More

    ಗಿಡಕ್ಕೆ ಭಾರವಾದ ಲಿಂಬೆ, ಬಾಳೆ

    ಬಸವನಬಾಗೇವಾಡಿ: ಬೆವರು ಬಸಿದು ಗಿಡಗಳನ್ನು ಬೆಳೆಸಿ, ಪೋಷಿಸಿದ ರೈತರ ಕನಸುಗಳಿಗೆ ಕರೊನಾ ಹೆಮ್ಮಾರಿ ತಣ್ಣೀರೆರಚಿದೆ.
    ತಾಲೂಕು ನಂದಿಹಾಳ ಪಿಯು ಗ್ರಾಮದಲ್ಲಿ ಪರು ಕೊಲ್ಹಾರ ಎಂಬುವರು 9 ಎಕರೆ ಜಮೀನಿನಲ್ಲಿ 950 ನಿಂಬೆ ಗಿಡಗಳನ್ನು, ಸುರೇಶ ಬೆಂಕಿ ಎಂಬುವವರು 4 ಎಕರೆ ಜಮೀನದಲ್ಲಿ 450 ಲಿಂಬೆ ಗಿಡಗಳನ್ನು ಬೆಳೆಸಿದ್ದರು. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಉತ್ತಮ ಬೆಲೆ ಸಿಗಬಹುದೆಂದು ಕಾದಿದ್ದ ಅವರಿಗೆ ಕರೊನಾ ಹರಡಿರುವುದರಿಂದ 20 ದಿನಗಳಿಂದ ಮಾರುಕಟ್ಟೆ ಕುಸಿದಿದೆ. ಬೆಳೆದ ಫಸಲನ್ನು ಮಾರುಕಟ್ಟೆಗೆ ವಾಹನ ಸಾಗಿಸಲು ಯಾವುದೇ ವಾಹನಗಳ ಮಾಲೀಕರು ಮುಂದಾಗುತ್ತಿಲ್ಲ. ಕರೊನಾ ಭೀತಿಯಿಂದ ಸರ್ಕಾರ ಮಾರಾಟ-ಖರೀದಿಗೆ ಅವಕಾಶ ನೀಡದಿರುವುದರಿಂದ ರೈತರು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ.
    ಪ್ರತಿ ವಾರ ಕನಿಷ್ಠ 20 ಚೀಲ (20 ಸಾವಿರ ಹಣ್ಣು) ಲಿಂಬೆಹಣ್ಣನ್ನು ಮಿನಿ ಲಾರಿಯಲ್ಲಿ ತುಂಬಿಕೊಂಡು ವಿಜಯಪುರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೀಗ ಖರೀದಿಸಿದ ಲಿಂಬೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಯಾವುದೇ ಟ್ರೇಡರ್ಸ್ ಲಿಂಬೆ ಖರೀದಿಸುತ್ತಿಲ್ಲ. ಇದರಿಂದ ಲಿಂಬೆಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಫಸಲನ್ನು ಸರ್ಕಾರ ಮಾರಾಟ ಹಾಗೂ ರಫ್ತಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬುದು ರೈತರ ಆಗ್ರಹವಾಗಿದೆ.
    ಸಂಗೊಂಡಪ್ಪ ಹಂಡಿ, ಬಾಳಪ್ಪ ಕುಮಸಿ, ಬಸಪ್ಪ ಮಾದರ, ರಾಜು ಸಣ್ಣಬೆಂಕಿ, ಬಸಪ್ಪ ಪಟ್ಟಣದ, ಮಲಕಪ್ಪ ಕುಮಸಿ ಸೇರಿದಂತೆ ನಂದಿಹಾಳ ಪಿಯು ಗ್ರಾಮದ ರೈತರ ಪೈಕಿ 100 ಎಕರೆ ಜಮೀನದಲ್ಲಿ ಲಿಂಬೆ ಬೆಳೆಯುತ್ತಿದ್ದು, ಇದೀಗ ಮಾರುಕಟ್ಟೆ ಸ್ಥಗಿತಗೊಂಡಿದ್ದರಿಂದ ಲಿಂಬೆ ಗಿಡದಲ್ಲೇ ಹಣ್ಣಾಗಿ ಕಳಚಿ ಬಿಳುತ್ತಿದೆ. ಕಷ್ಟಪಟ್ಟು ಬೆಳೆದ ಸಲು ಕಣ್ಮುಂದೆ ಹಾಳಾಗುತ್ತಿರುವುದು ರೈತರಿಗೆ ಕಣ್ಣೀರು ತರಿಸುತ್ತಿದೆ. ಸರ್ಕಾರ ರೈತರ ಕೈಹಿಡಿಯದಿದ್ದರೇ ರೈತರು ಸಾಲದ ಸುಳಿಯಲ್ಲಿ ಸಿಗುವುದು ಖಚಿತ. ಶೀಘ್ರವೇ ರೈತರ ಸಲು ಮಾರಾಟಕ್ಕೆ ಅನುಮತಿ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

    ಬಾಳೆ ಸಲಿನಲ್ಲೂ ರೈತರಿಗೆ ನಷ್ಟ

    ನಂದಿಹಾಳ ಪಿಯು ಗ್ರಾಮದ ಶ್ರೀಶೈಲ ಹಂಡಿ ಅವರು 5 ಲಕ್ಷ ರೂ. ಖರ್ಚು ಮಾಡಿ 3 ಎಕರೆ ಜಮೀನಿನಲ್ಲಿ ಜಿ 9 ಬಾ ಬೆಳೆದಿದ್ದು, ಇದೀಗ ಬಾಳೆಗೂ ಭರಪೂರ ಫಸಲು ಬಂದಿದ್ದು, ಕರೊನಾ ಭೀತಿಯಲ್ಲಿ ಗಿಡಕ್ಕೆ ಹಾಗೂ ರೈತನ ಜೀವನಕ್ಕೂ ಬಾಳೆ ಭಾರವಾಗಿದೆ.

    ಗಿಡಕ್ಕೆ ಭಾರವಾದ ಲಿಂಬೆ, ಬಾಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts