, ಇಂಡಸ್​ಇಂಡ್ ಬ್ಯಾಂಕ್​, ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​, ಒಎನ್​ಜಿಸಿ ಷೇರುಗಳು ಕೂಡ ನಷ್ಟದಲ್ಲಿ ನಂತರದ ಸ್ಥಾನದಲ್ಲಿವೆ. ಇದೇ ವೇಳೆ, ಬಜಾಜ್ ಆಟೋ, ಮಾರುತಿ, ಏಷ್ಯನ್ ಪೇಂಟ್ಸ್​ ಷೇರುಗಳು ಮಾತ್ರವೇ ಲಾಭಾಂಶ ದಾಖಲಿಸಿವೆ. ಒಟ್ಟಾರೆ ವಾರದ ಅವಧಿಯಲ್ಲಿ ಸೆನ್ಸೆಕ್ಸ್​ ಒಟ್ಟು 720.67 ಅಂಶ (1.88%) ಕುಸಿದರೆ, ನಿಫ್ಟಿ 212.30 ಅಂಶ(1.89%) ಕುಸಿತ ದಾಖಲಿಸಿವೆ.

    ಬಿಎಸ್​ಇಯ ಸೆಕ್ಟೋರಲ್ ಸೂಚ್ಯಂಕಗಳು ಎಲ್ಲವೂ ನಷ್ಟದಲ್ಲೇ ವಹಿವಾಟು ಮುಗಿಸಿವೆ. ಮೆಟಲ್​ ಸೆಕ್ಟರ್​ ಶೇಕಡ 4.40 , ಬ್ಯಾಂಕೆಕ್ಸ್​, ಹಣಕಾಸು, ಎನರ್ಜಿ, ರಿಯಲ್ಟಿ, ಆಯಿಲ್ ಆ್ಯಂಡ್ ಗ್ಯಾಸ್, ಪವರ್ ಮತ್ತು ಇಂಡಸ್ಟ್ರಿಯಲ್ಸ್​ ನಷ್ಟದಲ್ಲಿ ನಂತರದ ಸ್ಥಾನದಲ್ಲಿವೆ. ಇದೇ ರೀತಿ ಬಿಎಸ್​ಇ ಮಿಡ್​ಕ್ಯಾಪ್​ ಮತ್ತು ಸ್ಮಾಲ್ ಕ್ಯಾಪ್​ ಸೂಚ್ಯಂಕಗಳು ಕೂಡ ಶೇಕಡ 2.36ರಷ್ಟು ಕುಸಿದಿವೆ.

    ಜಾಗತಿಕ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕಿನ ಭೀತಿ ಆವರಿಸಿದ್ದು, ಎಲ್ಲವೂ ನಷ್ಟದಲ್ಲೇ ವಹಿವಾಟು ನಡೆಸಿವೆ. ಶಾಂಘೈ, ಹಾಂಕಾಂಗ್​, ಸಿಯೋಲ್, ಟೋಕಿಯೋ ಶೇಕಡ 2ರಷ್ಟು ನಷ್ಟ ಅನುಭವಿಸಿವೆ. ಯುರೋಪಿಯನ್ ಷೇರುಪೇಟೆಯ ಸೂಚ್ಯಂಕಗಳೂ ಬೆಳಗ್ಗಿನ ಸೆಷನ್ಸ್​ನಲ್ಲಿ ನಷ್ಟ ಅನುಭವಿಸಿವೆ. (ಏಜೆನ್ಸೀಸ್​)

    ಷೇರುಪೇಟೆಯಲ್ಲಿ ಮತ್ತೆ ಬ್ಲಡ್​ಬಾತ್​: ಆರಂಭಿಕ ವಹಿವಾಟಿನಲ್ಲಿ 1,400ಕ್ಕೂ ಹೆಚ್ಚು ಅಂಶ ಕುಸಿದು ಕೆಳಕ್ಕುರುಳಿದ ಸೆನ್ಸೆಕ್ಸ್​, ನಿಫ್ಟಿ 11,000ಕ್ಕೂ ಕೆಳಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts