More

    ಮೊಟ್ಟೆ ಬಿಲ್ -ವೇತನ ಶೀಘ್ರ ಪಾವತಿಸಿ

    ಬಾಗಲಕೋಟೆ: ಪ್ರತಿ ತಿಂಗಳು ೫ ನೇ ತಾರೀಕಿನ ಒಳಗಾಗಿ ವೇತನ ಪಾವತಿಸಬೇಕು, ಆರು ತಿಂಗಳು ಮುಂಚಿತವಾಗಿ ಮೊಟ್ಟೆ ಬಿಲ್ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
    ಪ್ರತಿಭಟನಾ ಮರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಅಂಗನವಾಡಿ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
    ಅಂಗನವಾಡಿ ನೌಕರರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನೌಕರರ ಅನೇಕ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು. ೪ ತಿಂಗಳ ತಡೆಯಾಗಿರುವ ವೇತನ ಕೂಡಲೇ ಪಾವತಿ ಮಾಡಬೇಕು, ೭ ತಿಂಗಳಿನಿಂದ ಅಂಗನವಾಡಿ ಕೇಂದ್ರದ ಬಾಡಿಗೆ ಹಣ ಪಾವತಿ ಮಾಡಿಲ್ಲ. ಕಟ್ಟಡ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ. ತಕ್ಷಣಕ್ಕೆ ಬಾಡಿಗೆ ಹಣ ಪಾವತಿ ಮಾಡಬೇಕು. ಪ್ರತಿ ತಿಂಗಳು ವೇತನ, ಬಾಡಿಗೆ ಹಣ ಹಾಕಬೇಕು. ಬಿಎಲ್‌ಒ ಕೆಲಸದಿಂದ ಅಂಗನವಾಡಿ ಕಾರ್ಯಕರ್ತರನ್ನು ಬಿಡಬೇಕು, ಹಳೇ ಮೊಬೈಲ್ ವಾಪಸ್ ಪಡೆದು ಹೊಸದು ನೀಡಬೇಕು, ಮೇ ತಿಂಗಳ ಬೇಸಿಗೆಯಲ್ಲಿ ಕೆಲಸ ನಿರ್ವಹಿಸಿದ ಗೌರವಧನ ಹಾಕಬೇಕು ಎಂದು ಆಗ್ರಹಿಸಿದರು.
    ಸಂಘಟನೆ ಜಿಲ್ಲಾಧ್ಯಕ್ಷೆ ಹನುಮಕ್ಕ ದಾಸರ, ರೇಣುಕಾ ಪೂಜಾರಿ, ಮಂಗಳಾ ಗಾಳಪೂಜಿಮಠ, ಶಾಂತಾ ಬಡಿಗೇರ, ಆರ್.ಎಸ್.ಸ್ವಾಮಿ, ಸಾವಕ್ಕ ಮೇಟಿ, ಗೌರಮ್ಮ ಕಡಪಟ್ಟಿ, ಅನ್ನಪೂರ್ಣ ಕಾಮರಡ್ಡಿ, ಶಂಕ್ರಮ್ಮ ಚೌವ್ಹಾಣ, ವಾಣಿಶ್ರೀ ಜೋಶಿ, ಚನ್ನಮ್ಮ ಬನ್ನಿದಿನ್ನಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts