More

    ಪ್ರಶ್ನೆ ಮಾಡದಿರುವುದು ಕೂಡ ಒಂದು ರೀತಿಯ ಅನಕ್ಷರತೆ, ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಅಭಿಮತ

    ರಂಗತೋರಣ ನಾಟಕೋತ್ಸವದ ಸಮಾರೋಪ

    ಬಳ್ಳಾರಿ: ರಂಗತೋರಣ ವಿದ್ಯಾರ್ಥಿ ನಾಟಕೋತ್ಸವ ರಾಜ್ಯದ ರಂಗಾಸಕ್ತ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಾಟಕ ನೋಡುವುದರ ಜತೆಗೆ ಕಲಿಯುವುದಕ್ಕೂ ಇಲ್ಲಿ ಅವಕಾಶ ಇದೆ ಎಂದು ಎನ್‌ಎಸ್‌ಡಿ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.

    ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗತೋರಣ ಸಂಸ್ಥೆ ಆಯೋಜಿಸಿದ್ದ 13ನೇ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಭಾನುವಾರ ಮಾತನಾಡಿದರು. ಬೆಲೆ ಏರಿಕೆ ಸೇರಿ ಇತ್ಯಾದಿ ಸಮಸ್ಯೆಗಳನ್ನು ಜನರು ಪ್ರಶ್ನಿಸಬೇಕು. ಪ್ರಶ್ನಿಸದಿರುವುದು ಕೂಡ ಒಂದು ರೀತಿಯ ಅನಕ್ಷರತೆಯಾಗಿದೆ. ಈ ಅನಕ್ಷರತೆ ನಿವಾರಣೆಗೆ ನಾಟಕ ಅಗತ್ಯವಾಗಿದೆ ಎಂದರು.

    ರಂಗಭೂಮಿ ಕಲಾವಿದರು ಎದೆಗುಂದ ಬೇಕಿಲ್ಲ. ಪ್ರೇಕ್ಷಕರು ನಾಟಕ ನೋಡಲು ಬಂದೇ ಬರುತ್ತಾರೆ. ಅಜ್ಞಾನಕ್ಕೆ ರಂಗಭೂಮಿಯೇ ಮದ್ದು ಆಗಿದೆ ಎಂದು ಸಿ.ಬಸವಲಿಂಗಯ್ಯಅಭಿಪ್ರಾಯಪಟ್ಟರು.

    ನಾಟಕಕಾರ ರಾಜಪ್ಪ ದಳವಾಯಿ, ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ, ಚಿತ್ರನಟ ಚಂದನ್ ಆಚಾರ್, ನಾಟಕೋತ್ಸವದ ಸರ್ವಾಧ್ಯಕ್ಷ ಪಿ.ಅಬ್ದುಲ್, ರಂಗತೋರಣ ಅಧ್ಯಕ್ಷ ಆರ್.ಭೀಮಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ನಾಟಕೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಲ್ಲೇದ ಪಂಪಾಪತಿ, ಕಾರ್ಯದರ್ಶಿ ಗಣಪಾಲ ಐನಾಥರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts