More

    ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಗೆಲುವಿನ ನಗೆ ಬೀರಿದ ಬಾಂಗ್ಲಾದೇಶ

    ಮೌಂಟ್ ಮೌಂಗನುಯಿ: ವೇಗ ಬೌಲರ್ ಇಬಾದತ್ ಹುಸೇನ್ (46ಕ್ಕೆ 6) ಮಾರಕ ದಾಳಿ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳಿಂದ ಜಯ ದಾಖಲಿಸಿತು. ಈ ಮೂಲಕ ಬಾಂಗ್ಲಾ ತಂಡ, ನ್ಯೂಜಿಲೆಂಡ್ ಎದುರು ಮೊದಲ ಟೆಸ್ಟ್ ಗೆಲುವಿನ ನಗೆ ಬೀರಿತು. ಅಲ್ಲದೆ, ಕಿವೀಸ್ ನೆಲದಲ್ಲಿ ಎಲ್ಲ ಮಾದರಿಯಿಂದ ಆಡಿದ 43 ಪಂದ್ಯಗಳಲ್ಲಿ ಬಾಂಗ್ಲಾ ಮೊದಲ ಗೆಲುವಿನ ನಗೆ ಬೀರಿತು.

    ಬೇ ಓವೆಲ್ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 147 ರನ್‌ಗಳಿಂದ ದಿನದಾಟ ಮುಂದುವರಿಸಿದ ನ್ಯೂಜಿಲೆಂಡ್ ತಂಡ 169 ರನ್‌ಗಳಿಗೆ ಸರ್ವಪತನ ಕಂಡಿತು. ದಿನದಾಟದಲ್ಲಿ 22 ರನ್ ಪೇರಿಸುವಷ್ಟರಲ್ಲಿ ಉಳಿದ 5 ವಿಕೆಟ್ ಕಳೆದುಕೊಂಡಿತು. ಬಳಿಕ ಕಿವೀಸ್ ನೀಡಿದ 40 ರನ್ ಗೆಲುವಿನ ಗುರಿ ನೀಡಿದ ಬಾಂಗ್ಲಾ ತಂಡ 16.5 ಓವರ್ 2 ವಿಕೆಟ್‌ಗೆ 42 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್ 328 ರನ್ ಪೇರಿಸಿದರೆ, ಕಿವೀಸ್ ತಂಡ 458 ರನ್‌ಗಳಿಸಿ 130 ರನ್ ಮುನ್ನಡೆ ಸಾಧಿಸಿತ್ತು. ಉಭಯ ತಂಡಗಳ ಎರಡನೇ ಪಂದ್ಯ ಭಾನುವಾರದಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

    ನ್ಯೂಜಿಲೆಂಡ್: 328 ಮತ್ತು 73.4 ಓವರ್‌ಗಳಲ್ಲಿ 169 (ರಾಸ್ ಟೇಲರ್ 40, ರಚಿನ್ ರವೀಂದ್ರ 16, ಟಸ್ಕಿನ್ ಅಹಮದ್ 36ಕ್ಕೆ 3, ಇಬಾದತ್ ಹುಸೇನ್ 46ಕ್ಕೆ 6). ಬಾಂಗ್ಲಾದೇಶ: 458 ಮತ್ತು 16, 5 ಓವರ್‌ಗಳಲ್ಲಿ 2 ವಿಕೆಟ್‌ಗೆ 42 (ನಜ್ಮುಲ್ ಶಾಂಟೋ 17, ಮೊಮಿನುಲ್ ಹಕ್ 13*, ಮುಶ್ಫಿಕರ್ ರಹೀಂ 5*, ಟಿಮ್ ಸೌಥಿ 21ಕ್ಕೆ 1, ಕೈಲ್ ಜೇಮಿಸನ್ 12ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts