More

    ಪ್ರತಿ ಮಾತೃಭಾಷೆ ಹಿಂದೆಯೂ ಇದೆ ಒಂದು ಸಂಸ್ಕೃತಿ

    ರಿಪ್ಪನ್‌ಪೇಟೆ: ಸುದೀರ್ಘ ಇತಿಹಾಸ ಹೊಂದಿರುವ ಪ್ರತಿ ಸಮುದಾಯದ ಮಾತೃಭಾಷೆಯ ಹಿಂದೆಯೂ ಒಂದು ಸಂಸ್ಕೃತಿ ಇರುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಕನ್ನಡ ಭಾಷೆ ಶಿಕ್ಷಕಿ ಸುಧಾ ಪಿ.ಹೆಗಡೆ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರೌಢಶಾಲಾ ವಿಭಾಗದ ಪ್ರಾಂಗಣದಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾತೃಭಾಷೆ ದಿನಾಚರಣೆಯಲ್ಲಿ ಮಾತನಾಡಿ, ಪ್ರಪಂಚದಲ್ಲಿ 6 ಸಾವಿರಕ್ಕೂ ಹೆಚ್ಚು ಮಾತೃ ಭಾಷೆಗಳಿವೆ. ಇವುಗಳೆಲ್ಲವೂ ವಿಭಿನ್ನ ಸಂಸ್ಕೃತಿ ಹೊಂದಿದ್ದು ವೈಶಿಷ್ಟೃ ಪೂರ್ಣವಾದ ಇತಿಹಾಸವನ್ನು ಹೊಂದಿವೆ. ನಮ್ಮ ಸುತ್ತಮುತ್ತಲಿನಲ್ಲಿಯೇ ಅನೇಕ ಭಾಷಿಕರು ಇರುತ್ತಾರೆ. ಇತರ ಭಾಷೆಗಳನ್ನು ಗೌರವಿಸಿ ನಮ್ಮ ಮಾತೃ ನುಡಿಯನ್ನು ಉಳಿಸಿಕೊಳ್ಳಬೇಕು. ಎಲ್ಲ ವಿಚಾರ, ಆಚಾರಗಳನ್ನು ಅಧ್ಯಯನ ಮಾಡಿದಾಗ ಮಾತ್ರ ವಿಶ್ವದಲ್ಲಿನ ಭಾಷಾ ಬ್ರಹ್ಮಾಂಡವೇ ತೆರೆದುಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿಭಾಷೆಯ ತಿಳಿವಳಿಕೆಯು ಅಗತ್ಯವಿದ್ದು ಅರಿತುಕೊಳ್ಳುವಲ್ಲಿ ಆಸಕ್ತಿವಹಿಸಿ ಎಂದರು.
    ಕಸಾಪ ತಾಲೂಕು ಅಧ್ಯಕ್ಷ ತ.ಮ.ನರಸಿಂಹ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮೇಲಸ್ತುವಾರಿ ಸಮಿತಿ ಅಧ್ಯಕ್ಷ ಎಚ್.ವಿ.ಪ್ರಶಾಂತ, ಉಪ ಪ್ರಾಚಾರ್ಯ ಕೆಸಿನಮನೆ ನಾ.ರತ್ನಾಕರ, ಸಾಹಿತಿ ಹ.ಅ.ಪಾಟೀಲ, ಕುಕ್ಕಳಲೆ ಈಶ್ವರಪ್ಪ, ಶಿಕ್ಷಕ ನೂರುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts