More

    3 ತಿಂಗಳು ಮಾಸಿಕ ಕಂತಿನ ವಿನಾಯ್ತಿ ಪಡೆಯುವ ಮುನ್ನ ಸಾವಿರ ಬಾರಿ ಯೋಚಿಸಿ!?

    ನವದೆಹಲಿ: ಕೋವಿಡ್​ 19 ಪಿಡುಗಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್​ಡೌನ್​ ಘೋಷಿಸಿದೆ. ಈ ಕಾರಣ ಭಾರತೀಯ ರಿಸರ್ವ್​ ಬ್ಯಾಂಕ್​, ಗೃಹ ಮತ್ತು ವಾಹನದ ಸಾಲದ ಮೂರು ತಿಂಗಳ ಮಾಸಿಕ ಕಂತಿನ ಪಾವತಿಗೆ ವಿನಾಯ್ತಿ ನೀಡಿರುವುದಾಗಿ ಹೇಳಿದೆ. ಆದರೆ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆ? ಪಡೆದುಕೊಂಡರೆ ಏನಾಗುತ್ತದೆ? ಒಂದು ವೇಳೆ ಬ್ಯಾಂಕ್​ಗಳು ಆರ್​ಬಿಐನ ಈ ನಿರ್ಧಾರವನ್ನು ಪಾಲಿಸಲು ನಿರಾಕರಿಸಿದರೆ ಏನು…. ಎಂಬ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನ ಇದಾಗಿದೆ.

    ವಾಸ್ತವದಲ್ಲಿ ಸಾಲದ ಮೂರು ತಿಂಗಳ ಮಾಸಿಕ ಕಂತಿನ ಪಾವತಿಗೆ ವಿನಾಯ್ತಿ ನೀಡುವಂತೆ ಆರ್​ಬಿಐ ಬ್ಯಾಂಕ್​ಗಳಿಗೆ ಆದೇಶಿಸಿಲ್ಲ. ಬದಲಿಗೆ ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುವ ಸಾಧ್ಯತೆ ಬಗ್ಗೆ ಚಿಂತನೆ ನಡೆಸಿ, ನಿರ್ಧಾರ ಕೈಗೊಳ್ಳುವುದನ್ನು ಬ್ಯಾಂಕ್​ಗಳ ವಿವೇಚನೆಗೆ ಬಿಟ್ಟಿದೆ.
    ನಿಜವಾಗಿ ಹೇಳಬೇಕೆಂದರೆ ಆರ್​ಬಿಐನ ಈ ನಿರ್ಧಾರವನ್ನು ಬ್ಯಾಂಕ್​ಗಳು ಒಪ್ಪಿಕೊಳ್ಳಲೇಬೇಕು ಎಂದೇನಿಲ್ಲ. ಆರ್ಥಿಕ ಆರೋಗ್ಯದ ನೆಪವೊಡ್ಡಿ, ಮಾಸಿಕ ಕಂತುಗಳ ಪಾವತಿಗೆ ವಿನಾಯ್ತಿ ನೀಡದಿರಲೂ ಬಹುದು. ಆದರೆ ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಮಾತ್ರ ಆರ್​ಬಿಐ ನಿರ್ಧಾರವನ್ನು ಜಾರಿಗೊಳಿಸುವುದಾಗಿ ಹೇಳಿದೆ.

    ಬಡ್ಡಿ ಬೆಳೆಯುತ್ತೆ: ಮೂರು ತಿಂಗಳ ಮಾಸಿಕ ಕಂತಿನ ಪಾವತಿಯ ವಿನಾಯ್ತಿ ಪಡೆದುಕೊಂಡರೆ ಏನಾಗುತ್ತದೆ? ಬಡ್ಡಿ ಬೆಳೆಯುತ್ತದೆ, ಸಾಲ ತೀರುವಳಿ ಅವಧಿ ಹೆಚ್ಚುವರಿ ಮೂರು ತಿಂಗಳಿಗೆ ಮುಂದುವರಿಯುತ್ತದೆ.

    ಆರ್​ಬಿಐನ ನಿರ್ಧಾರದ ಪ್ರಕಾರ ಮಾ.1ರಿಂದ ಮೇ 31ರ ನಡುವಿನ ಮಾಸಿಕ ಕಂತುಗಳಿಗೆ ಈ ವಿನಾಯ್ತಿ ಅನ್ವಯವಾಗುತ್ತದೆ. ಈ ಸೌಲಭ್ಯ ಪಡೆದುಕೊಳ್ಳುವುದರಿಂದ, ಈ ಮೂರು ತಿಂಗಳ ಅವಧಿಯಲ್ಲಿ ಬಾಕಿವುಳಿಯುವ ಅಸಲಿನ ಮೇಲೆ ಹೆಚ್ಚುವರಿ ಬಡ್ಡಿ ಬೆಳೆಯುತ್ತದೆ. ಜತೆಗೆ ಕಂತಿನ ಪಾವತಿ ಅವಧಿ ಹೆಚ್ಚುವರಿಯಾಗಿ ಮೂರು ತಿಂಗಳು ಮುಂದುವರಿಯುತ್ತದೆ. ಆದ್ದರಿಂದ ತೀರಾ ಅನಿವಾರ್ಯ ಅಲ್ಲದ ಹೊರತು ಈ ಸೌಲಭ್ಯವನ್ನು ಪಡೆಯದಿರುವುದು ಒಳಿತು ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

    ಕ್ರೆಡಿಟ್​ಕಾರ್ಡ್​ ಪಾವತಿ ನಿಲ್ಲಿಸಬೇಡಿ: ಕ್ರೆಡಿಟ್​ಕಾರ್ಡ್​ ಮೂಲಕ ಖರೀದಿ ಮಾಡಿ ಮೊತ್ತದ ಪಾವತಿಯನ್ನು ಸಮಾನ ಮಾಸಿಕ ಕಂತಿಗೆ ಪರಿವರ್ತಿಸಿಕೊಂಡಿದ್ದರೆ, ಕಂತು ಪಾವತಿಸುವುದು ಒಳಿತು. ಇಲ್ಲವಾದಲ್ಲಿ, ಕಂತಿನ ಜತೆಗೆ ಕ್ರೆಡಿಟ್​ಕಾರ್ಡ್​ ಮೂಲಕ ಆ ತಿಂಗಳಲ್ಲಿ ಮಾಡಿದ ಖರೀದಿಯ ಮೊತ್ತ ಹೆಚ್ಚಾಗಿದ್ದರೆ, ಆ ಮೊತ್ತಕ್ಕೆ ಸಮನಾಗಿ ಮಾಸಿಕ ಕಂತಿನ ಮೇಲೂ ಬಡ್ಡಿ ವಿಧಿಸಲಾಗುತ್ತದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.

    VIDEO: ಕರೊನಾ ನೆಪದಲ್ಲಿ ಹಾಡು ಹೇಳಿದ್ರು ಜನಪ್ರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts