More

    ಬಂಡೀಪುರದಲ್ಲಿ ಸಫಾರಿ ಸ್ಥಗಿತ

    ಗುಂಡ್ಲುಪೇಟೆ: ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಂಡೀಪುರದಲ್ಲಿ ಸಫಾರಿ ಸ್ಥಗಿತಗೊಳಿಸಲಾಗಿದ್ದು, ಸುತ್ತಮುತ್ತಲಿನ ರೆಸಾರ್ಟುಗಳನ್ನೂ ಬಂದ್ ಮಾಡಲಾಗಿದೆ.

    ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.15ರಿಂದ 22ರವರೆಗೆ ಬಂಡೀಪುರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದರು. ತಹಸೀಲ್ದಾರ್ ನಂಜುಂಡಯ್ಯ ಭಾನುವಾರ ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

    ಸುತ್ತಲಿನ ಕಂಟ್ರಿ ಕ್ಲಬ್, ಸರಾಯ್, ವಿಂಡ್ ಫ್ಲವರ್, ಜಂಗಲ್ ಲಾಡ್ಜ್ ಸೇರಿಸಸ ಪ್ರತಿಷ್ಠಿತ ರೆಸಾರ್ಟ್‌ಗಳಲ್ಲಿ ಗ್ರಾಹಕರಿಲ್ಲದಿರುವುದನ್ನು ಖಚಿತಪಡಿಸಿಕೊಂಡರು. ಯಾವುದೇ ರೆಸಾರ್ಟ್‌ಗಳಲ್ಲಿ ವಿದೇಶಿ ಅತಿಥಿಗಳು ಬುಕ್ಕಿಂಗ್ ಮಾಡಿದ್ದರೆ ಅವರು ಆಗಮಿಸಿದ್ದರಾ ಅಥವಾ ಇಲ್ಲವೇ ಎಂಬುದರ ಕುರಿತು ಮಾಹಿತಿ ನೀಡಬೇಕು. ಯಾವುದೇ ಮುಂಗಡ ಬುಕ್ಕಿಂಗ್ ಇದ್ದರೂ ಅವುಗಳನ್ನು ರದ್ದುಪಡಿಸಿ ಎಂದು ಮಾಲೀಕರಿಗೆ ತಾಕೀತು ಮಾಡಿದರು. ನಂತರ ಅರಣ್ಯ ಇಲಾಖೆಯ ಸಫಾರಿ ಕೌಂಟರ್‌ಗೆ ತೆರಳಿ ಪರಿಶೀಲಿಸಿದರು.

    ರಜಾ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಫಾರಿಗೆ ಆಗಮಿಸುವುದರಿಂದ ಸದಾ ಗಿಜಿಗಿಡುತ್ತಿದ್ದ ಟಿಕೆಟ್ ಕೌಂಟರ್ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. 23 ವರ್ಷಗಳ ಹಿಂದೆ 1997ರ ಅಕ್ಟೋಬರ್ 9ರಂದು ದಂತಚೋರ ವೀರಪ್ಪನ್ ಬಂಡೀಪುರದಿಂದ ಕೃಪಾಕರ ಹಾಗೂ ಡಾ.ಮತ್ರಿ ಅವರನ್ನು ಬಂಡೀಪುರದ ಹುಲಿಕಟ್ಟೆ ಸಮೀಪ ಅಪಹರಿಸಿದ್ದ ಸಂದರ್ಭದಲ್ಲಿ 2 ತಿಂಗಳು ಸಫಾರಿ ನಿಲ್ಲಿಸಲಾಗಿತ್ತು. ಇದನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ಒಂದು ವಾರಗಳ ಕಾಲ ಸಫಾರಿ ನಿರ್ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts