More

    ಸಾಧನೆಯ ಹಿಂದಿದೆ ಗುರುವಿನ ಪಾತ್ರ

    ಕಾನಹೊಸಹಳ್ಳಿ: ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಗುರುವಿನ ಪಾತ್ರವಿರುತ್ತದೆ ಎಂದು ನರಸಿಂಹನಗಿರಿ ಶ್ರೀವಾಲ್ಮೀಕಿ ವಿದ್ಯಾಸಂಸ್ಥೆ ಅಧ್ಯಕ್ಷರೂ ಆದ ಮಾಜಿ ಶಾಸಕ ಎನ್.ಟಿ.ಬೋಮ್ಮಣ್ಣ ಹೇಳಿದರು.
    ಎಸ್‌ಡಿಬಿಟಿ ಪ್ರೌಢಶಾಲೆಯ 2014-15ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶುಕ್ರವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಶಿಕ್ಷಕರು ಇರುತ್ತಾರೆ. ಗುರು ಎನ್ನುವ ಪದವನ್ನು ಅರ್ಥೈಸಲು ಸಾಧ್ಯವಿಲ್ಲ. ಗುರು ಹಾಗೂ ವಿದ್ಯಾರ್ಥಿಗಳ ನಡುವೆ ಭಾವನಾತ್ಮಕ ಸಂಬಂಧವಿರುತ್ತದೆ. ನೆಚ್ಚಿನ ಶಿಷ್ಯನ ಪ್ರಗತಿಯನ್ನು ಕಂಡು ಶಿಕ್ಷಕ ಹೆಮ್ಮೆ ಪಡುತ್ತಾರೆ ಎಂದರು.
    ಮುಖ್ಯಶಿಕ್ಷಕ ಜಿ.ಬಸಟೆಪ್ಪ ಮಾತನಾಡಿ, ಮುಂದೆ ಗುರಿ, ಹಿಂದೆ ಗುರು ಇರು ವಿದ್ಯಾರ್ಥಿಯು ಯಶಸ್ಸಿನ ಮಾರ್ಗದತ್ತ ದಾಪುಗಾಲು ಹಾಕುತ್ತಾನೆ ಎಂದರು. ಹಳೆಯ ವಿದ್ಯಾರ್ಥಿ ಪ್ರವೀಣ್ ಮಾತನಾಡಿದರು. ಶಿಕ್ಷಕರಾದ ಕೆ.ಮಂಜಣ್ಣ, ಮಹದೇವಪ್ಪ, ಕೆ.ಬಿ.ಹುಚ್ಚಪ್ಪ, ತಿಮ್ಮಣ್ಣ, ಬಸವರಾಜ್, ಮಲ್ಲಿಕಾರ್ಜುನ, ರಾಜಕುಮಾರ್. ಶಿವಪ್ರಸಾದ್ ಇದ್ದರು. ಕೆ.ಚಂದ್ರಶೇಖರ್ ಸ್ವಾಗತಿಸಿದರು. ಸಿ.ಎಂ.ಚೈತ್ರಾ ಪ್ರಾರ್ಥಿಸಿದರು. ಎನ್.ಪರಮೇಶ್. ನಿರೂಪಿಸಿದರು. ಅಂಕಿತಾ, ಸುಷ್ಮಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts