More

    ಐತೀರ್ಪು ಪ್ರಕಟಿಸಲು ಸೂಚನೆ

    ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಭೂ ಸ್ವಾಧೀನ ಪ್ರಕರಣಗಳಿಗೆ ಹೊಸ ಭೂ ಸ್ವಾಧೀನ ಕಾಯ್ದೆ ಅನ್ವಯ ಹೊರಡಿಸಿರುವ ಅಂತಿಮ ಅಧಿಸೂಚನೆಗಳಿಗೆ ತಕ್ಷಣವೇ ಅವಾರ್ಡ್ (ಐತೀರ್ಪು) ಪ್ರಕಟಿಸಬೇಕು ಎಂದು ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಆಯುಕ್ತ ಶಿವಯೋಗಿ ಕಳಸದ ಅಧಿಕಾರಿಗಳಿಗೆ ಸೂಚಿಸಿದರು.

    ನವನಗರದ ಯುಕೆಪಿಯ ಸಂಗಮ ಸಭಾಭವನದಲ್ಲಿ ಸೋಮವಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಹಾಗೂ ಪುನರ್ ವಸತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಭೂಸ್ವಾಧೀನ ಕಾಯ್ದೆ 2013 ರ ಪ್ರಕಾರ ಕಲಂ 11(1) ಪ್ರಾಥಮಿಕ ಅಧಿಸೂಚನೆ, ಕಲಂ 19(1) ಅಂತಿಮ ಅಧಿಸೂಚನೆ, ಪುನರ್ ವಸತಿ ಪುನರ್‌ನಿರ್ಮಾಣ ವ್ಯಾಪ್ತಿಯ ಬಾಕಿ ಪ್ರಕರಣಗಳು, ಐತೀರ್ಪು ರಚಿಸಲು ಬಾಕಿ ಇರುವ ಪ್ರಕರಣಗಳು ಕಲಂ18(1),ಕಲಂ 64 ಪ್ರಕರಣಗಳನ್ನು ಕೊಡಲೇ ಇತ್ಯರ್ಥಪಡಿಸಬೇಕು ಎಂದು ತಿಳಿಸಿದರು.

    ಬಾಗಲಕೋಟೆ, ಬೀಳಗಿ, ಜಮಖಂಡಿ, ಆಲಮಟ್ಟಿ, ನಾರಾಯಣಪುರ ಕಚೇರಿ ವ್ಯಾಪ್ತಿಯಲಿ ಬರುವ ಪುನರ್ವಸತಿ ಕೇಂದ್ರಗಳಲ್ಲಿ 76,717 ಹಕ್ಕುಪತ್ರಗಳನ್ನು ಹಂಚಿಕೆ ಮಾಡಿದ್ದು, ಬಾಕಿ ಇರುವ 14273 ಹಕ್ಕು ಪತ್ರಗಳನ್ನು 03 ತಿಂಗಳಲ್ಲಿ ನಿಯಮಾನುಸಾರ ಹಂಚಿಕೆ ಮಾಡಿ ಪ್ರಗತಿ ಸಾಧಿಸಬೇಕು ಎಂದು ನಿರ್ದೇಶನ ನೀಡಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ಉತಾರಗಳಲ್ಲಿ ಕೃ.ಭಾ.ಜ.ನಿ(ನಿ) ಹೆಸರು ದಾಖಲಿಸಲಾಗಿದೆ. ಈ ವರೆಗೆ 13595-08 ಎಕರೆಯಲ್ಲಿ ಕೃ.ಭಾ.ಜ(ನಿ) ಹೆಸರು ಸೇರ್ಪಡೆ ಮಾಡಲಾಗಿದೆ. ಉಳಿದ 2371-22 ಎಕರೆಯಲ್ಲಿ ಕೃ.ಭಾ.ಜ ಹೆಸರು ಕೂಡಿಸಬೇಕಿದ್ದು, ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಬರುವ ಪುನರ್ ವಸತಿ ಕೇಂದ್ರಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಸ್ಮಶಾನ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಈ ಸಂದರ್ಭದಲ್ಲಿ ಯುಕೆಪಿ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಉಪ ಮಹಾವ್ಯವಸ್ಥಾಪಕರು ಹಾಗೂ ವಿಶೇಷ ಜಿಲ್ಲಾಧಿಕಾರಿಗಳು ಮತ್ತು ಎಲ್ಲ ಭೂಸ್ವಾಧಿನಾಧಿಕಾರಿಗಳು, ಇಂಜಿನಿಯರಗಳು ಹಾಗೂ ಪುನರ್ವಸತಿ ಅಧಿಕಾರಿಗಳು ಉಪಸ್ಥಿತರಿದ್ದರು.

    ವಿವಿಧೆಡೆ ಕಳಸದ ಭೇಟಿ ಪರಿಶೀಲನೆ
    ಈಚೆಗೆ ಮುಧೋಳ ತಾಲೂಕಿನ ಯಡಹಳ್ಳಿ ಪುನರ್ವಸತಿ ಕೇಂದ್ರಕ್ಕೆ ಯುಕೆಪಿಯ ಆಯುಕ್ತ ಶಿವಯೋಗಿ ಕಳಸದ ಭೇಟಿ ನೀಡಿ ಚರಂಡಿ ಕಾಮಗಾರಿ ಪರಿಶೀಲನೆ ಮಾಡಿದರು. ಹೊಸ ಚರಂಡಿ ಮತ್ತು ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಜಮಖಂಡಿ ಹಾಗೂ ಮುಧೋಳ ತಹಸೀಲ್ದಾರ ಕಚೇರಿಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚುನಾವಣಾ ಆಯೋಗದಿಂದ ನೀಡಿರುವ ನಮೂನೆ 6, 7, 8, 8ಎಗಳ ಪರಿಷ್ಕರಣೆ ಬಗ್ಗೆ ಪರಿಶೀಲಿಸಿ ಜ.25 ರೊಳಗೆ ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಲು ತಹಸೀಲ್ದಾರರಿಗೆ ತಿಳಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts