More

    ಕರೊನಾ ಸೋಂಕಿನ ಶಂಕೆಯಲ್ಲಿ ಕ್ವಾರಂಟೇನ್‌ನಲ್ಲಿದ್ದೀರಾ? ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ

    ನವದೆಹಲಿ: ಕರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡಬಂದಲ್ಲಿ ಅಂಥ ವ್ಯಕ್ತಿಗಳನ್ನು 14 ದಿನ ಕ್ವಾರಂಟೇನ್‌ನಲ್ಲಿ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವರು ಬಳಸುವ ಶೌಚಗೃಹವನ್ನು ಕೂಡ ಬೇರೊಬ್ಬರು ಬಳಸುವಂತಿಲ್ಲ. ಇವರ ಗಂಟಲ ದ್ರವದ ಪರೀಕ್ಷಾ ವರದಿ ಬರುವವರೆಗೂ ತಮ್ಮದೇ ಮನೆಯಲ್ಲಿ, ತಮ್ಮವರ ಎದುರಿನಲ್ಲೇ ಪ್ರತ್ಯೇಕವಾಗಿಯೇ ಇರಬೇಕಾಗುತ್ತದೆ. ಇದೊಂದು ರೀತಿಯಲ್ಲಿ ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತದೆ.

    ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು, ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಆಯುರ್ವೇದ ಮತ್ತು ಯೋಗದಲ್ಲಿ ಮದ್ದು ಇದೆ. ಅದು ಏನು?

    ವಿಟಮಿನ್ ಡಿ ಕೊರತೆ ನೀಗಿಸಿಕೊಳ್ಳಲು ಹೀಗೆ ಮಾಡಿ: ಕ್ವಾರಂಟೇನ್‌ನಲ್ಲಿ ಇರುವ ಸಂದರ್ಭದಲ್ಲಿ ಹೊರಹೋಗುವಂತಿಲ್ಲ. ಹಾಗಾಗಿ ದೇಹದ ಮೇಲೆ ಬಿಸಿಲು ಬೀಳುವುದಿಲ್ಲ. ಇದರಿಂದ ಸಹಜವಾಗಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಮನೆಯೊಳಗೆ ಇದ್ದು, ಇದನ್ನು ನೀಗಿಸಿಕೊಳ್ಳಲು ಹೀಗೆ ಮಾಡಬಹುದು. ಈ ಕೊರತೆಯನ್ನು ನೀಗಿಸಿಕೊಳ್ಳಲು ಹೈನು ಆಧಾರಿತ ಪದಾರ್ಥಗಳು, ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ದೇಹದಲ್ಲಿ ನೈಸರ್ಗಿಕವಾಗಿ ವಿಟಮಿನ್ ಡಿ ಹೆಚ್ಚಾಗಿ, ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ: ಏಲಕ್ಕಿ, ಸೋಂಪಿನಕಾಳು, ಅರಿಷಿಣ ಮತ್ತು ಕಪ್ಪುಎಳ್ಳು (ಬ್ಲ್ಯಾಕ್ ಸೀಡ್) ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಯನ್ನು ಕಾಲು ಚಮಚದಂತೆ ನೀರಿನೊಂದಿಗೆ ಸೇವಿಸಬೇಕು.

    ಗಿಡಮೂಲಿಕೆ ಆಧಾರಿತ ಪಾನೀಯಗಳನ್ನು ಸೇವಿಸಿ: ಕ್ವಾರಂಟೇನ್‌ನಲ್ಲಿ ಇರುವ ಸಂದರ್ಭದಲ್ಲಿ ತಂಪುಪಾನೀಯಗಳು ಹಾಗೂ ತಂಪಾದ ಪದಾರ್ಥಗಳನ್ನು ಸೇವಿಸಬಾರದು. ಇವನ್ನು ಸೇವಿಸುವುದರಿಂದ ಗಂಟಲ ಕೆರೆತದಂಥ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಗಿಡಮೂಲಿಕೆ ಆಧಾರಿತ ಪಾನೀಯಗಳನ್ನು ಸೇವಿಸಿ, ರೋಗನಿರೋಧಕಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಹೀಗೆ ಮಾಡಬೇಕು. 5 ಗ್ರಾಂ ಜೀರಿಗೆ, 5 ಗ್ರಾಂ ದಾಲ್ಚಿನ್ನಿ, 5 ಗ್ರಾಂ ಒಣದ್ರಾಕ್ಷಿ, 2 ಏಲಕ್ಕಿಯನ್ನು 300 ಎಂ.ಎಲ್ ನೀರಿನಲ್ಲಿ ಅರ್ಧ ಭಾಗ ನೀರು ಆವಿಯಾಗುವವರೆಗೆ ಕುದಿಸಬೇಕು. ನಂತರ ದಿನಕ್ಕೆ ಎರಡು ಅಥವಾ ಮೂರು ಬಾರಿಯಂತೆ ಇದನ್ನು ಸೇವಿಸಬೇಕು.

    ಒಣಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ: ಕ್ವಾರಂಟೇನ್‌ನಲ್ಲಿ ಇರುವ ಸಂದರ್ಭದಲ್ಲಿ ಕರಿದ ಪದಾರ್ಥಗಳು, ಜಂಕ್ ುಡ್‌ಗಳನ್ನು ಸೇವಿಸಬಾರದು. ಅದರ ಬದಲು ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾದಂಥ ಒಣಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಈ ಪದಾರ್ಥಗಳು ವಿಟಮಿನ್ ಬಿ6, ಒಮೇಗಾ 3 ಮತ್ತು ವಿಟಮಿನ್ ಇ ಅಂಶಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಜತೆಗೆ ಯಾವುದೇ ಬಗೆಯ ಸೋಂಕು ದೇಹವನ್ನು ಬಾಧಿಸದಂತೆ ನೋಡಿಕೊಳ್ಳುತ್ತವೆ.

    ಯೋಗಾಭ್ಯಾಸ ಮಾಡಿ: ಕ್ವಾರಂಟೇನ್‌ನಲ್ಲಿ ಇರುವ ಸಂದರ್ಭದಲ್ಲಿ ದೇಹವನ್ನು ಕ್ರಿಯಾಶೀಲವಾಗಿ ಇರಿಸಿಕೊಳ್ಳಲು ಯೋಗಾಭ್ಯಾಸ ಮಾಡುವುದು ಒಳಿತು. ಉತ್ಥಾನಾಸನ, ಅಧೋಮುಖಶ್ವಾನಾಸನ, ಮಾರ್ಜ್ಯಯಾಸನ, ಬಾಲಾಸನಗಳನ್ನು ಮಾಡುವುದರಿಂದ ಮಾನಸಿಕಸ್ಥಿಮಿತ ಸಾಧಿಸುವ ಜತೆಗೆ ಮನೋಲ್ಲಾಸಕ್ಕೆ ಕಾರಣವಾಗುತ್ತದೆ.
    (ವಿಶೇಷ ಸೂಚನೆ: ತಜ್ಞರ ಸಲಹೆ ಮೇರೆಗೆ ಇವೆಲ್ಲವನ್ನೂ ಮಾಡುವುದು ಒಳಿತು)

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts