More

    ರಾಜ್ಯಕ್ಕೆ ಬಂಗಾರಪ್ಪ ಕೊಡುಗೆ ಅಪಾರ

    ಶಿಕಾರಿಪುರ: ನಾಡಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ. ಅವರ ಅಕ್ಷಯ, ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ, ಉಚಿತ ವಿದ್ಯುತ್‌ನಂತಹ ಯೋಜನೆಗಳು ಜನತೆಗೆ ಅನುಕೂಲವಾಗಿದೆ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಹೇಳಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ಭಭಾವಿ ಸಭೆಯಲ್ಲಿ ಮಾತನಾಡಿ, ಬಂಗಾರಪ್ಪ ಬರಗಾಲದಲ್ಲಿ ರೈತರಿಗೆ ಉಚಿತ ಬಿತ್ತನೆ ಬೀಜ ನೀಡಿದ್ದರು. ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿದ್ದೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಜನಮನ ತಲುಪಿವೆ ಎಂದು ಹೇಳಿದರು.
    ಪಕ್ಷ ಕಟ್ಟಿದವರಲ್ಲಿ ಒಬ್ಬರಾದ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರನ್ನು ಬಿಜೆಪಿ ಕಡೆಗಣಿಸಿದೆ. ಸಿ.ಟಿ.ರವಿ, ಕರಡಿ ಸಂಗಣ್ಣ, ಪ್ರತಾಪ್ ಸಿಂಹ ಸೇರಿದಂತೆ ಹಲವು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡದೆ ವಂಚಿಸಲಾಗಿದೆ. ಇದರಿಂದ ಬಿಜೆಪಿ ಚುನಾವಣೆಯಲ್ಲಿ ಗಂಭೀರ ಪರಿಣಾಮ ಎದುರಿಸಲಿದೆ ಎಂದರು. ಪ್ರಮುಖರಾದ ಚುರ್ಚಿಗುಂಡಿ ರುದ್ರಗೌಡ, ರೋಷನ್, ಗೋಣಿ ಪ್ರಕಾಶ್, ಜಯಶ್ರೀ ಹೇಮರಾಜ್, ಕಮಲಮ್ಮ ಹುಲ್ಮಾರ್, ಮುಷೀರ್ ಅಹ್ಮದ್, ಅಸ್ಲಂ ಪಾಷಾ, ಮಂಜಾನಾಯ್ಕ ,ತಿಮ್ಮಣ್ಣ, ನಾಗರಾಜನಾಯ್ಕ, ಈಶಣ್ಣ, ಕೊಟ್ರೇಶಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts