More

    ಮೇಳದಲ್ಲಿ ಫಲ, ಪುಷ್ಪಗಳ ಘಮ ಘಮ !

    ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿರುವ ತೋಟಗಾರಿಕೆ ಮೇಳದಲ್ಲಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಮೇಳದಲ್ಲಿ ಫಲ, ಪುಷ್ಪಗಳ ಘಮಘಮ ವಾಸನೆ ಹೊಸ ಲೋಕವನ್ನೇ ಸೃಷ್ಟಿ ಮಾಡಿದೆ.

    ಅಂದಾಜು 6 ಸಾವಿರ ಗುಲಾಬಿ ಹಾಗೂ ಚೆಂಡು ಹೂವುಗಳಿಂದ ಅಲಂಕರಿಸಿರುವ ರಾಜ್ಯ ಲಾಂಛನ ಗಂಡ ಬೇರುಂಡ ಹಾಗೂ ತೋವಿವಿ ಆವರಣದಲ್ಲಿ ಬೆಳೆದಿರುವ ವಿವಿಧ ಅಲಂಕಾರಿಕ ಸಸಿಗಳನ್ನು ಬಳಸಿಕೊಂಡು ನಿರ್ಮಿಸಲಾಗಿರುವ ರಾಷ್ಟ್ರೀಯ ಪಕ್ಷಿ ನವಿಲು, ಕೋವಿಡ್-19 ವೈರಸ್ ಆಕಾರದ ಕಲಾಕೃತಿ ಆಕರ್ಷಿಸುತ್ತಿದೆ. ಪಪ್ಪಾಯ, ಏಳನೀರು, ಬಾಳೆ, ಮೇಣಸಿನಕಾಯಿ, ಟೊಮ್ಯಾಟೊ, ವಿಳ್ಳೆದೆಲೆ, ಚಿಕ್ಕು, ಜವಾರಿ ತಳಿಯ ಬಾಳೆ, ಸಾವಯವ ಬಾಳೆ, ಸ್ವೀಟ್ ಚಾರ್ಲಿ ಪಪ್ಪಾಯ, ಅರಿಶಿಣ, ಶುಂಠಿ, ಸೇವಂತಿ ಸೇರಿದಂತೆ ವಿವಿಧ ತಳಿಗಳ ಹಣ್ಣು ಮತ್ತು ಹೂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ರೈತರು, ಸಾರ್ವಜನಿಕರು ಭೇಟಿ ನೀಡುತ್ತಿದ್ದು, ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದಾರೆ.

    ಪ್ರದರ್ಶನಕ್ಕೆ ಚಾಲನೆ
    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮತ್ತು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ವಿವಿಧ ತರಹದ ಹಣ್ಣು ಹಾಗೂ ಹೂವುಗಳನ್ನು ವೀಕ್ಷಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಮೇಳದ ವೀಕ್ಷಣೆಗೆ ಆ್ಲೈನ್ ಮತ್ತು ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದ್ದು, ಸೀಮಿತ ಪ್ರಮಾಣದಲ್ಲಿ ಸಾರ್ವನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು, ರೈತರು ವಿವಿಯ ಜಾಲತಾಣಗಳ ಮೂಲಕ ಮೇಳ ವೀಕ್ಷಣೆ ಮಾಡಬೇಕು ಎಂದು ಕುಲಪತಿ ಕೆ.ಎಂ.ಇಂದಿರೇಶ ತಿಳಿಸಿದ್ದಾರೆ.

    ಕೋವಿಡ್ ಕಾರಣದಿಂದ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಚಿಕ್ಕದಾಗಿ ಏರ್ಪಡಿಸಲಾಗಿದೆ. ಆದರೆ, ರೈತರಿಗೆ ಉಪಯುಕ್ತವಾದ ಮಾಹಿತಿ ದೊರೆಯುವ ನಿಟ್ಟಿನಲ್ಲಿ ವಿವಿಧ ಹಣ್ಣಿನ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
    – ಮಹೇಶ ದಂಡನ್ನವರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ಅಧಿಕಾರಿ ಮುಧೋಳ

    ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಮೇಳ ನಡೆಯುತ್ತಿದೆ. ರೈತರಿಗೆ ಉಪಯುಕ್ತವಾಗಿರುವ ಮಾಹಿತಿ ಪ್ರದರ್ಶನದಲ್ಲಿ ಇಡಲಾಗಿದೆ. ಹಣ್ಣು, ಹೂವಿನ ತಳಿಗಳನ್ನು ರೈತರು ಜಮೀನಿನಲ್ಲಿ ಯಶಸ್ವಿಯಾಗಿ ಬೆಳೆಯಬೇಕು. ಅಂದಾಗ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ, ತೋವಿವಿ ವಿಜ್ಞಾನಿಗಳು ಪ್ರಯತ್ನಿಸಬೇಕು. ಲ್ಯಾಬ್ ಟೂ ಲ್ಯಾಂಡ್ ಆಗಬೇಕು.
    ಭೀಮಪ್ಪ ಗಡಾದ ಬೀಳಗಿ ರೈತ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts