More

    ಡಿ.೧೧ ರಂದು ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ

    ಬಾಗಲಕೋಟೆ: ಕರ್ನಾಟಕ ರಾಜ್ಯ ಬಣಜಿಗರ ಕ್ಷೇಮಾಭಿವೃದ್ದಿ ಸಂಘದ ಬಾಗಲಕೋಟೆ ತಾಲೂಕಾ ಘಟಕದಿಂದ ಡಿ.೧೧ ರಂದು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ವಿಶೇಷ ಸಾಧಕರಿಗೆ, ಹಿರಿಯರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಆನಂದ ಜಿಗಜಿನ್ನಿ ಹೇಳಿದರು.


    ಬಾಗಲಕೋಟೆ ತಾಲೂಕಿನ ಬಣಜಿಗ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಪದವಿಯಲ್ಲಿ ಸ್ನಾತಕೋತ್ತರದಲ್ಲಿ ಬಂಗಾರದ ಪದಕ ಪಡೆದ ವಿದ್ಯಾರ್ಥಿಗಳಿಗೆ, ಡಾಕ್ಟರೇಟ್ ಪಡೆದ ಮಹನೀಯರನ್ನು ಸನ್ಮಾನಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಶೇ.೮೦ ಕ್ಕಿಂತ ಹೆಚ್ಚು ಅಂಕವನ್ನು ಪಡೆದಂತಹ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಬೇರೆ ಬೇರೆಯಾಗಿ ಪ್ರತಿ ವಿಭಾಗದಲ್ಲೂ ೩ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಬಣಜಿಗ ಸಮಾಜವು ಕಳೆದ ಎಂಟು ವರ್ಷಗಳಿಂದ ಪ್ರತಿಭಾ ಪುರಸ್ಕಾರ, ಶ್ರೇಷ್ಠ ಸಾಧಕರು, ಹಿರಿಯರನ್ನು ಸನ್ಮಾನಿಸುತ್ತಾ ಬಂದಿದ್ದು, ಕಳೆದ ಮೂರು ವರ್ಷ ಗಳಿಂದ ಕೋವಿಡ್ ಕಾರಣ ಯಾವುದೇ ಕಾರ್ಯಕ್ರಮಗಳು ಆಯೋಜನೆ ಮಾಡಿಲ್ಲ. ಈ ಬಾರಿ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೆರ್ಮೆನ್ ಡಾ.ವಿಜಯ ಸಂಕೇಶ್ವರ, ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ, ಅಶೋಕ ಶೆಟ್ಟರ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದ ಅತಿಥಿಗಳಾಗಿ ಆಹ್ವಾನಿಸಲಾಗಿದೆ ಎಂದರು.


    ಮುಂದಿನ ದಿನಗಳಲ್ಲಿ ಯುವ ಜನತೆ ಹಾಗೂ ಮಕ್ಕಳಲ್ಲಿ ಆಚಾರ ವಿಚಾರ, ಲಿಂಗಪೂಜೆ, ಸಂಸ್ಕಾರವನ್ನು ತಿಳಿಸುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ, ಕಾರ್ಯಾಗಾರ, ಶಿಬಿರಗಳನ್ನು ನಡೆಸಲಾಗುವುದು. ಪದವಿ ಪೂರ್ವ ಶಿಕ್ಷಣ ನಂತರ ಮುಂದೇನು ಎಂಬ ಗೊಂದಲಕ್ಕೀಡಾಗುವ ವಿದ್ಯಾರ್ಥಿಗಳಿಗೆ ಪ್ರಚಲಿತ ವಿವಿಧ ತರಬೇತಿ ಕಾರ್ಯಾಗಾರ, ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ, ಉದ್ಯಮಶೀಲತಾ ಕುರಿತಾದ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಶಕ್ತ ಸಮಾಜ ಬಾಂಧವರಿಂದ ಸಹಾಯ ಒದಗಿಸಲಾಗುವುದು ಎಂದು ತಿಳಿಸಿದರು.
    ಮುಖಂಡರಾದ ಮಲ್ಲಪ್ಪಣ್ಣಾ ಆರಬ್ಬಿ, ಬಸವರಾಜ ಶೀಲವಂತ, ಶರಣಪ್ಪ ಗುಳೇದ, ವಿಶ್ವಾನಾಥ ವೈಜಾಪುರ, ಮುರುಗೇಶ ಶಿವನಗುತ್ತಿ, ಬಸವರಾಜ ಸೊಬರದ, ರವಿ ಕುಮಟಗಿ, ವೀರಣ್ಣ ವಾಲಿಶೆಟ್ಟರ ಸೇರಿದಂತೆ ಮತ್ತಿತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts