More

  ಕೋಟೆನಗರಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕ

  ಬಾಗಲಕೋಟೆ: ಜಿಲ್ಲೆಯ ಜತೆ ಆರು ದಶಕಗಳ ಕಾಲ ಒಡನಾಟ ಹೊಂದಿದ್ದ ಪೇಜಾವರ ಮಠಾಧೀಶ ಶ್ರೀವಿಶ್ವೇಶ್ವರತೀರ್ಥ ಶ್ರೀಪಾದಂಗಳವರ ಸ್ಮಾರಕ ನಿರ್ಮಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಂ.ಬಿಂದು ಮಾಧವಾಚಾರ್ಯ ನಾಗಸಂಪಿಗೆ ಹೇಳಿದರು.

  ಬುಧವಾರ ಬೆಳಗ್ಗೆ ನವನಗರದ ಶ್ರೀಕೃಷ್ಣಮಠದಲ್ಲಿ ಆಯೋಜಿಸಲಾಗಿದ್ದ ಧನುರ ಮಾಸ ಕಾರ್ಯಕ್ರಮ, ಪೇಜಾವರಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಸಮಾರಾಧನೆ ಹೊತ್ತಿಗೆ ಸ್ಮಾರಕ ಕಾರ್ಯಗತಗೊಳಿಸಲಾಗುವುದು. ಮೃತಿಕಾ ಬೃಂದಾವನ, ಪ್ರತಿಮೆ, ಸ್ಮಾರಕ ನಿರ್ಮಾಣದ ಕುರಿತು ಯೋಚಿಸಲಾಗುವದು. ಶ್ರೀಮಠದ ಅನುಮತಿ ಪಡೆದು ಅವರ ಮಾರ್ಗದರ್ಶನದಂತೆ ಇದು ನಿರ್ಮಾಣವಾಗಲಿದೆ ಎಂದರು.

  ಅಖಿಲ ಭಾರತ ಮಾಧ್ವ ಮಹಾಮಂಡಳದ ಬಾಗಲಕೋಟೆ ಶಾಖೆಯ ಅಧ್ಯಕ್ಷ, ಹಿರಿಯ ವಕೀಲ ಕೆ.ಎಸ್.ದೇಶಪಾಂಡೆ ಮಾತನಾಡಿ, ಪೇಜಾವರ ಶ್ರೀಗಳು ಒಂದು ಜ್ಯೋತಿ ಇದ್ದಂತೆ. ಅದು ಪ್ರಖರವಾಗಿಯೂ ಉರಿಯುವ ಬೆಳಕು ಎಂದು ಬಣ್ಣಿಸಿದ ಅವರು, ಜನರ ಪ್ರೋತ್ಸಾಹ ಎಷ್ಟು ಸಿಗುತ್ತದೇ ಅಷ್ಟು ಸಮಾಜ ಸೇವೆ ಮಾಡುತ್ತೇನೆ ಎನ್ನುವ ಅರ್ಥದಲ್ಲಿ ನಾನು ಪ್ರಾಮಾಣಿಕ ಹಸು, ನೀವು ಹುಲ್ಲು ಹಾಕಿ ಮೇಯಿಸಿದಷ್ಟು ಹಾಲು ನೀಡುವೆ ಎಂದು ಶ್ರೀಗಳು ಹೇಳುತ್ತಿದ್ದರು. ಅವರ ಸಮಾಜಿಕ, ಧಾರ್ಮಿಕ ಕಾಳಜಿ ನಮಗೆಲ್ಲ ಮಾದರಿಯಾಗಿದೆ ಎಂದು ಸ್ಮರಿಸಿದರು.

  ಸಮಿತಿ ಗೌರವಾಧ್ಯಕ್ಷ ಸಿ.ಎನ್.ದಾಸ, ವಿದ್ಯಾಗಿರಿ ವಿಪ್ರ ಸಮಾಜದ ಮುಖಂಡ ಡಾ.ಪಿ.ವಿ.ದೇಸಾಯಿ, ವಿಜೇಂದ್ರಾಚಾರ್ಯ, ನವೀನಾಚಾರ್ಯ, ರಾಜಾಚಾರ್ಯ ತಾಳಿಕೋಟಿ, ಕೆ.ರಾಘವೇಂದ್ರರಾವ್, ಗಿರಿಯಾಚಾರ್, ಸಂತೋಷ ಗದ್ದನಕೇರಿ ಮತ್ತಿತರರು ಉಪಸ್ಥಿತಿದ್ದರು. ಗುರುರಾಜ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts