More

    ಆನ್‌ಲೈನ್ ವ್ಯವಹಾರದ ವೇಳೆ ಎಚ್ಚರ ಅಗತ್ಯ

    ಶಿವಮೊಗ್ಗ: ಆನ್‌ಲೈನ್ ವ್ಯವಹಾರ ಮಾಡುವಾಗ ಅತ್ಯಂತ ಜಾಗರೂಕತೆ ವಹಿಸಬೇಕಾದ್ದು ಅವಶ್ಯ. ಸ್ವಲ್ಪ ಎಚ್ಚರ ತಪ್ಪಿದರೂ ವಂಚನೆಗೆ ಒಳಗಾಗುತ್ತೇವೆ ಅಥವಾ ನಮ್ಮ ಮಾಹಿತಿಯ ದುರ್ಬಳಕೆ ಆಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವೀರಮಂಜು ಎಚ್ಚರಿಸಿದರು.

    ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಹ್ಯಾಕಿಂಗ್ ತೊಂದರೆ ಕುರಿತು ಸೋಮವಾರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಡಿಜಿಟಲ್ ವ್ಯವಸ್ಥೆಯಿಂದ ಹೆಚ್ಚು ಉಪಯೋಗವಾಗುತ್ತಿದೆ. ಆದರೆ ತೊಂದರೆ ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಮಾಹಿತಿ ಸೋರಿಕೆ ಅಥವಾ ಕಳ್ಳತನವಾದಲ್ಲಿ ತೊಂದರೆ ಕಟ್ಟಿಟ್ಟ ಬುತ್ತು. ಆದ್ದರಿಂದ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.
    ಅಂತರ್ಜಾಲದ ಬಳಕೆ ಹೆಚ್ಚಾಗುತ್ತಿದ್ದು, ಗೃಹೋಪಯೋಗಿ ವ್ಯವಸ್ಥೆಯಲ್ಲೂ ಇದು ಹಾಸುಹೊಕ್ಕಾಗಿದೆ. ಎಲ್ಲ ವ್ಯವಸ್ಥೆಗಳೂ ಸ್ಮಾರ್ಟ್ ಆಗುತ್ತಿವೆ. ನೆಟ್‌ನಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಆದರೆ ದುರ್ಬಲ ನೆಟ್‌ವರ್ಕ್ ವ್ಯವಸ್ಥೆ ಇದ್ದರೆ ಹ್ಯಾಕರ್‌ಗಳು ಸುಲಭವಾಗಿ ವಂಚನೆ ಮಾಡುತ್ತಾರೆ ಎಂದರು.
    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸೈಬರ್ ಬಳಕೆ ಬಗ್ಗೆ ಎಲ್ಲರೂ ತಿಳುವಳಿಕೆ ಹೊಂದಬೇಕು. ಡಿಜಿಟಲ್ ಯುಗ ಆಗಿರುವುದರಿಂದ ಸೈಬರ್ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಅವಶ್ಯ. ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಕಾಲ ಇದಾಗಿದೆ. ಸುರಕ್ಷಿತವಾಗಿ ಆನ್‌ಲೈನ್ ವ್ಯವಹಾರ ನಡೆಸಬೇಕು ಎಂದು ಹೇಳಿದರು.
    ಅಗಮ್ಯ ಸೈಬರ್ ಟೆಕ್ ಸಂಸ್ಥಾಪಕ ಮಹೇಶ್ ವಸ್ತ್ರದ್ ಹ್ಯಾಕಿಂಗ್ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಪ್ರಮುಖರಾದ ಬಿ.ಗೋಪಿನಾಥ್, ಎಂ.ರಾಜು, ಶಿಲ್ಪಾ ಗೋಪಿನಾಥ್, ಪರಮೇಶ್ವರ್, ಗಣೇಶ ಅಂಗಡಿ, ಮರಿಸ್ವಾಮಿ, ರಮೇಶ್ ಹೆಗ್ಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts