More

    ಮೂಲಭೂತ ಹಕ್ಕು ಪಡೆಯಲು ಹೋರಾಟ ಅನಿವಾರ್ಯ

    ಹೂವಿನಹಡಗಲಿ: ಛಾಯಾಗ್ರಾಹಕರ ಮೂಲಭೂತಹಕ್ಕುಗಳಿಗಾಗಿ ಸರ್ಕಾರದ ಗಮನ ಸೆಳೆಯಲು ರಾಜ್ಯಾದ್ಯಾಂತ ಸಂಘಟನೆಗಳ ಅವಶ್ಯ ಎಂದು ಕರ್ನಾಟಕ ರಾಜ್ಯ ವೃತ್ತಿಪರ ಛಾಯಾಗ್ರಾಹಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಲ್ಸನ್ ಜಾಜ್ ಗೊನ್ಸಾಲಿಸ್ ಹೇಳಿದರು.
    ಶಿವಶಾಂತವೀರ ಸಮುಧಾಯ ಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಛಾಯಾಗ್ರಾಹಕರಿಗೆ ಮೂಲಸೌಕರ್ಯಗಳನ್ನು ಕೊಡಲು ನಿರ್ಲಕ್ಷ ಮಾಡಲಾಗುತ್ತಿದೆ. ಸಂಘಟನೆಗಳ ಒಗ್ಗಟ್ಟಿನಿಂದ ಮಾತ್ರ ನಾವು ನಮ್ಮ ಹಕ್ಕುಗಳನ್ನು ಪಡೆಯಬಹುದಾಗಿದೆ ಎಂದರು.
    ಗವಿಮಠದ ಶ್ರೀ ಹಿರಿಯಶಾಂತವೀರ ಸ್ವಾಮೀಜಿ ಮಾತನಾಡಿ, ಛಾಯಾಗ್ರಾಹಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಂಸ್ಕಾರ ನೀಡಬೇಕು. ಛಾಯಾಗ್ರಹಕರು ಸಂಘಟನೆಯ ಮೂಲಕ ಬಡ ವರ್ಗದವರಿಗೆ ಸಹಾಯ ಸಹಕಾರ ನೀಡಬೇಕು ಎಂದರು.
    ಛಾಯಾಗ್ರಹಕರ ಸಂಘದ ತಾಲೂಕು ಅಧ್ಯಕ್ಷ ಎಂ.ಸಂತೋಷ್ ಕುಮಾರ್, ಉಪಾಧ್ಯಕ್ಷ ಸೋಗಿ ನಾಗರಾಜ್, ಕಾರ್ಯದರ್ಶಿ ಅಲ್ಲಾಬಕ್ಷಿ, ಗೌರವಾಧ್ಯಕ್ಷ ವಿಶ್ವನಾಥ್ ಶಿರಸಂಗಿ, ಛಾಯಾಗ್ರಾಹಕರ ಸಂಘದ ಹರಪನಹಳ್ಳಿ ತಾಲೂಕು ಅಧ್ಯಕ್ಷ ಶಿರಸಾಚಾರಿ, ಬೆಂಗಳೂರು ನಿನ್ಮಯ ಕಲರ್ ಲ್ಯಾಬ್‌ನ ಪಾಟೀಲ್, ಛಾಯಾಗ್ರಾಹಕರಾದ ಬಿ.ಸಿದ್ದೇಶ್, ಗಡಗಿ ಶಿವಕುಮಾರ್, ಆನಂದ್, ವಿಶ್ವನಾಥ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts